September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಗೀತೆ ಜತೆ ಸಾಹಿತ್ಯ ಸಾಂಗತ್ಯ

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಗೀತೆ ಜತೆ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆಯಿತು.

ಗೀತೆ ಜತೆ ಸಾಹಿತ್ಯ ಸಾಂಗತ್ಯ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಹದಿಮೂರನೇ ಅಧ್ಯಾಯ ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗದ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ಭಟ್ ಅಧ್ಯಕ್ಷರು ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಇವರು ನೀಡಿ ಭಗವದ್ಗೀತೆಯ 13 ನೇ ಅಧ್ಯಾಯ ದೇಹ ಮತ್ತು ಆತ್ಮ ಇವುಗಳ ನಡುವಿನ ವ್ಯತ್ಯಾಸವನ್ನು ವಿವರಿಸುವ ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗದಲ್ಲಿ ಪ್ರಕೃತಿ, ಪುರುಷ, ಜ್ಞಾನ ಮತ್ತು ಜ್ಞೇಯ , ಜ್ಞಾನದ ಸ್ವರೂಪ, ಮೋಕ್ಷದ ಮಾರ್ಗ, ಆತ್ಮದ ಸ್ವರೂಪದ ಬಗ್ಗೆ ಶ್ರೀ ಕೃಷ್ಣ ಭಗವಂತ ಅರ್ಜುನನಿಗೆ ನೀಡಿದ ವಿವರಣೆಯನ್ನು ಸಾಹಿತ್ಯದ ಅನೇಕ ಉದಾಹರಣೆಗಳೊಂದಿಗೆ ಮನ ಮುಟ್ಟುವಂತೆ ವಿವರಿಸಿದರು.

ಪತ್ರಕರ್ತರ ಮನೋಹರ ಬಳಂಜ ಅದ್ಯಕ್ಷತೆ ವಹಿಸಿ ಮಾತನಾಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ ಆಯೋಜಿಸಿರುವ ಗೀತೆ ಜತೆ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ..ಇಂತಹ ಕಾರ್ಯಕ್ರಮಗಳ ಅಗತ್ಯತೆಯನ್ನು ತಿಳಿಸಿ, ಇದರ ಪ್ರಯೋಜನವನ್ನು ಯುವಜನರು ಪಡೆಯುವಂತಾಗಲಿ ಎಂದರು.

ವಸಂತಿ ಕುಳಮರ್ವ ಕಾರ್ಯಕ್ರಮವನ್ನು ನಿರೂಪಿಸಿ, ಡಾ. ಶ್ರೀಧರ ಭಟ್ ವಂದಿಸಿದರು.ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಪಾಡಿಯ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಸಮಾರೋಪ ಕಾರ್ಯಕ್ರಮ

Suddi Udaya

ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಅಧ್ಯಕ್ಷರಾಗಿ ರಿತೇಶ್ ರೆಂಜಾಳ ಮತ್ತು ಕಾರ್ಯದರ್ಶಿಯಾಗಿ ಉದಯ ಮಾಚಾರ್ ಆಯ್ಕೆ‌

Suddi Udaya

ಬೆಳ್ತಂಗಡಿ ಸಂತ ಲಾರೆನ್ಸರ ಮಹಾದೇವಲಯದಲ್ಲಿ ಪಾಸ್ಕ ಹಬ್ಬದ ಆಚರಣೆ

Suddi Udaya

ವಿ.ಪ. ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ ಬಂದಾರು ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕ ಹರೀಶ್ ಪೂಂಜರಿಂದ ಮತಪ್ರಚಾರ

Suddi Udaya

ನಾರಾವಿ: ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

‘ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ’ ಯೋಜನೆಯಡಿಯಲ್ಲಿ ಪಡಂಗಡಿ ಜಾನ್ ಡಿ’ ಸೋಜ ರವರಿಗೆ ಚೆಕ್ ಹಸ್ತಾಂತರ

Suddi Udaya
error: Content is protected !!