22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ನೆರಿಯ : ಪೆಟ್ರೋನೆಟ್ ಪೈಪ್ ಲೈನ್ ನಿಂದ ಪೆಟ್ರೋಲ್ ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬೆಳ್ತಂಗಡಿ : ನೆರಿಯ ಪೆಟ್ರೋನೆಟ್ ಪೈಪ್ ಲೈನ್ ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸಲಾಗಿದೆ.

ಚಿಬಿದ್ರೆ ನಿವಾಸಿ ವೀರಪ್ಪ ಗೌಡ ಮಗ ತಮ್ಮಯ್ಯ (35) ಬಂಧಿತ ಆರೋಪಿ. ಸೆ.28 ರಂದು ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಈತ ತಿರುಗಾಡುತ್ತಿದ್ದವನನ್ನು ನೋಡಿ ಸುರತ್ಕಲ್ ಪೊಲೀಸ್ ಠಾಣೆಯ ಉಮೇಶ್ ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಬಿದ್ರೆ ನಿವಾಸಿ ಎಂದು ತಿಳಿಸಿದ್ದ. ಅದರಂತೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ ಸುರತ್ಕಲ್ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ವಾರಂಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ತಮ್ಮಯ್ಯ ಎಂದು ತಿಳಿದುಬಂದಿದೆ.

ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮತ್ತು ಉಪ ನಿರೀಕ್ಷಕರು ಸಮರ್ಥ್ ಆರ್ ಗಾಣಿಗೇರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ವೃಷಭ, ಚರಣ್ ರಾಜ್, ಗೋವಿಂದರಾಜ್, ಜಗದೀಶ್ ರವರು ಬಂಧಿಸಿ ಸೆ.29 ರಂದು ಸುಳ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related posts

ಬೆಳ್ತಂಗಡಿ : ಸಿಎಎ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ಜೇಸಿಐ ಭಾರತ ವಿದ್ಯಾರ್ಥಿವೇತನ

Suddi Udaya

ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ

Suddi Udaya

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಬೆಳ್ತಂಗಡಿ ತಾ.ಪಂ. ನಲ್ಲಿ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಪ್ರಮಾಣ ವಚನ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಪ್ರಮಾಣ ವಚನ ಸ್ವೀಕಾರ: ಪ್ರಭು ಶ್ರೀರಾಮಚಂದ್ರನ ಹೆಸರಿನಲ್ಲಿ ಪ್ರಮಾಣ ವಚನ ಮಾಡಿ ಗಮನ ಸೆಳೆದ ಹರೀಶ್ ಪೂಂಜ

Suddi Udaya
error: Content is protected !!