27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೂಡುಬಿದಿರೆ: ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಹೂವಿನ ಪೂಜೆ

ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಹೂವಿನ ಪೂಜೆ ಎಡಪದವು ವೆಂಕಟೇಶ ತಂತ್ರಿಗಳ ನೇತೃತ್ವದಲ್ಲಿ ಸೆ.6ರಂದು ನಡೆಯಿತು.

ಬೆಳಗ್ಗೆ ಪುಣ್ಯಾಹ ವಾಚನ, ಗಣಪತಿ ಹೋಮ, ಪವಮಾನ ಹೋಮ ನಡೆಯಿತು. ಬಳಿಕ ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ನೇತೃತ್ವದಲ್ಲಿ ಮಧ್ಯಾಹ್ನ ವೀರಮಾರುತಿ ದೇವರಿಗೆ ವಿಶೇಷ ಹೂವಿನ ಪೂಜೆ, ಮಹಾಪೂಜೆ ನಡೆಯಿತು.

ಸಂಜೆ ಮಹಾರಂಗಪೂಜೆ ಬಳಿಕ ದೀಪಾರಾಧನೆ ಜರುಗಿತು. ಕಾರ್ಕಳ ಹಾಗೂ ಮೂಡುಬಿದಿರೆ ವಲಯ ಮಹಿಳಾ ಸಂಘದ ಸದಸ್ಯೆಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ದೇವಸ್ಥಾನದ ಆಡಳಿತ ಮೊಕೇಸರ ಶ್ಯಾಮ ಹೆಗ್ಡೆ, ಕಾರ್ಯದರ್ಶಿ ಅನಿಲ್ ಹೆಗ್ಡೆ ಹಾಗೂ ಮೊತ್ತೇಸರರು, ಜಿಲ್ಲಾ ಹೆಗ್ಗಡೆ ಸಂಘದ ಅಧ್ಯಕ್ಷ ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ, ಕಾರ್ಯದರ್ಶಿ ಶುಭರಾಜ್ ಹೆಗ್ಡೆ ಹಾಗೂ ಸದಸ್ಯರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಕಾರ್ಯದರ್ಶಿ ಲತಾ ಯು.ಹೆಗ್ಡೆ, ಮೂಡುಬಿದಿರೆ ವಲಯ ಮಹಿಳಾ ಘಟಕ ಅಧ್ಯಕ್ಷೆ ಉಷಾ ಕೆ.ಹೆಗ್ಡೆ, ಹೆಗ್ಗಡೆ ಸಂಘ ಮೂಡುಬಿದಿರೆ ವಲಯದ ಅಧ್ಯಕ್ಷ ಸದಾಶಿವ ಹೆಗ್ಡೆ, ಕಾರ್ಯದರ್ಶಿ ಜಯರಾಮ ಹೆಗ್ಡೆ, ವಿವಿಧ ವಲಯಗಳ ಅಧ್ಯಕ್ಷರು, ದೇವಸ್ಥಾನದ ಮಾಜಿ ಆಡಳಿತ ಮೊಕೇಸರ ಉದಯ ಕುಮಾರ್ ಹೆಗ್ಡೆ, ಸಂಘದ ಮಾಜಿ ಅಧ್ಯಕ್ಷ ನವೀನ್ ಹೆಗ್ಡೆ ಮತ್ತಿತರರಿದ್ದರು.

Related posts

ಬೈಕ್ ಅಪಘಾತ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅಶೋಕ ಕುಮಾರ್ ನಿಧನ

Suddi Udaya

ಜ.10-11: ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ನಾಗಬ್ರಹ್ಮಮಂಡಲೋತ್ಸವ

Suddi Udaya

ಅಳದಂಗಡಿ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘದಿಂದ ಕಿರಣ್ ಚಂದ್ರ ಪುಷ್ಪಗಿರಿ ರವರ ಭೇಟಿ

Suddi Udaya

ಧರ್ಮಸ್ಥಳ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಕಿ. ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya

ಉಜಿರೆ: ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!