September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಳಂಜ: ಸಂಘ-ಸಂಸ್ಥೆಗಳು ಜನಪರವಾಗಿ ತೊಡಗಿಸಿಕೊಂಡು, ಮಾದರಿಯಾಗಿ ಕೆಲಸ ಮಾಡಿದಾಗ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂಬುದಕ್ಕೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಕಾರ್ಯಚಟುವಟಿಕೆಗಳು ನಿದರ್ಶನವಾಗಿದೆ. ವರ್ಷದೂದ್ದಕ್ಕೂ ಹಲವಾರು ಕಾರ್ಯಕ್ರಮಗಳ ಮೂಲಕ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಅವರು ಸೆ.29 ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಭೇಟಿ ನೀಡಿ ಮಾತನಾಡಿದರು.

ಸುಮಾರು 47 ವರ್ಷಗಳ ಪರಂಪರೆಯಿರುವ ಬಳಂಜ ಸಂಘದ ಪ್ರಗತಿಯ ಕೆಲಸ ಕಾರ್ಯಗಳಿಗೆ ಸಂಸದರ ನಿಧಿಯಿಂದ ಅನುದಾನ ಮಂಜೂರುಗೊಳಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಳಂಜ ಬಿಲ್ಲವ ಸಂಘದ ವತಿಯಿಂದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಬಳಂಜ‌ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿ,ಸಂಘದ ವಿಚಾರಧಾರೆಗಳನ್ನು ತಿಳಿಸಿ ಸ್ವಾಗತಿಸಿದರು.

ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ,ಪ್ರವೀಣ್ ಕುಮಾರ್ ಹೆಚ್.ಎಸ್,ರಂಜಿತ್ ಪೂಜಾರಿ ಮಜಲಡ್ಡ,ಸುರೇಶ್ ಪೂಜಾರಿ ಜೈಮಾತ,ದಿನೇಶ್ ಪೂಜಾರಿ ಕುದ್ರೋಟ್ಟು,ದಿನೇಶ್ ಪೂಜಾರಿ ಅಂತರ,ದಿನೇಶ್ ಪೂಜಾರಿ ನಿಟ್ಟಡ್ಕ, ಯೋಗೀಶ್ ಪೂಜಾರಿ ಕೊಂಗುಳ,ಸಂತೋಷ್ ಪೂಜಾರಿ, ಭಾರತಿ ಸಂತೋಷ್‌,ಹರೀಶ್ ವೈ, ಹಾಗೂ ಇತರರು ಉಪಸ್ಥಿತರಿದ್ದರು.

ಪತ್ರಕರ್ತ ಜಗದೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಪಂಚಶ್ರೀ ಭಜನಾ ಮಂಡಳಿ ಸದಸ್ಯರು ಸಹಕರಿಸಿದರು.

Related posts

ಶಿಶಿಲ: ಕಾರೆಗುಡ್ಡೆ ದಿ. ಪ್ರವೀಣ್ ರವರ ಮನೆಯವರಿಗೆ ದೀಪಾವಳಿ ಪ್ರಯುಕ್ತ ಬಟ್ಟೆ ಹಾಗೂ ಧನ ಸಹಾಯ

Suddi Udaya

ಸುಲ್ಕೇರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಸ್ಟಾರ್ ಲೈನ್ ಶಾಲೆಯಲ್ಲಿ ” ನ್ಯಾಷನಲ್ ಮಾಥ್ಸ್ ಡೇ “ಮತ್ತು ವಿಜ್ಞಾನ ವಸ್ತು ಪ್ರದರ್ಶನ

Suddi Udaya

ಅ.3-11: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆ
ಶಾಸಕ ಹರೀಶ್ ಪೂಂಜರಿಗೆ ದೈವದ ಅಭಯ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಜೆ.ಆರ್ ಲೋಬೋ

Suddi Udaya
error: Content is protected !!