23.3 C
ಪುತ್ತೂರು, ಬೆಳ್ತಂಗಡಿ
March 7, 2026
ಸಂಘ-ಸಂಸ್ಥೆಗಳು

ಬೆಳ್ತಂಗಡಿ ರೋಟರಿ ಸಮುದಾಯ ದಳದ ಪದಗ್ರಹಣ

ಬೆಳ್ತಂಗಡಿ ಬೆಳ್ತಂಗಡಿ ರೋಟರಿ ಸಂಸ್ಥೆಯಡಿಯಲ್ಲಿ ಆರ್.ಸಿ.ಸಿ. ಮುಂಡಾಜೆ, ಆರ್.ಸಿ.ಸಿ. ಕಕ್ಕಿಂಜೆಯ ಆರ್.ಸಿ.ಸಿ ಕಲ್ಮಂಜ ಮತ್ತು ಆರ್.ಸಿ.ಸಿ. ನೆರಿಯ ಹೀಗೆ ನಾಲ್ಕು ಆರ್.ಸಿ.ಸಿ ಸಮುದಾಯ ದಳಗಳ ಪದಗ್ರಹಣ ಕಾರ್ಯಕ್ರಮವು ಸೆ.೨೦ ರಂದು ನಡೆಯಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪ್ರಭು ತಿಳಿಸಿದ್ದಾರೆ.


ಅವರು ಕಾಶಿಬೆಟ್ಟು ಅರಳಿ ರೋಟರಿ ಭವನದಲ್ಲಿ ಸೆ. ೧೭ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಮುದಾಯ ದಳಗಳ ಪದಗ್ರಹಣ ಕಾರ್ಯಕ್ರಮವನ್ನು ಸೆ.೨೦ ರಂದು ಸಂಜೆ ೪ ಗಂಟೆಗೆ ಮುಂಡಾಜೆಯ ಪರಶುರಾಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದು, ಪದಗ್ರಹಣ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಎ.ಜೆ. ಶೆಟ್ಟಿ ಯವರು ನೆರವೇರಿಸುತ್ತಾರೆ ಎಂದು ಹೇಳಿದರು.
ಮುಂಡಾಜೆ ಆರ್.ಸಿ.ಸಿ. ತಂಡದ ಅಧ್ಯಕ್ಷರಾಗಿ ಪಿ.ಸಿ ಸೆಬೆಸ್ಟಿಯನ್, ಕಾರ್ಯದರ್ಶಿಯಾಗಿ ರಾಕೇಶ್ ಮತ್ತು ಕೋಶಾಧಿಕಾರಿಯಾಗಿ ರಂಗನಾಥ ಹೆಬ್ಬಾರ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ. ಅದೇ ರೀತಿ ಆರ್.ಸಿ.ಸಿ. ಕಕ್ಕಿಂಜೆ ಇದರ ಅಧ್ಯಕ್ಷರಾಗಿ ಶ್ರೀಮತಿ ಶಾರದ ಎ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿಯಾಗಿ ಪ್ರಾನ್ಸಿಸ್ ವಿ.ಪಿ, ಆರ್.ಸಿ.ಸಿ ಕಲ್ಮಂಜ ಇದರ ಅಧ್ಯಕ್ಷರಾಗಿ ನಾಗೇಶ್ ಕಲ್ಮಂಜ, ಕಾರ್ಯದರ್ಶಿಯಾಗಿ ದಿನೇಶ್ ಗೌಡ ಬನದ ಬೈಲು, ಕೋಶಾಧಿಕಾರಿಯಾಗಿ ಡಿ. ಜಯಂತ್ ರಾವ್ ಕಲ್ಮಂಜ, ಆರ್.ಸಿ.ಸಿ ನೆರಿಯ ಇದರ ಅಧ್ಯಕ್ಷರಾಗಿ ಪಿ.ಕೆ. ರಾಜನ್, ಕಾರ್ಯದರ್ಶಿಯಾಗಿ ಬಿ.ಎಮ್. ಶರೀಫ್ ಹಾಗೂ ಕೋಶಾಧಿಕಾರಿಯಾಗಿ ಎಮ್. ಬಾಲಕೃಷ್ಣ ಗೌಡ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ನಾರಾಯಣ ಭಿಡೆ, ಆರ್.ಸಿ.ಸಿ. ಮುಂಡಾಜೆಯ ಅಧ್ಯಕ್ಷ ಪಿ.ಸಿ.ಸೆಬಾಸ್ಟಿಯನ್, ಕಾರ್ಯದರ್ಶಿ ರಾಕೇಶ್, ಕೋಶಾಧಿಕಾರಿ ರಂಗನಾಥ್ ಹೆಬ್ಬಾರ್, ಆರ್.ಸಿ.ಸಿ. ಕಕ್ಕಿಂಜೆ ಅಧ್ಯಕ್ಷೆ ಶ್ರೀಮತಿ ಶಾರದ ಎ, ಕಾರ್ಯದರ್ಶಿ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿ ವರ್ಗೀಸ್ ವಿ.ಪಿ., ಆರ್.ಸಿ.ಸಿ ಕಲ್ಮಂಜ ಅಧ್ಯಕ್ಷ ನಾಗೇಶ್ ಕಲ್ಮಂಜ, ಕಾರ್ಯದರ್ಶಿ ದಿನೇಶ್ ಗೌಡ ಬನದಬೈಲು, ಕೋಶಾಧಿಕಾರಿ ಡಿ.ಜಯಂತ್ ರಾವ್ ಕಲ್ಮಂಜ ಉಪಸ್ಥಿತರಿದ್ದರು.

Related posts

ಪಡಂಗಡಿ: ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾಬಂಧನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸ್ನೇಹ ಸಂಗಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು

Suddi Udaya

ಪೆರಾಲ್ದರಕಟ್ಟೆ ಮಸ್ಜಿದ್‌ನಲ್ಲಿ ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

Suddi Udaya

ಬಾರ್ಯ ಪ್ಯಾಕ್ಸ್ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ದಿಗ್ವಿಜಯ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಕಾಯರ್ತಡ್ಕ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರೀಮತಿ ರತ್ನ ರವರಿಗೆ ಚಿಕಿತ್ಸಾ ನೆರವು

Suddi Udaya
error: Content is protected !!