September 6, 2026
ಬೆಳ್ತಂಗಡಿ

ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.142.59 ಕೋಟಿ ವಾರ್ಷಿಕ ವ್ಯವಹಾರ, ರೂ.54 ಲಕ್ಷ ಲಾಭ, ಸದಸ್ಯರಿಗೆ 10% ಡಿವಿಡೆಂಟ್:ಸಹಕಾರಿ ಸಂಘದ ಪ್ರಗತಿಯ ಹಿಂದೆ ಸದಸ್ಯರ ಕೊಡುಗೆ ಅಪಾರ: ರಂಜನ್ ಜಿ ಗೌಡ

ಉಜಿರೆ: ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಅವರ ಅಧ್ಯಕ್ಷತೆಯಲ್ಲಿ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸೆ.7ರಂದು ನಡೆಯಿತು.

ವರದಿ ಸಾಲಿನಲ್ಲಿ ಸಂಘವು 1688 ಸದಸ್ಯರನ್ನು ಹೊಂದಿದ್ದು 2,21,05,718 ಕೋಟಿ ಪಾಲು ಬಂಡವಾಳ ಸಂಗ್ರಹ ವಾಗಿರುತ್ತದೆ. 26,77,01,956 ಕೋಟಿ ಠೇವಣಿ ಸಂಗ್ರಹಿಸಿ ಒಟ್ಟು 26,20,6972 ಕೋಟಿ ಸದಸ್ಯರು ಸಾಲ ಪಡೆದುಕೊಂಡಿದ್ದಾರೆ.ವರದಿ ಸಾಲಿನಲ್ಲಿ ಒಟ್ಟು 142.59 ಕೋಟಿ ವ್ಯವಹಾರ ನಡೆಸಿ ರೂ. 54,35,515ರಷ್ಟು ಲಾಭಗಳಿಸಿದೆ. ಸದಸ್ಯರಿಗೆ ಶೇ 10% ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಸಭೆಯಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕರಾದ ಕೆ. ಗಂಗಾದರ ಗೌಡ, ಎನ್ ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ. ಜಯಂತ್ ಗೌಡ ಗುರಿಪಳ್ಳ,ಸುಂದರ ಗೌಡ ಫುಡ್ಕೆತ್ತು, ಬಿ.ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ ಅಡ್ಕಡಿ, ಜಯಂತ್ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಬಂಗಾಡಿ, ಕೆ. ಸಂಜೀವ ಗೌಡ ಪಾಂಚಜನ್ಯ, ಶ್ರೀಮತಿ ಸರೋಜಿನಿ ವಿಜಯ, ಶ್ರೀಮತಿ ಚೇತನಾ ಚಂದ್ರಶೇಖರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ಮಂಡಿಸಿದರು.ಉಪಾಧ್ಯಕ್ಷ ಶಿವಕಾಂತ ಗೌಡ ಸ್ವಾಗತಿಸಿದರು. ನಿರ್ದೇಶಕ ದಾಮೋದರ ಗೌಡ ವಂದಿಸಿದರು. ವ್ಯವಸ್ಥಾಪಕ ನಿತಿನ್ ಗೌಡ ಕಾರ್ಯಕ್ರಮ ನಿರೂಪಿಸಿದರು, ಸಿಬಂದಿಗಳಾದ ನಿತಿನ್ ಗೌಡ, ದೀಕ್ಷಿತ್ ಗೌಡ, ಶ್ರೀಮತಿ ರೂಪಲತಾ ಗೌಡ, ಶ್ರೀಮತಿ ಭವ್ಯ ಗೌಡ, ಶ್ರೀನಾಥ್ ಗೌಡ, ಸುಧಾಕರ ಗೌಡ, ಜಿತೇಶ್ ಗೌಡ, ಶ್ರೀಮತಿ ಅಶ್ವಿತಾ, ಶ್ರೀಮತಿ ನಿಕಿಲಾ, ಪುಣ್ಯ, ನಿತ್ಯ ನಿಧಿ ಸಂಗ್ರಹಕರು ವಸಂತ ಗೌಡ, ಮಧುಕರ ಗೌಡ, ಪರಮೇಶ್ವರ ಗೌಡ, ವಿನೋದ್ ಗೌಡ, ಶ್ರೀಮತಿ ಲೀಲಾವತಿ ರಾಘವ ಗೌಡ, ಶಿವಾಜಿ ಗೌಡ, ಸುಜಯ್ ಗೌಡ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಹೇಮಾವತಿ, ರಾಜೇಂದ್ರ ಗೌಡ, ಶ್ರೀಮತಿ ಹರಿನಾಕ್ಷಿ ಸಹಕರಿಸಿದರು. 2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಮತ್ತು ಪಿ ಯು ಸಿ ಯಲ್ಲಿ ಶೇ 85ಕಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ,ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಧೈನಿಕ್ ಠೇವಣಿ ಸಂಗ್ರಾಹಕರನ್ನು ಗೌರವಿಸಲಾಯಿತು.

Related posts

ಉಸ್ಮಾನ್ ಗರ್ಡಾಡಿರವರು ಪ್ರಮುಖ ಅಗ್ನಿಶಾಮಕ ಹುದ್ದೆಗೆ ಪದೋನ್ನತಿಗೊಂಡು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ನಿಯುಕ್ತಿ

Suddi Udaya

ಮೇ 17ರಂದು ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ಪ್ರಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಂಭ್ರಮ’ ಮತ್ತು ಬಹುಭಾಷಾ ಕವಿಗೋಷ್ಠಿ’ ಎಂಬ ವಿನೂತನ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ: ಕಾಪಿನಡ್ಕ ಸ ಕಿ ಪ್ರಾ ಶಾಲೆಗೆ ಕಂಪ್ಯೂಟರ್ ಉಪಕರಣಗಳ ಹಸ್ತಾಂತರ

Suddi Udaya

ತ್ರೋಬಾಲ್ ಪಂದ್ಯಾಟ: ಸಂತ ತೆರೇಸಾ ಪ.ಪೂ. ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಕೊಕ್ಕಡ: ಸೆಲ್ಕೋ ಫೌಂಡೇಶನ್ ನಿಂದ 25 ಮಂದಿ ಅರ್ಹ ಫಲಾನುಭವಿಗಳಿಗೆ ಸೋಲಾರ್ ಕಿಟ್ ಗಳ ಹಸ್ತಾಂತರ

Suddi Udaya

ಕು.ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಒಪ್ಪಿಗೆ : ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Suddi Udaya
error: Content is protected !!