September 6, 2026
ವರದಿ

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಇತಿಹಾಸದಲ್ಲಿಯೇ ನಿರಂತರ 7ನೇ ಬಾರಿಗೆ 1 ಕೋಟಿ ರೂ.ಗೂ ಮಿಕ್ಕಿ ಲಾಭ ದಾಖಲೆ: ಸುಂದರ ಹೆಗ್ಡೆ ರೂ.1.86 ಕೋಟಿ ನಿವ್ವಳ ಲಾಭ,ಸದಸ್ಯರಿಗೆ ಶೇ.20 ಡಿವಿಡೆಂಟ್

ವೇಣೂರು: ಸಂಘವು 2024-25ನೇ ಸಾಲಿನಲ್ಲಿ ರೂ.1,86,50,423.61 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡು ನೀಡುತ್ತಿದ್ದೇವೆ. ಸಂಘವು ಇತಿಹಾಸದಲ್ಲಿಯೇ ನಿರಂತರ 7ನೇ ಬಾರಿಗೆ 1 ಕೋಟಿ ರೂ.ಗೂ ಮಿಕ್ಕಿ ಲಾಭ ಗಳಿಸಿ ದಾಖಲೆ ನಿರ್ಮಿಸಿರುವುದಕ್ಕೆ ಸಂತೋಷಪಡುತ್ತೇನೆ ಎಂದು ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ಬಿಇ ಹೇಳಿದರು.

ಅವರು ಸೆ. 14 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ನಡೆದ ವೇಣೂರು ಸಿಎ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ವಾರ್ಷಿಕ ವ್ಯವಹಾರದಲ್ಲಿ ಗಣನೀಯ ಹೆಚ್ಚಳವಾಗಿದ್ದು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಲಾಭ ಗಳಿಸುವತ್ತ ಮುನ್ನಡೆಯಲು ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸಿ ಸಹಕಾರ ನೀಡಬೇಕೆಂದು ಎಂದರು.

ಮಹಾಸಭೆಯಲ್ಲಿ ಸಹಕಾರಿ ಸಂಘದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಅಭಿವೃದ್ಧಿ ಪರ ಚರ್ಚೆಗಳು ನಡೆಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರತ್ನಾಕರ ಬಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ,ನಿರ್ದೇಶಕರಾದ ರಾಮ್ ದಾಸ್ ನಾಯಕ್,ಸಂದೀಪ್ ಹೆಗ್ಡೆ,ಎಂ.ಆರ್ ಸಂತೋಷ್,ನಾಗಪ್ಪ,ಶ್ರೀಮತಿ ಆಶಾ, ಶ್ರೀಮತಿ ರೋಹಿಣಿ,ಕೃಷ್ಣಪ್ಪ ಮೂಲ್ಯ, ಪ್ರಶಾಂತ್,ರಾಜು ನಾಯ್ಕ,ಪ್ರವೀಣ್ ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಭರತ್ ರಾಜ್ ಕೆ,ಶ್ರೀಮತಿ ಗೀತಾ,ಶ್ರೀಮತಿ ದಿವ್ಯ ಕೆ,ಶ್ರೀಮತಿ ರಮ್ಯ ಪಿ ಜೈನ್,ಶ್ರೀನಿಧಿ ಭಟ್,ಚಂದ್ರಶೇಖರ ಪಿ,ಭಾಗ್ಯನಿಧಿ ಠೇವಣಿ ಏಜೆಂಟ್ ಅಜಿತ್ ಕುಮಾರ್ ಜೈನ್ ಹಾಗೂ ಸಂಘದ ಸದಸ್ಯರು ಸಹಕರಿಸಿದರು.

Related posts

ಪೆರೋಡಿತ್ತಾಯಕಟ್ಟೆ ಸ. ಉ. ಪ್ರಾ. ಶಾಲಾ ಮೂವರು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಶಿಶಿಲ: ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದ ವಾರ್ಷಿಕೋತ್ಸವ: ನಿವೃತ್ತ ಕೆ.ಜಯ ಕೀರ್ತಿ ಜೈನ್ ರವರಿಗೆ ಸನ್ಮಾನ

Suddi Udaya

ಅಂತರ್ ಕಾಲೇಜು ಪ.ಪೂ. ವಿದ್ಯಾರ್ಥಿಗಳ “ಯುನಿಟಸ್ 2023” : ಪ್ರಸನ್ನ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮ ಸಮಿತಿಯ ತ್ರೈಮಾಸಿಕ ಸಭೆ ಹಾಗೂ ವನಮಹೋತ್ಸವ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕಾಯರ್ತಡ್ಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರಿಗೆ ಸನ್ಮಾನ

Suddi Udaya

ಮೈರೋಳ್ತಡ್ಕ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಒಕ್ಕೂಟದ ಸದಸ್ಯರಿಂದ ಬಂದಾರು ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ

Suddi Udaya
error: Content is protected !!