July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು ಸರಕಾರಿ ಪ್ರೌಢಶಾಲೆಯ ಭೌತಿಕ ಸೌಲಭ್ಯಕ್ಕೆ ರೋಟರಿ ಕ್ಲಬ್ ಸಿದ್ದಕಟ್ಟೆ ಇವರಿಂದ ಆರ್ಥಿಕ ನೆರವು

ವೇಣೂರು : ಸರಕಾರಿ ಪ್ರೌಢಶಾಲೆ ವೇಣೂರು ಕಳೆದ ವರ್ಷ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಹಿರಿಯ ವಿದ್ಯಾರ್ಥಿಗಳ ಊರ ಪರ ಊರ ದಾನಿಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿದೆ. ಶೈಕ್ಷಣಿಕ ಸಾಧನೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿದೆ. ಇದನ್ನು ಮನಗಂಡ ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆ ಇವರು ರೂ50,000 ದೇಣಿಗೆಯನ್ನು ನೀಡಿ ಸಹಕರಿಸಿರುತ್ತಾರೆ.

ರೋಟರಿ ಕ್ಲಬ್ ಇದರ ಅಧ್ಯಕ್ಷ ರೋ. ದುರ್ಗಾ ದಾಸ್ ಶೆಟ್ಟಿ ಚೆಕ್ಕನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭಾಸ್ಕರ್ ಪೈ ವೇಣೂರು ಹಾಗೂ ಶಾಲಾ ಉಪ ಪ್ರಾಂಶುಪಾಲರಾದ ವೆಂಕಟೇಶ ಎಸ್ ತುಳುಪುಳೆ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಕೋಶಾಧಿಕಾರಿ ರೋ. ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ನೆರವು ಪಡೆಯಲು ಸಹಕರಿಸಿದ ಶಿಕ್ಷಕ ರವೀಂದ್ರ ಕೆ ಇವರನ್ನು ಎಸ್. ಡಿ. ಎಮ್. ಸಿ ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

Related posts

ಆರ್.ಎಸ್.ಎಸ್ ಸಂಘಟನೆಗೆ ನೂರರ ಸಂಭ್ರಮ, ಬಡ ಕುಟುಂಬಕ್ಕೆ ಮನೆ ನಿರ್ಮಾಣ

Suddi Udaya

ಡಿ. 7 :ಪದ್ಮುಂಜದಲ್ಲಿ ಮ್ಯಾರಥಾನ್ ಯೋಗ ತರಬೇತಿ ಶಿಬಿರ

Suddi Udaya

ಪೆರಿಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶಶಿಪ್ರಭಾ ಬಿ ಅವರಿಗೆ ನಿವೃತ್ತಿ

Suddi Udaya

ಮಂಗಳೂರು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರ ಉದ್ಘಾಟನೆ

Suddi Udaya

ಮಲೆಬೆಟ್ಟು ಹಾ.ಉ.ಸ. ಸಂಘದ ಕಾಂಗ್ರೆಸ್ ಬೆಂಬಲಿತ ಸದಸ್ಯ ಉದಯ ಕುಮಾರ್ ಕೋಡಿಮಾರು ಬಿಜೆಪಿಗೆ ಸೇರ್ಪಡೆ

Suddi Udaya

ಲಾಯಿಲ: ಗಾಂಧಿನಗರದಲ್ಲಿ ರಸ್ತೆಕಾಮಗಾರಿ ಲೋಕಾರ್ಪಣೆ

Suddi Udaya
error: Content is protected !!