23.3 C
ಪುತ್ತೂರು, ಬೆಳ್ತಂಗಡಿ
March 7, 2026
ಪ್ರಮುಖ ಸುದ್ದಿವರದಿ

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ರೈತ ಸದಸ್ಯರ ಅವಶ್ಯಕತೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ: ಎನ್ ಸುಧಾಕರ ಭಂಡಾರಿ ರೂ 272.37 ಕೋಟಿ ವ್ಯವಹಾರ,ರೂ. 89 ಲಕ್ಷ ಲಾಭ, ಸದಸ್ಯರಿಗೆ ಶೇ 12 ಡಿವಿಡೆಂಟ್

ನಾರಾವಿ: ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಸಂಘವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ವರ್ಷಾಂತ್ಯದಲ್ಲಿ ಸಂಘವು ರೂ. 28.76 ಕೋಟಿ ಠೇವಣಿ ಹೊಂದಿರುತ್ತದೆ. ವರದಿ ಸಾಲಿನಲ್ಲಿ ರೂ. 272.37 ಕೋಟಿ ಒಟ್ಟು ವ್ಯವಹಾರ ಮಾಡಲಾಗಿದೆ. ನಮ್ಮ 5 ಗ್ರಾಮಗಳ ಸಹೃದಯಿ ಸದಸ್ಯ ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿರುವುದರಿಂದ 2024-25ನೇ ಸಾಲಿನಲ್ಲಿ ಸಂಘವು ರೂ 0.89 ಲಕ್ಷ ಲಾಭ ಗಳಿಸಲು ಸಹಕಾರಿಯಾಯಿತು.ಸದಸ್ಯರಿಗೆ ಶೇ.12 ನೀಡಲಾಗುವುದು ಎಂದು ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಹೇಳಿದರು.

ಅವರು ಸೆ. 14ರಂದು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ನಡೆದ ನಾರಾವಿ ಸಿಎ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘವು ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆದುಕೊಂಡಿರುತ್ತದೆ. ಅದೇ ರೀತಿ ವರದಿ ಸಾಲಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನಿಂದ 100% ಸಾಲ ವಸೂಲಾತಿಗಾಗಿ ಸಾಧನಾ ಪ್ರಶಸ್ತಿಯನ್ನು ಸಂಘವು ಪಡಕೊಂಡಿರುತ್ತದೆ ಎಂದರು.ರೈತ ಸದಸ್ಯರು ಸಂಘದ ಅಭಿವೃದ್ಧಿ ಹಾಗೂ ಅನುಕೂಲಗಳ ಬಗ್ಗೆ ಚರ್ಚಿಸಿದರು.

ವೇದಿಕೆಯಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್,ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಹೆಗ್ಡೆ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ಶಶಿಕಾಂತ್ ಜೈನ್,ನಿರ್ದೇಶಕರಾದ ಸದಾನಂದ ಗೌಡ,ವಿಠಲ ಪೂಜಾರಿ,ರಾಜೇಂದ್ರ ಕುಮಾರ್,ಕೃಷ್ಣಪ್ಪ ಪೂಜಾರಿ,ಉಮೇಶ್ ಎಂ.ಕೆ,ಶೇಖರ,ಶ್ರೀಮತಿ ಯಶೋಧ,ಶ್ರೀಮತಿ ಸುಜಲತಾ,ಶ್ರೀಮತಿ ಪದ್ಮಶ್ರೀ,ಶ್ರೀಮತಿ ಸುಪ್ರಿಯಾ ಉಪಸ್ಥಿತರಿದ್ದರು.ಸಿಬ್ಬಂದಿಗಳಾದ ಶ್ರೀಮತಿ ವನಿತಾ,ಶೇಖರ ಕೆ,ಶ್ರೀಮತಿ ಮಲ್ಲಿಕಾ,ಶ್ರೇಯಾಂಸ ಕುಮಾರ್,ಅಶೋಕ,ಪೂಜಿತ್ ಎನ್,ಶ್ರೀಮತಿ ರೇಷ್ಮಾ ಜಿ ಹಾಗೂ ಸದಸ್ಯರು ಸಹಕರಿಸಿದರು.

Related posts

ಕರಾಯ: ನೀರು ಕುಡಿಯುವ ನೆಪದಲ್ಲಿ ಮನೆಯೊಳಗೆ ಬಂದು ಮಹಿಳೆಯ ಚಿನ್ನಾಭರಣ ದೋಚಿ ಪರಾರಿ

Suddi Udaya

ರೆಖ್ಯ: ನಾರಾಯಣ ಕುಲಾಲ್ ನಿಧನ

Suddi Udaya

ಬೆಳ್ತಂಗಡಿ: ಬಜರಂಗದಳ ಸಂಘಟನೆ ಹಾಗೂ ಶರಣ್ ಪಂಪುವೆಲ್ ರವರ ಮೇಲೆ ಅವಮಾನಕರ ಪೋಸ್ಟ್ ಮತ್ತು ವಿಡೀಯೋ ಹಾಕಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ

Suddi Udaya

ಮಾಲಾಡಿ ಗ್ರಾ.ಪಂ ನೂತನ ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಸದಸ್ಯ ವಸಂತ ಪೂಜಾರಿ ಕಾಂಗ್ರೇಸ್ ಸೇರ್ಪಡೆ

Suddi Udaya

ಉಜಿರೆ: ಎಸ್.ಡಿ.ಎಂ ವಸತಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ

Suddi Udaya

72 ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನಾರಾವಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿರುವ ಎನ್.ಶಶಿಕಾಂತ್ ಜೈನ್ ಅವರಿಗೆ ಕಾಯಕ ದೀಕ್ಷಾಮಣಿ ಪ್ರಶಸ್ತಿ

Suddi Udaya
error: Content is protected !!