September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೊಗ್ರು ಸ.ಕಿ.ಪ್ರಾ. ಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ

ಮೊಗ್ರು: ಶಿಕ್ಷಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಯೋಗಾಸನ ಸ್ಪರ್ಧೆಯ ಆಸನಗಳ ಆಯ್ಕೆ ಹಾಗೂ ತೀರ್ಪುಗಾರಿಕೆಗೆ ಯೋಗ ಶಿಕ್ಷಕರಿಗೆ ಹಾಗೂ ತೀರ್ಪುಗಾರರಿಗೆ ಪ್ರತಿವರ್ಷ ಕಾರ್ಯಾಗಾರ ನಡೆಸುವುದು ಅಗತ್ಯ ಎಂದು ರಾಜ್ಯ ಯೋಗ ತೀರ್ಪುಗಾರರು, ಅಜಿತ್ ಕುಮಾರ್ ಕೊಕ್ರಾಡಿ ಅಭಿಪ್ರಾಯ ಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರುನಲ್ಲಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮುಗೇರಡ್ಕ ಮೊಗ್ರು ಇದರ ಪ್ರಾಯೋಜಕತ್ವದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಸ್ಥಾಪಕಧ್ಯಕ್ಷ, ಯೋಗ ಗುರು ಕುಶಾಲಪ್ಪ ಗೌಡ ನೆಕ್ಕರಾಜೆ ಮಾತನಾಡಿ ಋಷಿ ಪರಂಪರೆಯ ಯೋಗ ವಿದ್ಯೆ ಮಹರ್ಷಿ ಪತಂಜಲಿ ಸೂತ್ರದಂತೆ ನಿತ್ಯ ಜೀವನವು ಯೋಗದ ಜೀವನ ಶೈಲಿಯಾಗಬೇಕು, ಆ ಮೂಲಕ ಸ್ಥಿತ ಪ್ರಜ್ಞೆ ಸಾಧಿಸಿದಾಗ ಜೀವನ ಸಾಧನೆಗೆ ಯೋಗಾಭ್ಯಾಸ ಸಹಕಾರಿಯಾಗುತ್ತದೆ ಎಂದರು.

ಬೆಳ್ತಂಗಡಿ ತಾಲೂಕು ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ಸುಜಯಾ ಮಾತನಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸ್ಪರ್ಧೆಗಳು ಅಗತ್ಯ. ಯೋಗಾಭ್ಯಾಸ ಸ್ಪರ್ಧೆಗೆ ಸೀಮಿತವಾಗಿರದೆ ನಿತ್ಯ ಜೀವನದಲ್ಲಿ ಆರೋಗ್ಯ ಪಡೆಯಲು ಸಹಕಾರಿ ಎಂದರು. ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ) ಮೊಗ್ರು ಟ್ರಸ್ಟಿಗಳಾದ ನಿವೃತ್ತ ಪೊಲೀಸ್ ಅಧಿಕಾರಿ ಬಾಬುಗೌಡ ಸಂಪತ್ತು ನಿಲಯ ಹಾಗೂ ನಾಟಿ ವೈದ್ಯ ಕೃಷ್ಣಪ್ಪ ಗೌಡ ಮನ್ನುಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಶ್ರೀಮತಿ ಪ್ರಜ್ಞಾ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮ್, ಮೊಗ್ರು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ ಅರ್ಬಿ, ಶ್ರೀಕ್ಷೇತ್ರ ಮುಗೇರಡ್ಕ ದ ಮೊಕೇಸರ ಚಂದ್ರಹಾಸ ದೇವಸ್ಯ, ಟ್ರಸ್ಟಿನ ಕೋಶಾಧಿಕಾರಿ ಪುರಂದರ ಗೌಡ ನ್ಯಾಮಾರು ಉಪಸ್ಥಿತರಿದ್ದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಮುಖ್ಯೋಪಾಧ್ಯಾಯ (ಪ್ರಭಾರ) ಮಾಧವ ಗೌಡ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ದಿವ್ಯ ಧನ್ಯವಾದಗೈದರು. ಶಿಕ್ಷಕಿ ಕುಮಾರಿ ಕೀರ್ತಿ ನಿರೂಪಿಸಿದರು.

Related posts

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ-ಸನ್ಮಾನ- ರೂ.577.80 ಕೋಟಿ ವ್ಯವಹಾರ ನಡೆಸಿ,ರೂ.2.03 ಕೋಟಿ ಲಾಭ ಗಳಿಸಿದೆ,ಸದಸ್ಯರಿಗೆ ಶೇ 15 ನೀಡಲಾಗುವುದು: ಜೋಯೆಲ್ ಮೆಂಡೋನ್ಸ

Suddi Udaya

ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ಗೂ, ಸೌತಡ್ಕ ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ

Suddi Udaya

ಕಾಯರ್ತಡ್ಕದ ಅಂಗರಂಡ ನಿವಾಸಿ ಮುತ್ತಮ್ಮ ನಿಧನ

Suddi Udaya

ಗುರುವಾಯನಕೆರೆ ಶ್ರೀ ಶಾರದಾಂಭ ಭಜನಾ ಮಂಡಳಿಯ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ಮಾಸಿಕ ಸಭೆ

Suddi Udaya

ವೇಣೂರು ಸ. ಪ.ಪೂ. ಕಾಲೇಜು ಪ್ರೌಢ, ಶಾಲಾ ವಿಭಾಗದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!