September 6, 2026
ಗ್ರಾಮಾಂತರ ಸುದ್ದಿ

ಮಾಲಾಡಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ರೂ 1.0 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಾಲಾಡಿ ಗ್ರಾಮದ ಪೆರ್ಡೆ ಕ್ರಾಸ್ ನಿಂದ ಊರ್ಲ ಕಾಂಕ್ರೀಟೀಕರಣ ರಸ್ತೆ ಕಾಮಗಾರಿ ಉದ್ಘಾಟನೆ

ಮಾಲಾಡಿ : ಮಾಲಾಡಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ರೂ 1.0 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಾಲಾಡಿ ಗ್ರಾಮದ ಪೆರ್ಡೆ ಕ್ರಾಸ್ ನಿಂದ ಊರ್ಲ ಕಾಂಕ್ರೀಟೀಕರಣ ರಸ್ತೆ ಕಾಮಗಾರಿಯನ್ನು ಸೆ. 14 ರಂದು ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಾನು ಓರ್ವ ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಮಾಲಾಡಿ ಶಕ್ತಿ ಕೇಂದ್ರ ಮತ್ತು ಸಮಸ್ತ ನಾಗರಿಕರ ಪರವಾಗಿ ಶಾಸಕರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,ಮಡoತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜೋಯಲ್ ಮೆಂಡೋನ್ಸ, ಮಹಿಳಾ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತುಳಸಿ ಉಮೇಶ್, ಮಾಲಾಡಿ, ಸೋಣಂದೂರು ಶಕ್ತಿಕೇಂದ್ರ ಅಧ್ಯಕ್ಷರುಗಳಾದ ರಾಜೇಶ್ ಕೋಡ್ಯಲು, ದಿನೇಶ್ ಕರ್ಕೇರ, ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ ನಾಯಕ್,ಆಟೋ ಮಾಲಕ- ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು,ಮಾಜಿ ಪಂಚಾಯತ್ ಸದಸ್ಯರುಗಳು,ಮಡoತ್ಯಾರು ಸಿ ಎ ಬ್ಯಾಂಕ್ ಮತ್ತು ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳು, ಬೂತ್ ಅಧ್ಯಕ್ಷರುಗಳು ಕಾರ್ಯದರ್ಶಿಗಳು,ಪಕ್ಷದ ಅನ್ಯನ್ಯ ಜವಾಬ್ದಾರಿ ಇರುವ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ನಾಗರಿಕ ಬಂಧುಗಳು ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ‘ ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ‘ ಪ್ರಶಸ್ತಿ

Suddi Udaya

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯದಿಂದ ಮನೆ ದುರಸ್ತಿ ಕಾರ್ಯ

Suddi Udaya

ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ್ದೇ ರಸ್ತೆಯಲ್ಲೇ ಹರಿದ ನೀರು: ಬಂಗಾಡಿ ಸಿಎ ಬ್ಯಾಂಕ್ ಹಾಗೂ ಜೈನ ಬಸದಿ ವತಿಯಿಂದ ಪೈಪ್ ಅಳವಡಿಕೆ: “ಸುದ್ದಿ ಉದಯ ಜನಧ್ವನಿ Effect”

Suddi Udaya

ಸೌಜನ್ಯ ಕೊಲೆ ಪ್ರಕರಣ: ಮೊಗ್ರು, ಬಂದಾರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ಧರ್ಮಸ್ಥಳ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸಾರಿಗೆ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ವಾಣಿ ಆಂ.ಮಾ. ಪ್ರೌಢಶಾಲೆಯ ವಿದ್ಯಾರ್ಥಿ ಕು|ಧೃತಿ ಸಿ. ಗೌಡರಿಗೆ ಪ್ರಶಸ್ತಿ

Suddi Udaya
error: Content is protected !!