September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾವಿನಕಟ್ಟೆ ಸಾಂತಾ ಆನ್ನಾ ಮಾತೆಯ ಚಚ್೯ ನಲ್ಲಿ ಸಂಭ್ರಮದ ತೆನೆ ಹಬ್ಬ

ಮಾವಿನಕಟ್ಟೆ ಸಾಂತಾ ಆನ್ನಾ ಮಾತೆಯ ಚಚ್೯ ನಲ್ಲಿ ಸಂಭ್ರಮದ ಸೆ.8 ರಂದು ಮೊಂತಿ (ತೆನೆ) ಹಬ್ಬವನ್ನು ಆಚಾರಿಸಲಾಯಿತು.


ಮೊಂತಿ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ತಮ್ಮ ವ್ಯಾಪ್ತಿಯ ಚರ್ಚ್ ಗಳಲ್ಲಿ ದಿವ್ಯ ಬಲಿ ಪೂಜೆಯನ್ನು ಪಾಲ್ಗೊಂಡು ತಮ್ಮ ಮನೆಗಳಲ್ಲಿ ಹೊಸ ಅಕ್ಕಿ ಕುಟುಂಬ ಸಮೇತರಾಗಿ ಊಟವನ್ನು ಸವಿದರು. 9 ದಿನಗಳ ನೊವೆನಾ ಆಚರಣೆಯಲ್ಲಿ ಪ್ರಾರ್ಥನೆ ಧ್ಯಾನ ಭಕ್ತಿಗೀತೆಗಳು ಹಾಗೂ ವಿಶೇಷ ಉದ್ದೇಶಕ್ಕಾಗಿ ಪ್ರಾರ್ಥನೆಯ ಸಲ್ಲಿಸಲಾಯಿತು. ಮೊಂತಿ ಹಬ್ಬದ ಕನ್ಯಾ ಮರಿಯಮ್ಮನಿಗೆ ಪ್ರಾರ್ಥನೆ, ಪ್ರಧಾನ ದಿವ್ಯ ಬಲಿ ಪೂಜೆಯನ್ನು ಫಾ.ಬರ್ನಾಡ್ ರೋಡ್ರಿಗಸ್ ತೆನೆ ಆಶೀರ್ವದಿಸಿ ಸಂದೇಶ ನೀಡಿದರು. ಶಿವಮೊಗ್ಗ ಧರ್ಮ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸುವ ಫಾ. ಫೆಡ್ರಿಕ್ ಕೋರೆಯ ಸಹಕರಿಸಿದರು.

ವಾಹನಗಳ ಆಶೀರ್ವಚನ ಹಬ್ಬದ ಪ್ರಯುಕ್ತ ಕುಟುಂಬಗಳಿಗೆ ತೆನೆ ವಿತರಣೆ ಹಾಗೂ ಪುಷ್ಪಾರ್ಪಣೆ ಸಲ್ಲಿಸಿದ್ದ ಪುಟಾಣಿ ಮಕ್ಕಳಿಗೆ ಹಾಗೂ ಎಲ್ಲರಿಗೂ ಕಬ್ಬು ಹಾಗೂ ಸಿಹಿ ತಿಂಡಿ. ಸ್ತ್ರೀ ಸಂಘ ದವರು ವಿತರಿಸಲಾಯಿತು.
ಆರ್ಥಿಕ ಧನ ಸಹಾಯ ಮಾಡಿದ ದಾನಿಗಳಿಗೆ ಮೇಣದಬತ್ತಿ ವಿತರಿಸಿ ಗೌರವಿಸಲಾಯಿತು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ ಆರ್ಥಿಕ ಸಮಿತಿ ಸದಸ್ಯರು ಗುರಿಕಾರರು , ಚರ್ಚ್ ಪಾಲನಾ ಮಂಡಳಿ ಸದಸ್ಯರು, ಮುಖಂಡರು ಸಹಕರಿಸಿದರು.

Related posts

ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ತೆಕ್ಕಾರಿನ ಗುರುಕಿರಣ್ ಆಯ್ಕೆ

Suddi Udaya

ಮಾಚಾರ್‌ ಖಿದ್ಮತ್ ಗ್ರೂಪ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಸಮಾಲೋಚನೆ ಸಭೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜು ಮತ್ತು ಎಸ್‌ಡಿಎಂ ಕ್ರೀಡಾ ಸಂಘದ ವತಿಯಿಂದ ಯೋಗ ಶಿಬಿರ ಉದ್ಘಾಟನೆ

Suddi Udaya

ಕಲ್ಮಂಜ : ಕಲ್ಲೆ ನಿವಾಸಿ ದೇವಕಿ ಕೊಳ್ತಿಗೆ ನಿಧನ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಪ್ರಶಸ್ತಿ

Suddi Udaya
error: Content is protected !!