September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಲೋಬೊ ಟಿವಿಎಸ್ ಮೋಟಾರ್ಸ್ ಮಳಿಗೆಯಲ್ಲಿ ಆಯುಧ ಪೂಜೆ

ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬರುತ್ತಿರುವ ರೋನಾಲ್ಡ್ ಲೋಬೋ ಇವರ ಮಾಲೀಕತ್ವದ ಬೆಳ್ತಂಗಡಿಯ ಪ್ರಸಿದ್ಧ ಟಿವಿಎಸ್ ಮೋಟರ್ಸ್ ನಲ್ಲಿ ಆಯುಧ ಪೂಜೆಯನ್ನು ಅ. 2 ರಂದು ಆಚರಿಸಲಾಯಿತು.

ಬೆಳ್ತಂಗಡಿ ವಿಮುಕ್ತಿ ಚಾರಿಟೇಬಲ್ ಸಂಸ್ಥೆಯ ಪ್ರದಾನ ಗುರುಗಳಾದ ಫಾ.ವಿನೋದ್ ಮಸ್ಕರೇನಸ್ ರವರು ಪ್ರಾರ್ಥನೆ ಮಾಡಿ ಸಂಸ್ಥೆಯ ಮಾಲಕರಿಗೆ, ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನ ಪಾಲನ ಪರಿಷದ್ ನ ಉಪಾಧ್ಯಕ್ಷ ರಾದ ವಾಲ್ಟರ್ ಮೋನಿಸ್, ಆಯೋಗದ ಸಂಚಾಲಕಿ ಪೌಲಿನ್ ರೇಗೋ, ವಾರ್ಡಿನ ಗುರಿಕಾರಾದ ಹಾಗೂ ನಿವೃತ್ತ ಶಿಕ್ಷಕಿ ಜೂಲಿಯಾನ ಡಿಸೋಜಾ, ಸಂಸ್ಥೆಯ ಮಾಲಕರ ಪತ್ನಿ ರೋಶಿನಿ ಲೋಬೊ, ಹಿರಿಯ ವಕೀಲ ಅಲೋಶಿಯಸ್ ಲೋಬೊ, ಅಕ್ಕಂದಿರಾದ ವೇರೋನಿಕಾ ಲೋಬೊ, ಜೆನೆವಿವ್ ಲೋಬೊ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ವರ್ತಕರ ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ, ಭಾರತೀಯ ಜೀವ ವಿಮಾ ವಿನ್ಸೆಂಟ್ ಡಿಸೋಜಾ, ಶಿಕ್ಷಕಿ ಥಿಯೋಫಿಲ್ಲ ಡಿಸೋಜಾ, ಸಿವಿಸಿ ಹಾಲ್ ನ ಮಾಲಕರಾದ ಜೇಮ್ಸ್ ಡಿಸೋಜಾ ,ಸಂಸ್ಥೆಯ ಮ್ಯಾನೇಜರ್ ಅಶೋಕ್ ಮೋನಿಸ್, ಸಿಬ್ಬಂದಿ ವರ್ಗದವರು, ಗ್ರಾಹಕರು ಹಾಗೂ ಇತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ರೊನಾಲ್ಡ್ ಲೋಬೋ ಆಗಮಿಸಿದ ಅತಿಥಿ ಗಣ್ಯರ ಸ್ವಾಗತಿಸಿ, ಸತ್ಕರಿಸಿದರು.

Related posts

ಕೊಕ್ಕಡ: ಉಪ್ಪಾರಪಳಿಕೆ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ಕೊಠಡಿಗಳ ಉದ್ಘಾಟನೆ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಕು. ಸಂಜ್ಞಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಸಹಾಯಾರ್ಥ ನೀಡುವ ಮೂಲಕ ಗಾಂಧಿ ಜಯಂತಿ ಆಚರಣೆ

Suddi Udaya

ಸವಣಾಲು ಶ್ರೀ ಭೈರವ ಕ್ಷೇತ್ರಕ್ಕೆ ನೂತನ ಶಿಲಾಮಯ ಗಭ೯ಗುಡಿಯ ಶಿಲೆಗಳ ಮೆರವಣಿಗೆ

Suddi Udaya

ಕೊಕ್ಕಡ ಜೇಸಿಗೆ ಸಮ್ಮೇಳನ ಪ್ರಶಸ್ತಿ: ಅಕ್ಷರ ದೀವಿಗೆ ವಲಯದ ಅತ್ಯುತ್ತಮ ಕಾರ್ಯಕ್ರಮ

Suddi Udaya

ಮುಳಿಕ್ಕಾರುನಲ್ಲಿ ದೈವ ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

Suddi Udaya
error: Content is protected !!