September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ; ರೂ.4.81 ಕೋಟಿ ಲಾಭ, ಸದಸ್ಯರಿಗೆ ಶೇ. 18 ಡಿವಿಡೆಂಟ್

ಮಿತ್ತಬಾಗಿಲು: ವರದಿ ವರ್ಷದಲ್ಲಿ ಸಂಘವು 1,983 ಕೋಟಿ ರೂ.ಗಿಂತ ಅಧಿಕ ವ್ಯವಹಾರವನ್ನು ನಡೆಸಿದ್ದು 4.81 ಕೋಟಿ ರೂ.ಗಿಂತ ಅಧಿಕ ಲಾಭಗಳಿಸಿದೆ.ಈ ಬಾರಿ ಸಂಘದ ಸದಸ್ಯರಿಗೆ ಶೇ. 18 ಡಿವಿಡೆಂಟ್ ನೀಡಲಾಗುವುದು ಎಂದು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹೇಳಿದರು.

ಅವರು ಸೆ.22ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ 49ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು 6,518 ಎ ತರಗತಿ ಸದಸ್ಯರಿದ್ದು, 7.38 ಕೋಟಿಗಿಂತ ಅಧಿಕ ಪಾಲು ಬಂಡವಾಳ ಸಂಗ್ರಹಿಸಿದೆ. 143 ಕೋಟಿ ರೂ.ಗಿಂತ ಅಧಿಕ ಠೇವಣಾತಿಗಳನ್ನು ಹೊಂದಿದೆ. ಎಂಕೆಸಿಸಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ವೈಯಕ್ತಿಕ ಸಾಲ, ಪಶುಸಂಗೋಪನ ಸಾಲ, ಭೂಮಿ ಖರೀದಿ ಸಾಲ, ಗ್ರಾಹಕ ವಸ್ತು ಸಾಲ, ಸೌಭಾಗ್ಯ ಕಿರು ಸಾಲ, ವೇತನ ಆಧಾರಿತ ಸಾಲ ಅಡಮಾನ ಸಾಲ, ಮನೆ ನಿರ್ಮಾಣ ಮತ್ತು ಮನೆ ರಿಪೇರಿ ಸೇರಿದಂತೆ ಸದಸ್ಯರಿಗೆ ನಾನಾ ರೀತಿಯ ಸಾಲಗಳನ್ನು ವಿತರಿಸಲಾಗಿದ್ದು ವರದಿ ಸಾಲಿನಲ್ಲಿ ಶೇ. 99.10 ಸಾಲ ವಸೂಲಾಗಿರುತ್ತದೆ ಎಂದರು.


ಸಂಘವು ಬಂಗಾಡಿಯಲ್ಲಿ ಮುಖ್ಯ ಕಚೇರಿ ಹೊಂದಿದ್ದು ನಾವೂರು, ಕನ್ಯಾಡಿ, ಕಡಿರುದ್ಯಾವರ, ಮಿತ್ತಬಾಗಿಲು,ದಿಡುಪೆ, ಕಿಲ್ಲೂರು, ಇಂದಬೆಟ್ಟು ಹಾಗೂ ಪಡ್ಪು ಎಂಬಲ್ಲಿ ಶಾಖೆಗಳನ್ನು ಹೊಂದಿದ್ದು ರಬ್ಬರ್ ಖರೀದಿ, ಅಡಕೆ ಖರೀದಿ, ರಸಗೊಬ್ಬರ ಮಾರಾಟ, ಆರ್‌ ಟಿಜಿಎಸ್, ಸೇಫ್ ಲಾಕರ್, ಪಹಣಿ ಪತ್ರ ನೀಡಿಕೆ ಮೊದಲಾದ ವ್ಯವಹಾರಗಳನ್ನು ನಡೆಸುತ್ತಿದೆ ಎಂದರು.

ಉಪಾಧ್ಯಕ್ಷ ಕೆ.ಆನಂದ ಗೌಡ, ನಿರ್ದೇಶಕರಾದ ಕೆ. ಪುಷ್ಪಲತಾ, ಕೆ.ವಸಂತ ಗೌಡ, ರಮೇಶ್ ಕೆಂಗಾಜೆ,ವಿನಯಚಂದ್ರ, ರಘುನಾಥ, ಸತೀಶ್ ನಾಯ್ಕ,ಶೀನಪ್ಪ ಗೌಡ, ಹರೀಶ್ ಪೂಜಾರಿ, ಪ್ರಮೋದ್ ಕುಮಾರ್, ವೇದಾವತಿ ಹಾಗೂ ಸಿಇಒ ದಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಸಿಬ್ಬಂದಿ ರಮಾನಂದ ಕಾರ್ಯಕ್ರಮ ನಿರ್ವಹಿಸಿದರು.

Related posts

ಫೆ.23: ಕುತ್ಲೂರು ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮ್ಯಾಟ್‌ ಕಬಡ್ಡಿ ಪಂದ್ಯಾಟ ಹಾಗೂ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ರವರಿಗೆ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜ

Suddi Udaya

ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಆ. 31: ತಾಲೂಕು ಜೈನ ಸಮಾಜದವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ವಾಹನ ಜಾಥಾ

Suddi Udaya

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ

Suddi Udaya

ಮೀಯಾರು ಕೆಮ್ಮಟ್ಟೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

Suddi Udaya
error: Content is protected !!