September 6, 2026
ತಾಲೂಕು ಸುದ್ದಿಬೆಳ್ತಂಗಡಿ

ಮಾಲಾಡಿ: ಪೆರ್ಡೆ ಕ್ರಾಸ್ – ಊರ್ಲ ರಸ್ತೆ ಶಾಸಕ ಹರೀಶ್ ಪೂಂಜರಿಂದ ಲೋಕಾರ್ಪಣೆ

ಮಾಲಾಡಿ: ಮಾಲಾಡಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ರೂ.1ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಾಲಾಡಿ ಗ್ರಾಮದ ಪೆರ್ಡೆ ಕ್ರಾಸ್ ನಿಂದ ಊರ್ಲ ಕಾಂಕ್ರೀಟೀಕರಣ ರಸ್ತೆ ಕಾಮಗಾರಿಯನ್ನು ಸೆ.14 ರಂದು ಶಾಸಕ ಹರೀಶ್ ಪೂಂಜರವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಾನು ಓರ್ವ ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಮಾಲಾಡಿ ಶಕ್ತಿ ಕೇಂದ್ರ ಮತ್ತು ಸಮಸ್ತ ನಾಗರಿಕರ ಪರವಾಗಿ ಶಾಸಕರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,ಮಡoತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜೋಯಲ್ ಮೆಂಡೋನ್ಸ, ಮಹಿಳಾ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತುಳಸಿ ಉಮೇಶ್, ಮಾಲಾಡಿ, ಸೋಣಂದೂರು ಶಕ್ತಿಕೇಂದ್ರ ಅಧ್ಯಕ್ಷರುಗಳಾದ ರಾಜೇಶ್ ಕೋಡ್ಯಲು, ದಿನೇಶ್ ಕರ್ಕೇರ, ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ ನಾಯಕ್,ಆಟೋ ಮಾಲಕ- ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು,ಮಾಜಿ ಪಂಚಾಯತ್ ಸದಸ್ಯರುಗಳು, ಮಡoತ್ಯಾರು ಸಿ ಎ ಬ್ಯಾಂಕ್ ಮತ್ತು ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳು, ಬೂತ್ ಅಧ್ಯಕ್ಷರುಗಳು ಕಾರ್ಯದರ್ಶಿಗಳು,ಪಕ್ಷದ ಅನ್ಯನ್ಯ ಜವಾಬ್ದಾರಿ ಇರುವ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ನಾಗರಿಕ ಬಂಧುಗಳು ಉಪಸ್ಥಿತರಿದ್ದರು.

Related posts

ವಿದ್ವತ್ ಪಿಯು ಕಾಲೇಜಿನಲ್ಲಿ ಸುನೀತ ವಿಲಿಯಮ್ಸ್ ರವರಿಗೆ ಗೌರವ ಸಮರ್ಪಣೆ

Suddi Udaya

ಕಕ್ಕಿಂಜೆ : ಬೀಟಿಗೆ ಹಯಾತುಲ್ ಇಸ್ಲಾಂ ಮದರಸದ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಡಿ.ಕೆ

Suddi Udaya

ಎಸ್‌ಡಿಎಂ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಮತ್ತು ಸಂಸ್ಥಾಪನ ದಿನಾಚರಣೆ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಇತಿಹಾಸ ಪ್ರಸಿದ್ಧ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ 20ನೇ ವಷ೯ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಯೋಧರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕಾಂಗ್ರೇಸ್ ಪಕ್ಷದ ಚುನಾವಣಾ ಕಛೇರಿಯ ಉದ್ಘಾಟನೆ

Suddi Udaya
error: Content is protected !!