September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜಾತಿ ಗಣತಿ ಸಮೀಕ್ಷೆಯಲ್ಲಿ ಮೂಲ್ಯ – ಕುಂಬಾರ ಸಮುದಾಯದವರು ಜಾತಿ ಕಾಲಂನಲ್ಲಿ ಕುಂಬಾರ ಎಂದು ನಮೂದಿಸುವಂತೆ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದಿಂದ ಹೇಳಿಕೆ

ಬೆಳ್ತಂಗಡಿ: ಸೆ. ೨೨ ರಿಂದ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ (ಜಾತಿ ಗಣತಿ) ಗಣತಿ ಕಾರ್ಯ ಪ್ರಾರಂಭವಾಗಿದ್ದು, ಬೆಳ್ತಂಗಡಿ ತಾಲೂಕಿನ ಮೂಲ್ಯ, ಕುಂಬಾರ ಸಮಾಜ ಬಂಧುಗಳು ಸಮೀಕ್ಷೆಯಲ್ಲಿ ಧರ್ಮ ಎಂಬಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಕುಂಬಾರ ಎಂದೂ, ಉಪಜಾತಿ ಕಾಲಂನಲ್ಲಿ ಮೂಲ್ಯ, ಕುಂಬಾರ ಎಂಬ ಉಪಜಾತಿಯನ್ನು ಬರೆಸುವಂತೆ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಹಾಗೂ ಕುಲಾಲ ಕುಂಬಾರ ಯುವ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.


ತಾಲೂಕಿನ ಮೂಲ್ಯ – ಕುಂಬಾರರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ ಅಲ್ಲದೆ ನಮ್ಮ ಬಹುಸಾಂಸ್ಕೃತಿಕ ಅಭ್ಯಾಸಗಳು, ಕುಲಕಸುಬಿನ ಹಿನ್ನೆಲೆ, ಜನಾಂಗದವರಾಗಿ ಇದುವರೆಗೆ ಪಡೆದಿರುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತದೆ. ಜೊತೆಗೆ ನಾವು ನೀಡುವ ಮಾಹಿತಿಯ ಆಧಾರದ ಮೇಲೆ ರಾಜ್ಯ ಸರ್ಕಾರ ನಮ್ಮ ಜನಾಂಗಕ್ಕೆ ಭವಿಷ್ಯದಲ್ಲಿ ನೀಡಬಹುದಾದ ಸಾಂವಿಧಾನಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಮೀಸಲಾತಿ, ಆಯವ್ಯಯದಲ್ಲಿ ನಿಗಧಿತ ಹಣ ಮೀಸಲಿಡುವುದು ಇವೆಲ್ಲದಕ್ಕೂ ಆಧಾರವಾಗಲಿದೆ. ನಾವು ಗಣತಿದಾರರು ಮನೆಗೆ ಬಂದಾಗ ನಾವು ನೀಡುವ ಮಾಹಿತಿ ನಮ್ಮ ಜನಾಂಗದ ಭವಿಷ್ಯವನ್ನು ನಿರ್ಧರಿಸುತ್ತದೆ.


ಸದ್ರಿ ಸಮೀಕ್ಷೆಯಲ್ಲಿ ಬರುವ ೬೦ ಪ್ರಶ್ನೆಗಳಲ್ಲಿ ೫೩ ಪ್ರಶ್ನೆಗಳು ಸಾಮಾನ್ಯ ಪ್ರಶ್ನೆಗಳಾಗಿದ್ದು, ನಿಮಗೆ ಅನ್ವಯಿಸಿದಂತೆ ತಿಳಿಸಿ. ಆದರೆ ಪ್ರಶ್ನೆ ೮, ೯, ೧೦, ೧೧, ೨೪, ೩೦, ೩೧ ಹಾಗೂ ೩೨ ನಮ್ಮ ಕುಲಕಸುಬು ಹಾಗೂ ನಮ್ಮ ಜಾತಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಾಗಿವೆ. ಇವುಗಳಿಗೆ ಯೋಚನೆ ಮಾಡಿ ಸರಿಯಾದ ಹಾಗೂ ಸೂಕ್ತ ಉತ್ತರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಪತ್ರಿಕೆಯ ಆಳವಾದ ಅಧ್ಯಯನ ಹಾಗೂ ಹಿರಿಯರೊಡನೆ ಸಮಾಲೋಚನೆ ನಡೆಸಿದ ಬಳಿಕ ನಮ್ಮ ಮೂಲ್ಯ, ಕುಂಬಾರ ಜಾತಿಯ ಜನರು ಈ ಕೆಳಗಿನಂತೆ ಉತ್ತರ ನೀಡಲು ಸೂಚಿಸಲಾಗಿದೆ.
ಪ್ರಶ್ನೆ ೮: ಧರ್ಮ – ಹಿಂದೂ ಪ್ರಶ್ನೆ ೯: ಜಾತಿ – ಕುಂಬಾರ ಪ್ರಶ್ನೆ ೧೦: ಉಪಜಾತಿ – ನಮ್ಮ ಜಾತಿಯ ಹೆಸರನ್ನು ಬರೆಯಿರಿ. ಉದಾ: ಕುಂಬಾರ, ಮೂಲ್ಯ, ಕುಲಾಲ, ಚಕ್ರಶಾಲಿ, ಪ್ರಜಾಪತಿ, ಸಜ್ಜನ ಕುಂಬಾರ, ಒಡೆಯರ್, ಗುಣಗ ಇತ್ಯಾದಿಗಳಲ್ಲಿ ಒಂದನ್ನು ಬರೆಸಿ, ಪ್ರಶ್ನೆ ೧೧: ಜಾತಿಗೆ ಇರುವ ಇನ್ನಿತರ ಸಮಾನಾರ್ಥದ (ಪರ್ಯಾಯ) ಹೆಸರುಗಳು – ಕುಂಬಾರ, ಕುಲಾಲ, ಮೂಲ್ಯ, ಹಾಂಡ, ಕುಂಬಾರ ಶೆಟ್ಟಿ, ಶಾಲಿವಾಹನ ಕುಂಬಾರ, ಗುನಗ, ಗುಂಡ ಭಕ್ತ, ವಡೆಯರ್, ಪ್ರಜಾಪತಿ, ಮೊದಲಾದವುಗಳಲ್ಲಿ ತಮಗೆ ತಿಳಿದಿರುವಷ್ಟು ಹೆಸರುಗಳನ್ನು ಬರೆಸಿ.


