25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೋರಂ ಕೊರತೆ ಹಾಗೂ ಅಧಿಕಾರಿಗಳು ಭಾಗವಹಿಸದ್ದರಿಂದ ಕೊಕ್ಕಡ ಗ್ರಾಮಸಭೆ ಮುಂದೂಡಿಕೆ

ಕೊಕ್ಕಡ: ಕೊಕ್ಕಡ ಗ್ರಾ.ಪಂ. ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಸೆ. 22ರಂದು ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಬೇಬಿರವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ರವರು ಭಾಗವಹಿಸಿದರು.

ಸ್ವಾಗತಿಸಿದ ನಂತರ ಪಿಡಿಒ ದೀಪಕ್ ರಾಜ್ ವರದಿಗೆ ಮುಂದಾದಾಗ ಗ್ರಾಮಸ್ಥರರಾದ ಲಕ್ಷ್ಮೀ ನಾರಾಯಣರವರು ಅಧಿಕಾರಿಗಳು ಸಭೆಗೆ ಹಾಜರಾಗದ ಬಗ್ಗೆ ಮಾತನಾಡಿ ಗ್ರಾಮಸಭೆಯಲ್ಲಿ ಅಧಿಕಾರಿಗಳು ಕಡಿಮೆ ಇರುವುದರಿಂದ ಗ್ರಾಮಸಭೆ ಮುಂದೂಡಿ ಎಂದರು.

ಮಾರ್ಗದರ್ಶಿ ಅಧಿಕಾರಿ ಈ ವೇಳೆ ಮಾತನಾಡಿ ಗ್ರಾಮ ಮಟ್ಟದ ಅಧಿಕಾರಿಗಳು ಇದ್ದು, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲು ಇರುವ ಕೆಲವು ಸಮಸ್ಯೆಗಳ ಬಗ್ಗೆ ತಿಳಿಸಿದರಾದರೂ ಹಾಗೂ ಕೆಲವು ಅಧಿಕಾರಿಗಳು ಬರುತ್ತಿದ್ದಾರೆ ಎಂದು ಹೇಳಿದರೂ ಕೇಳದ ಕೆಲ ಗ್ರಾಮಸ್ಥರು ಅಧಿಕಾರಿಗಳು ಬಂದ ಮೇಲೆಯೇ ಪ್ರಾರಂಭಿಸುವ ಎಂದರು. 12 ಗಂಟೆಯಾದರೂ ಅಧಿಕಾರಿಗಳು ಬರುವುದು ಕಾಣದಾದಾಗ ಕೆಲ ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಉತ್ತರಿಸಲು ಅಧಿಕಾರಿಗಳು ಇಲ್ಲದಿರುವುದರಿಂದ ಗ್ರಾಮಸಭೆ ಮುಂದೂಡಿ ಎಂದರು. ಕೆಲವರು ಬೇಕು-ಕೆಲವರು ಬೇಡ ಎಂಬ ಚರ್ಚೆ ನಡೆದು ಕೊನೆಗೆ ಪಿಡಿಒ ಗ್ರಾಮಸಭೆ ಮುಂದೂಡುವ ಬಗ್ಗೆ ಹೇಳಿದರು.

ಈ ವೇಳೆ ರಿಕ್ಷಾ ತಂಗುದಾಣದ ಕುರಿತು ರಿಕ್ಷಾ ಚಾಲಕ ಮಾಲಕರು ಪಿಡಿಒ ದೀಪಕ್ ರಾಜ್ ರಲ್ಲಿ ವಿಚಾರಿಸಿದಾಗ ಮಾತಿನ ಚಕಮಕಿ ನಡೆದು ಪಿಡಿಒ ಹೊರಟರು. ಮಾರ್ಗದರ್ಶಿ ಅಧಿಕಾರಿ ತಾಲೂಕು ಮುಖ್ಯಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಿದ ನಂತರ ಪಿಡಿಒ ಆಗಮಿಸಿದರಾದರೂ ಗ್ರಾಮಸಭೆ ನಡೆಸಲು ಗ್ರಾಮಸ್ಥರ ಕೋರಂ ಇಲ್ಲದ ಕಾರಣ ಮಾರ್ಗದರ್ಶಿ ಅಧಿಕಾರಿ ಗ್ರಾಮಸಭೆ ಮುಂದೂಡಿದರು.

ವೇದಿಕೆಯಲ್ಲಿ ನಿಯೋಜಿತ ಪಿಡಿಒ, ಉಪಾಧ್ಯಕ್ಷ ಪ್ರಭಾಕರ್, ಪಂ. ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಮಲೆಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಾಣಾಪಾಯದಿಂದ ಪಾರು

Suddi Udaya

ಕಲ್ಪತರು ನರ್ಸಿಂಗ್ ಸ್ಕೂಲ್ ನಲ್ಲಿ ಲ್ಯಾಂಪ್ ಲೈಟಿಂಗ್ ಮತ್ತು ಓಥ್ ಸಮಾರಂಭ

Suddi Udaya

ಡಿ.26-27: ಬಳಂಜ ಬದಿನಡೆ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

Suddi Udaya

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Udaya

ಬಂದಾರು : ಒಂದೇ ವರ್ಷದ ಅಡಿಕೆ ಸಸಿಯಲ್ಲಿ ಮೂಡಿದ ಚೊಚ್ಚಲ ಹಿಂಗಾರ; ಶಾಲಾ ತೋಟದಲ್ಲಿ ಹೀಗೊಂದು ಪ್ರಕೃತಿ ವೈಚಿತ್ರ್ಯ

Suddi Udaya

ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ್ಸ್ ನಲ್ಲಿ ಕ್ರಿಸ್ಮಸ್ ಆಚರಣೆ

Suddi Udaya
error: Content is protected !!