September 6, 2026
ಬೆಳ್ತಂಗಡಿ

ಕೊಕ್ಕಡ ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

ಕೊಕ್ಕಡ ಗ್ರಾಮ ಶಕ್ತಿ ಕೇಂದ್ರ ಕಾರ್ಯಕರ್ತರ ಅಭ್ಯಾಸ ವರ್ಗವು ಶ್ರೀ ರಾಮ ಸೇವಾ ಮಂದಿರ ಕೊಕ್ಕಡದಲ್ಲಿ ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಪುವಾಜೆ ಅದ್ಯಕ್ಷತೆಯಲ್ಲಿ ನಡೆಯಿತು.ಬಿಜೆಪಿ ಗ್ರಾಮಸಮಿತಿ ಮಾಜಿ ಕಾರ್ಯದರ್ಶಿ ಸುಂದರ ಭಂಡಾರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಶಾಸಕ ಹರೀಶ್ ಪೂಂಜ ಉದ್ಘಾಟನ ಭಾಷಣ ಮಾಡಿ ಜನಸಂಘ ಕಾಲಘಟ್ಟದಿಂದ ಈ ವರೆಗೂ ಅನೇಕ ನಿಸ್ವಾರ್ಥ ಹಿರಿಯಕಾರ್ಯಕರ್ತರು ಕೊಕ್ಕಡದಲ್ಲೂ ಪಾರ್ಟಿ ಯನ್ನು ಕಟ್ಟಿ ಬೆಳೆಸಿದ್ದಾರೆ ನಮ್ಮಂತ ಯುವ ಕಾರ್ಯಕರ್ತರು ಪಾರ್ಟಿಯೊಂದಿಗೆ ನಾನು ಏನು? ಯಾಕೆ ಕೆಲಸ ಮಾಡಬೇಕು..ಎಂದು ಅರ್ಥಹಿಸಿಕೊಳ್ಳಲು ಅಭ್ಯಾಸವರ್ಗವನ್ನು ಉಪಯೋಗಿಸಿಕೊಳ್ಳಿ ಎಂದರು. ಬೆಳ್ತಂಗಡಿ ವಕೀಲ ಯತೀಶ್ ಪನೆಕ್ಕರ್, ಕಾರ್ಯಕರ್ತೆ ಶ್ರೀಮತಿ ಲಕ್ಷ್ಮಿ ಅಡೈ, ರಾಮಣ್ಣ ಗೌಡ ಕೇಚೋಡಿ, ಸೀತಾರಾಮ್ ಬೆಳಾಲು,. ಲೋಕಯ್ಯ ಗೌಡ ಕೆಂಪಮುದೆಲ್, ಸುಧಾಕರ್ ಲಾಯಿಲ ಭಾಗವಹಿಸಿದ್ದರು.

ಸಮಾರೋಪ ವೇದಿಕೆಯಲ್ಲಿ ತಾಲೂಕು ಅಭ್ಯಾಸವರ್ಗ ಸಂಚಾಲಕರು ಕೊರಗಪ್ಪ ಗೌಡ ಚಾರ್ಮಾಡಿ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ, ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಹಿರಿಯ ಮುಖಂಡರು ಕುಶಾಲಪ್ಪ ಗೌಡ ಪುವಾಜೆ ಉಪಸ್ಥಿತರಿದ್ದರು.ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯಿಲ, ಕೊಕ್ಕಡ ಬೂತ್ ಅಧ್ಯಕ್ಷ ಕಾರ್ಯದರ್ಶಿ ಗಳಾದ ಕಿರಣ್ ಬಳ್ತಿಮರ್. ರವಿಚಂದ್ರ ಪುಡಿಕೇತ್ತುರ್, ಶಶಿಕುಮಾರ್ ತಿಪ್ಪಮಾಜಲ್, ಶ್ರೀಧರ್ ಬಲಕ್ಕ, ಲಿಂಗಪ್ಪ ಕಡಿರ, ಭಾಸ್ಕರ್ ಶೆಟ್ಟಿಗಾರ್, ಕಿಶೋರ್ ಪೋಯ್ಯೋಲೆ, ಕೊಕ್ಕಡ ಪಂಚಾಯತ್ ಉಪಾಧ್ಯಕ್ಷರು ಸದಸ್ಯರು, ಸಿ. ಎ ಬ್ಯಾಂಕ್ ನಿರ್ದೇಶಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಯೋಗೀಶ್ ಆಳಂಬಿಲ ನಿರೂಪಿಸಿ. ಶ್ರೀಮತಿ ಪವಿತ್ರ ಸ್ವಾಗತಿಸಿ, ಬಿಜೆಪಿ ಗೀತೆಯನ್ನು ಶ್ರೀಮತಿ ಪ್ರಮೀಳಾ ಜಿ. ಹಾಡಿದರು. ಕಾರ್ಯಕರ್ತರು ಸಹಕರಿಸಿದರು.

Related posts

ಮುಂಡಾಜೆ ಕಾಡಾನೆ ಹಾವಳಿ ಕೃಷಿ ನಾಶ

Suddi Udaya

ಮೃತದೇಹ ಹೂತು ಹಾಕಿದ ಪ್ರಕರಣ: 17 ನೇ ಗುರುತಿನಲ್ಲಿ ಸಿಗದ ಅಸ್ಥಿಪಂಜರ

Suddi Udaya

ಬೆಳ್ತಂಗಡಿ: ಟ್ರಾಫಿಕ್, ಆರ್.ಟಿ.ಒ. ನಿಂದ ಶಾಲಾ ವಾಹನಗಳ ತಪಸಾಣೆ

Suddi Udaya

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾ ಯಾಗ: ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಆಹ್ವಾನ

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ವಾರ್ಷಿಕ ಸಭೆ: ನೂತನ ಸಮಿತಿ ರಚನೆ

Suddi Udaya

ಹ್ಯಾಂಡ್ ಬಾಲ್ ಪಂದ್ಯಾಟ: ಸಂತ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳ ಅದ್ಭುತ ಸಾಧನೆ, ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!