September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ ಆಟೋ-ಚಾಲಕರ ಸಂಘದ ವತಿಯಿಂದ ಸರ್ಪ ಸಂಸ್ಕಾರ ಪೂಜೆ

ಗೇರುಕಟ್ಟೆ : ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕ, ಮಾಲಕ ಸಂಘದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆ ನಡೆಯಿತು.

ಇತ್ತೀಚೆಗೆ ಪರಪ್ಪು-ಕೊಯ್ಯೂರು ಟಾರು ರಸ್ತೆಯಲ್ಲಿ ನಾಗರಹಾವು ವಾಹನದಡಿಗೆ ಬಿದ್ದು ಸಾವನ್ನಪ್ಪಿತು. ಇದನ್ನು ಗಮನಿಸಿದ ಗೇರುಕಟ್ಟೆ ಸ್ನೇಹ ಸಂಗಮ ಆಟೋ,ಚಾಲಕ, ಮಾಲಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರನ್ನು ಸೇರಿಸಿ ಕೊಂಡು ಸರ್ಪ ಸಂಸ್ಕಾರವನ್ನು ಮಾಡುವುದಾಗಿ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬಂದರು. ಅದರಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವೃತ್ತ ದಾರಿಯಾಗಿ ಚಾಲಕ ವಿನಯ ಗೌಡ ನೇತೃತ್ವದಲ್ಲಿ ಸೆ.12 ರಂದು ಪೂಜೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕೆ., ಮಾಜಿ ಅಧ್ಯಕ್ಷ ವಸಂತ ಶೆಟ್ಟಿ, ಚಾಲಕರಾದ ಗಣೇಶ್ ಕೆ.,ಓಬಯ್ಯ ಗೌಡ ,ತಾರನಾಥ ಬಿ.,ಶೇಖರ ಗೌಡ ಎಮ್.,ರಮೇಶ್‌ ಪೂಜಾರಿ,ಸಂದೀಪ್ ಪಿ.,ಕೀರ್ತಿ,ರೊನಾಲ್ಡೊ ಪಿಂಟೋ ಮತ್ತು ದಿಕ್ಷೀತ್ ಗೌಡ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

Suddi Udaya

ಜೂ. 24: ಪಟ್ರಮೆ ಹಾಗೂ ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ

Suddi Udaya

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ:ಆರೋಪಿಗೆ ನ್ಯಾಯಾಂಗ ಬಂಧನ

Suddi Udaya

ಆನೆ ಹಾವಳಿ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಜಯರಾಮ ನೆಲ್ಲಿತ್ತಾಯ ರವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya
error: Content is protected !!