July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ

ವೇಣೂರು:- ಇಲ್ಲಿನ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸೆ. 25ರಂದು ಪಶುಸಂಗೋಪನಾ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ ರೇಬಿಸ್ ಜಾಗೃತಿ ಕಾರ್ಯಕ್ರಮ ನೆರವೇರಿತು.

ಸಂಪನ್ಮೂಲ ವ್ಯಕ್ತಿಯಾಗಿ ಪಶು ಸಂಗೋಪನಾ ಇಲಾಖಾಧಿಕಾರಿಯಾದ ಸದಾಶಿವ ಭಟ್ ಮಾಹಿತಿ ನೀಡಿ, ಪ್ರಾಣಿ ಕಡಿತದ ಸಮಯದಲ್ಲಿ ಪಡೆಯುವ ತಕ್ಷಣದ ಚಿಕಿತ್ಸೆಯೇ ಪರಿಹಾರೋಪಾಯಗಳಲ್ಲಿ ಪ್ರಧಾನ. ಪ್ರಾಣಿಗಳ ಜೊತೆಗಿನ ಒಡನಾಟದ ಬಗ್ಗೆ ಎಚ್ಚರವಿರಲಿ ಎಂದರು.‌ ಪಶುವೈದ್ಯರಾದ ನಾಗಶಯನ ರಾವ್ ಮತ್ತು ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇದರ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಬಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದಿಶಾ ವೈ ಶೆಟ್ಟಿ, ರಂಜಿನಿ, ಸ್ಫೂರ್ತಿ ಪ್ರಾರ್ಥಿಸಿದ ಸಭೆಯನ್ನು ಶಿಕ್ಷಕ ತೀರ್ಥ ಪ್ರಸಾದ್ ಸಮಗ್ರವಾಗಿ ನಿರೂಪಿಸಿದರು . ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ , ಗಣಿತ ಶಿಕ್ಷಕ ಸಾರ್ಥಕ್ ಜೈನ್ ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.

Related posts

ಫೆ.12: ಉಜಿರೆ ಶ್ರೀ ದುರ್ಗಾ ನಿಲಯದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ, ಹಾಗೂ ಶ್ರೀ ಶನೀಶ್ವರ ಪೂಜೆ

Suddi Udaya

ನಾವೂರು: ಕಾಂತಪ್ಪ ಮೂಲ್ಯರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

72 ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನಾರಾವಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿರುವ ಎನ್.ಶಶಿಕಾಂತ್ ಜೈನ್ ಅವರಿಗೆ ಕಾಯಕ ದೀಕ್ಷಾಮಣಿ ಪ್ರಶಸ್ತಿ

Suddi Udaya

ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದ ಸ್ಥಳದ ಸ್ವಚ್ಛತೆ

Suddi Udaya

ಬೆಳ್ತಂಗಡಿ ಕರ್ನಾಟಕ ಗಮಕ ಕಲಾ ಪರಿಷತ್, ವತಿಯಿಂದ ‘ಮನೆ ಮನೆ ಗಮಕ’ ವಿನೂತನ ಕಾರ್ಯಕ್ರಮ

Suddi Udaya

ಕುವೆಟ್ಟು : ಪಯ್ಯೊಟ್ಟು ನಿವಾಸಿ ಸೀತಾರಾಮ ಪೂಜಾರಿ ನಿಧನ

Suddi Udaya
error: Content is protected !!