22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಾಜಕೇಸರಿ ಸೇವಾ ಟ್ರಸ್ಟ್ ನ ನೂತನ ಲಾಂಛನ ಬಿಡುಗಡೆ

ಬೆಳ್ತಂಗಡಿ: ರಾಜಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ನೂತನ ಲಾಂಛನ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ಕ್ಷೇತ್ರದ ಅರ್ಚಕ ಬಾಲಚಂದ್ರ ಐತಾಳ್ ರವರು ನೂತನ ಲಾಂಛನವನ್ನು ಬಿಡುಗಡೆಗೊಳಿಸಿ ಶ್ರೀದೇವಿಯು ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಸಂಸ್ಥೆಯ ಈವರೆಗಿನ ಸೇವಾ ಕಾರ್ಯ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು. ಬಡ ನಿರ್ಗತಿಕರಿಗೆ ಸೂರು ಒದಗಿಸುವ “ಆಸರೆ ಯೋಜನೆ” ಮತ್ತು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ “ಸ್ವಚ್ಛಾಲಯ ಅಭಿಯಾನ” ಗಳ ಬಗ್ಗೆ ಸಂಸದರು ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಮುಕ್ತಕಂಠದಿಂದ ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆಯ ಜನಪರ ಕಾರ್ಯ ಯೋಜನೆಗಳಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ದ.ಕ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ , ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಸತೀಶ್ ಕಂಗಿತ್ತಿಲು ಹಾಗೂ ಪದಾಧಿಕಾರಿಗಳಾದ ಗುರುಪ್ರಸಾದ್ ಕುಲಾಲ್, ಲೋಕೇಶ್ ಮಂಗಳಾದೇವಿ, ವರುಣ್ ಕುಮಾರ್ ಬಪ್ಪನಾಡು, ಮನೋಜ್ ಕುಂದರ್, ಪ್ರವೀಣ್ ಕುಲಾಲ್, ಸಂದೀಪ್ ಬೆಳ್ತಂಗಡಿ, ವಿನೋದ್ ಲಾಯಿಲಾ, ಸಂದೇಶ್ ,ಶರತ್ ಕರಾಯ ಮತ್ತು ಸಂತೋಷ್ ಉಜಿರೆ ಉಪಸ್ಥಿತರಿದ್ದರು.

Related posts

ಸವಣಾಲು ಬೊಲ್ಲೊಟ್ಟುಗುತ್ತು ನಿವಾಸಿ, ಲಯನ್ಸ್ ಕ್ಲಬ್‌ ಮಾಜಿ ಅಧ್ಯಕ್ಷ ಲ| ಬಿ. ರಘುರಾಮ ಗಾಂಭೀರ ನಿಧನ

Suddi Udaya

ಮುಂಡಾಜೆ : ಸಿಡಿಲು ಬಡಿದು ಮನೆಗೆ ಹಾನಿ, ಅಪಾರ ನಷ್ಟ

Suddi Udaya

ಬೆಳ್ತಂಗಡಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ, ಹೊಗೆ ರಹಿತ ವಾಹನ ನಿರ್ಮಲ ಪರಿಸರದ ಜೀವನ ಬಗ್ಗೆ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ರಂಗಕಲೆಗಳ ಸ್ವರೂಪ ಕಾರ್ಯಕ್ರಮ

Suddi Udaya

ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ. 7 ಡಿವಿಡೆಂಟ್

Suddi Udaya

ಕರಾಟೆ ಪಂದ್ಯಾಟ: ಹೋಲಿ ರಿಡೀಮರ್ ಶಾಲೆಯ ವಿದ್ಯಾರ್ಥಿ ಶಮಂತ್ ತೃತೀಯ

Suddi Udaya
error: Content is protected !!