31.1 C
ಪುತ್ತೂರು, ಬೆಳ್ತಂಗಡಿ
September 28, 2026
ತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಸಂತ ಅಂತೋನಿ ಚರ್ಚ್‌ನಲ್ಲಿ ತೆನೆ ಹಬ್ಬ (ಮೊಂತಿ ಹಬ್ಬ)

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಮೇರಿ ಮಾತೆಯ ಜನ್ಮ ದಿನವನ್ನು ಸೆ. 8ರಂದು ಮೊಂತಿ(ತೆನೆ ಹಬ್ಬ) ಹಬ್ಬವಾಗಿ ಆಚರಿಸಿದರು.

ಮೊಂತಿ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ತಮ್ಮ ವ್ಯಾಪ್ತಿಯ ಚರ್ಚ್‌ಗಳಲ್ಲಿ ಬಲಿಪೂಜೆ ಯಲ್ಲಿ ಪಾಲ್ಗೊಂಡು ತಮ್ಮ ಮನೆಗಳಲ್ಲಿ ಹೊಸ ಅಕ್ಕಿ ಕುಟುಂಬ ಸಮೇತರಾಗಿ ಊಟವನ್ನು ಸವಿದರು.
ಎಂಟು ದಿನಗಳ ನೊವೆನಾ ಆಚರಣೆ ಯಲ್ಲಿ ಪ್ರಾರ್ಥನೆ, ಭಕ್ತಿ ಗೀತೆಗಳು, ಧ್ಯಾನ ಹಾಗೂ ವಿಶೇಷ ಉದ್ದೇಶಗಳಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮೊಂತಿ ಹಬ್ಬದಂದು ಕನ್ಯಾ ಮರಿಯಮ್ಮನಿಗೆ ಪ್ರಾರ್ಥನೆ ,ಪ್ರಧಾನ ದಿವ್ಯ ಬಲಿಪೂಜೆಯನ್ನು ದಯಾಳ್ ಭಾಗ್ ಆಶ್ರಮದ ಧರ್ಮ ಗುರು ವಂ. ಫಾ. ಲ್ಯಾನ್ಸಿ ರೆಬೆಲ್ಲೊ ಅರ್ಪಿಸಿ ಸಂದೇಶ ನೀಡಿದರು. ಅಹಮದಾಬಾದ್ ಧರ್ಮ ಪ್ರಾಂತ್ಯದದಲ್ಲಿ ಸೇವೆ ಸಲ್ಲಿಸುವ ಉಜಿರೆ ಸುರ್ಯ ಮನೆಯ ವಂ. ಫಾ. ರೋಕ್ಕಿ ಪಿಂಟೊ, ಕಾರವಾರ ಧರ್ಮ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸುವ ಉಜಿರೆ ಹಲಕ್ಕೆ ಮನೆಯ ವಂ. ಫಾ. ವಲೇರಿಯನ್ ಸಿಕ್ವೆರಾ, ಚರ್ಚ್ ಪ್ರಧಾನ ಧರ್ಮ ಗುರು ವಂ. ಫಾ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೊ ಸಹಕರಿಸಿದರು.

ಅನುಗ್ರಹ ಸಭಾಂಗಣಕ್ಕೆ ನೂತನ ವಾಗಿ ನಿರ್ಮಿಸಿದ ಅಡುಗೆ ಕೋಣೆಯಾ ವಿಸ್ತರಣೆ ಯ ಆಶೀರ್ವಾಚನ, ವಾಹನ ಗಳ ಆಶೀರ್ವಾಚನ, ಎಸ್ ಎಸ್ ಎಲ್ ಸಿ ಯಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟೀನಾ ಮೆಮೋರಿಯಲ್ ಪ್ರಶಸ್ತಿ ಪುರಸ್ಕಾರ ಪಡೆದ ರಾಜ್ಯಕ್ಕೆ ದ್ವಿತೀಯ ಸ್ಥಾನ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶಾರನ್ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ಬಳಿಕ ಹಬ್ಬದ ಪ್ರಯುಕ್ತ ಕುಟುಂಬಗಳಿಗೆ ತೆನೆ ವಿತರಣೆ, ಪುಷ್ಪಾರ್ಪಣೆ ಸಲ್ಲಿಸಿದ ಪುಟಾಣಿಗಳಿಗೆ ಕಬ್ಬು ವಿತರಿಸಲಾಹಿತು. ಆರ್ಥಿಕ ಧನಸಹಾಯ ಮಾಡಿದ ದಾನಿಗಳಿಗೆ ಮೇಣದ ಬತ್ತಿ ವಿತರಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ, ಆರ್ಥಿಕ ಸಮಿತಿ ಸದಸ್ಯರು, ಗುರಿಕಾರರು, ಚರ್ಚ್ ಪಾಲನ ಮಂಡಳಿ ಸದಸ್ಯರು, ಮುಖಂಡರು ಸಹಕರಿಸಿದರು.

Related posts

ದ್ವಿತೀಯ ಪಿಯುಸಿ ಫಲಿತಾಂಶ: ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 69 ಫಲಿತಾಂಶ

Suddi Udaya

ನಿಡ್ಲೆ: 24 ನೇ ವರ್ಷದ ಕರುಂಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ಕಕ್ಯಪದವು : ಎಲ್ ಸಿ ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಉಚಿತ ಐಬಿಪಿಎಸ್ ಪರೀಕ್ಷಾ ತರಬೇತಿಗೆ ಅಧೀಕೃತ ಚಾಲನೆ:

Suddi Udaya

ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೂತನ ಅಧ್ಯಕ್ಷರಾಗಿ ಜನಾರ್ಧನ ಗೌಡ ಕುಳಾಯಿ ಕಾರ್ಯದರ್ಶಿಯಾಗಿ ಸುಂದರ್ ನಾಯ್ಕ್ ಕುಳಾಯಿ ಆಯ್ಕೆ

Suddi Udaya

ಬೆಳ್ತಂಗಡಿಯಲ್ಲಿ ಅನ್ವೇಷಣ ನೂತನ ಸಂಸ್ಥೆ ಶುಭಾರಂಭ

Suddi Udaya

ವಿ.ಹಿಂ.ಪ. ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಗ್ರಾಮ ಸಮಿತಿ ವತಿಯಿಂದ ಕಳೆಂಜ ಗೋಶಾಲೆಗೆ ಗೋವಿಗಾಗಿ ಮೇವು

Suddi Udaya
error: Content is protected !!