ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ: ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 1.25 ಲಕ್ಷ ಲಾಭ

ಕೊಕ್ಕಡ: ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.19ರಂದು ಸಂಘದ ಆವರಣದಲ್ಲಿ ನಡೆಯಿತು.

ಸಂಘವು ಒಟ್ಟು 180 ಸದಸ್ಯರನ್ನು ಹೊಂದಿದ್ದು ಕಳೆದ ಸಾಲಿನಲ್ಲಿ 69,67,535 ಮೌಲ್ಯದ 1,91,973 ಲೀ ಹಾಲನ್ನು ಸಂಗ್ರಹಣೆ ಮಾಡಿದೆ. ಈ ಅವಧಿಯಲ್ಲಿ ಸಂಘವು, 1,26,535.01 ನಿವ್ವಳ ಲಾಭ ಗಳಿಸಿದೆ. ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಎಚ್ ಕೆ ಇವರು ಮಾತನಾಡಿ ಸಂಘವು ಆರಂಭಗೊಂಡು ಹತ್ತು ವರ್ಷಗಳಾಯಿತು. ದಿನವೊಂದರ 50 ಲೀ ಹಾಲಿನಿಂದ ಆರಂಭಗೊಂಡ ಸಂಘವು 850 ಲೀ ಹಾಲನ್ನು ಸಂಗ್ರಹಿಸುತ್ತಿದೆ. ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು ಲಾಭದಾಯಕವಾಗಿ ನಡೆಯುತ್ತಿದೆ. ಒಕ್ಕೂಟದ ಅಧಿಕಾರಿಗಳು, ಸಂಘದ ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಹಾಗೂ ಊರವರ ಸಹಕಾರ ಸಂಘದ ಬೆಳವಣಿಗೆಗೆ ಸಾಧ್ಯವಾಗಿದೆ ಎಂದರು.

ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪ್ರಸಾದ್ ಕಾಮತ್ ಮಾತನಾಡಿ ಪಶುಗಳ ಆರೋಗ್ಯ, ಪಶು ಆಹಾರದ ಸದ್ಬಳಕೆ, ಹಾಗೂ ಒಕ್ಕೂಟದಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ರೈತರು ಪಶುಪಾಲನೆಯತ್ತ ಮನಮಾಡಿ ಹಾಲಿನ ಪೂರೈಕೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆಯಾದ ಹೇಮಾವತಿ, ನಿರ್ದೇಶಕರಾದ ದಿವ್ಯ, ಜಯಂತಿ, ಸುಂದರಿ ಎ, ಅಕ್ಷತಾ, ಚಂದ್ರಾವತಿ, ಕುಸುಮ, ಶೀಲ, ರೋಸ್ಲಿನ್, ಶೋಭ ಉಪಸ್ಥಿತರಿದ್ದರು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಸದಸ್ಯರನ್ನು ಹಾಗೂ ವರ್ಷಪೂರ್ತಿ ಹಾಲು ಹಾಕಿದ ಸದಸ್ಯರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಸಂಘದ ಅಭಿವೃದ್ಧಿಗೆ ಸಹಕರಿಸಿದ ಹರಿಪ್ರಸಾದ್ ಕೆದಿಲಾಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆ ಅಶ್ವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಧ್ಯಾ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕಿ ರೋಸ್ಟಿನ್ ವಂದಿಸಿದರು. ಸಿಬ್ಬಂದಿ ವೇದಾವತಿ ಸಹಕರಿಸಿದರು.

Related posts

ಅರಸಿನಮಕ್ಕಿ ಜನಸ್ಪಂದನ ಸಭೆ: ಕೊಕ್ಕಡದಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣಕ್ಕೆ ಬೇಡಿಕೆ

Suddi Udaya

ರಾಜ್ಯದ ಜನತೆಗೆ ಸಮಸ್ಯೆಗಳು ಎದುರಾಗದ್ದಂತೆ ಆಡಳಿತ ನಡೆಸಬೇಕು: ಕುಶಾಲಪ್ಪ ಗೌಡ ಪೂವಾಜೆ

Suddi Udaya

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡಗಾಡು ಓಟ

Suddi Udaya

ಬಳಂಜ: ನಾಲ್ಕೂರು ಬೊಳ್ಳಾಜೆ, ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಹೆಜ್ಜೆಗುರುತು: ಅರಣ್ಯ ಇಲಾಖೆಗೆ ಮಾಹಿತಿ, ಚಿರತೆಯ ಸೆರೆಗೆ ಬೋನ್ ಅಳವಡಿಕೆ

Suddi Udaya

ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್ ರವರ “ಕವಿತೆಯೆoಬ ಕೇದಗೆ” ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ತೆನೆ ಹಬ್ಬ

Suddi Udaya
error: Content is protected !!