September 6, 2026
ಶಿಕ್ಷಣ ಸಂಸ್ಥೆ

ಸುಲ್ಕೇರಿ ಅಂಗನವಾಡಿ ಕೇಂದ್ರದಲ್ಲಿ ಪೋಷನ್ ಮಾಸಾಚರಣೆ ಕಾರ್ಯಕ್ರಮ

ಸುಲ್ಕೇರಿ: ಅಂಗನವಾಡಿ ಕೇಂದ್ರದಲ್ಲಿ ಸೆ.17ರಂದು ಪೋಷನ್ ಮಾಸಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಹಾಜರಾಗುವ ಮಕ್ಕಳ ತಾಯಂದಿರು, ಶ್ರೀ ದೇವಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಸುತ್ತಮುತ್ತಲು ದೊರಕುವ ಸೊಪ್ಪು ತರಕಾರಿಗಳನ್ನು ಉಪಯೋಗಿಸಿ ವಿವಿಧ ರೀತಿಯ ಪೌಷ್ಟಿಕಾಂಶಯುಕ್ತ ಖಾದ್ಯಗಳನ್ನು ತಯಾರಿಸಿ ಇದರ ಮಹತ್ವವನ್ನು ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಪೂಜಾರಿ ಮತ್ತು ಆರೋಗ್ಯದ ಬಗ್ಗೆ ಅಳದಂಗಡಿ ಆರೋಗ್ಯ ಕೇಂದ್ರದ ಸಿ.ಎಚ್.ಒ. ಲೀಲಾವತಿ ಅವರು ತಿಳಿಸಿದರು.

ಅದೇ ರೀತಿ ಪ್ರತಿದಿನ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೊಟೀನ್, ಕಾರ್ಬೋಹೈಡೇಡ್ ವಿಟಮಿನ್ ಇವೆಲ್ಲದರ ಪ್ರಮಾಣವನ್ನು ವಿವರಿಸಿದರು. ಇದರ ಜೊತೆಗೆ ಭಾರತ ಸರ್ಕಾರವು ಈ ದಿನ ಪ್ರಾರಂಭಿಸಿದ ಸ್ವಾಸ್ಥ್ಯ ನಾರಿ ಸಶಕ್ತ ಕುಟುಂಬ ಅಭಿಯಾನದ ಅಂಗವಾಗಿ ಬಂದ ತಾಯಂದಿರ ಹಾಗೂ ಊರಿನ ಸದಸ್ಯರ ಶುಗರ್ ಲೆವೆಲ್ ಮತ್ತು ಬಿಪಿ ಪರೀಕ್ಷೆ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಷಣ ಮಾಸಾಚರಣೆ ಅಧ್ಯಕ್ಷತೆಯನ್ನು ನಾರಾಯಣ ಪೂಜಾರಿ ವಹಿಸಿದ್ದರು ಮತ್ತು ಬಾಲವಿಕಾಸ ಸಮಿತಿಯ ಅಧ್ಯಕ್ಷರು ಸುಜಯ, ಆಶಾ ಕಾರ್ಯಕರ್ತೆಯ ಹೇಮಲತಾ, ಸಿ.ಎಚ್.ಒ ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿ, ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕರು ಯಶೋಧರ ಪೂಜಾರಿ, ಸಂಜೀವಿನಿ ಮಹಿಳಾ ಸಂಘದ ಮೇಲ್ವಿಚಾರಕರು ವಿನುತ, ಮಹಮ್ಮಾಯಿ ದೇವಸ್ಥಾನದ ಮಾಜಿ ಅಧ್ಯಕ್ಷರು ವಸಂತ ಪೂಜಾರಿ, ಸಂಜೀವಿನಿ ಮಹಿಳಾ ಸಂಘದ ಮೇಲ್ವಿಚಾರಕರು ಮತ್ತು ಸದಸ್ಯರು, ಮಕ್ಕಳ ತಾಯಂದಿರು, ಉಪಸ್ಥಿತರಿದ್ದರು. ಸೀತಮ್ಮ ಟೀಚರ್ ಸ್ವಾಗತ ಮಾಡಿ ಶ್ವೇತ ಧನ್ಯವಾದ ಮಾಡಿದರು.

Related posts

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮನ್ ಶರ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕೆ ಆಯ್ಕೆ

Suddi Udaya

ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ರಾಜ್ಯಕ್ಕೆ ಎರಡನೇ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ

Suddi Udaya

ನಿಟ್ಟಡೆ ಕುಂಭಶ್ರೀ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ವಿದ್ಯಾರ್ಥಿಗಳಿಗೆ ರಾಜಪಾಲರಿಂದ ರಾಜ್ಯ ಪ್ರಶಸ್ತಿ ಪತ್ರ

Suddi Udaya
error: Content is protected !!