ಪ್ರಶ್ನೆ ೨೪ (e): ಮೀಸಲಾತಿಯಿಂದ ಪಡೆದ ಇತರೆ ಸೌಲಭ್ಯಗಳು – ಸೌಲಭ್ಯಗಳನ್ನು ಪಡೆದಿದ್ದರೆ ಅದನ್ನು ಬರೆಸಿ ಇಲ್ಲದಿದ್ದರೆ ಯಾವುದೂ ಇಲ್ಲ ಎಂದು ಬರೆಸಿ. ಪ್ರಶ್ನೆ ೩೦: ನಿಮ್ಮ ಕುಟುಂಬದ ಕುಲ ಕಸುಬು – ೫೩ ರಲ್ಲಿ ನೀಡಿರುವ ಕುಂಬಾರರು/Poಣಣeಡಿs ಎಂದು ಬರೆಸಿ. ಪ್ರಶ್ನೆ ೩೧: ನಿಮ್ಮ ಕುಲ ಕಸುಬು ಮುಂದುವರೆದಿದೆಯೇ? – ನಿಮ್ಮ ಕುಟುಂಬದಲ್ಲಿ ಈಗಲೂ ಕುಂಬಾರಿಕೆಯನ್ನು ಮಾಡುತ್ತಿದ್ದರೆ ಹೌದು ಎಂದು ಬರೆಸಿ. ಇಲ್ಲದಿದ್ದರೆ ಇಲ್ಲ ಎಂದು ಬರೆಸಿ. ಪ್ರಶ್ನೆ ೩೨: ನಿಮ್ಮ ಕುಲ ಕಸುಬಿನಿಂದ ಬಂದ ಖಾಯಿಲೆಗಳು – ಯಾವುದೂ ಇಲ್ಲ ಎಂದು ಬರೆಸಿ. ಎಂದು ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಕಾರ್ಯದರ್ಶಿ ಯತೀಶ್ ಸಿರಿಮಜಲ್ ಕಾರ್ಯದರ್ಶಿ, ಉಪಾಧ್ಯಕ್ಷರುಗಳಾದ ಹೆಚ್. ಪದ್ಮಕುಮಾರ್ ಮತ್ತು ಲೋಕೇಶ್ ಕುಲಾಲ್ ಹಾಗೂ ಯುವ ವೇದಿಕೆಯ ಗೌರವಾಧ್ಯಕ್ಷ ಉಮೇಶ್ ಕುಲಾಲ್, ಅಧ್ಯಕ್ಷ ಅವಿನಾಶ್ ಮಾಣೂರು, ಕಾರ್ಯದರ್ಶಿ ತಿಲಕ್ ರಾಜ್ ಕುಲಾಲ್, ಕಾರ್ಯದರ್ಶಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೃತ್ಯ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ಉಪನ್ಯಾಸಕರ ತಂಡವು ಪ್ರಥಮ ಸ್ಥಾನ

Suddi Udaya

ಓಡೀಲು‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ಪೂಜೆ

Suddi Udaya

ನೆರಿಯದಲ್ಲಿ ಬಿಜೆಪಿಯ ಬೃಹತ್‌ ಸಾರ್ವಜನಿಕ ಪ್ರಚಾರ ಸಭೆ

Suddi Udaya

ಬಳಂಜ: ಉದ್ಯಮಿ ಯಶೋಧರ ಜೈನ್ ನಿಧನ

Suddi Udaya

ಹಿಂದೂ ಕಮಿಟಿ ಹರ್ಜ್ಲಿಯಾ ವತಿಯಿಂದ ಇಸ್ರೇಲ್ ನಲ್ಲಿ 9ನೇ ವರ್ಷದ ಅಯ್ಯಪ್ಪ ಸ್ವಾಮಿ ಪೂಜೋತ್ಸವ

Suddi Udaya
error: Content is protected !!