September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಲಾಯಿಲ : ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಿಲಿ ನಲಿಕೆ ಹಾಗೂ ಸನ್ಮಾನ ಕಾರ್ಯಕ್ರಮ

ಲಾಯಿಲ -ನಡ ಗ್ರಾಮದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಂಗಣದಲ್ಲಿ ಹೇಮಂತ್ ಕುಮಾರ್ ಕೆದ್ದೇಲು ಇವರ ಸಾರಥ್ಯದ ಶಿವದುರ್ಗ ಟೈಗರ್ಸ್ ಇದರ ಸದಸ್ಯರಿಂದ ಐದನೇ ವರ್ಷದ ಪಿಲಿ ನಲಿಕೆ ಕಾರ್ಯಕ್ರಮವು ವಿಜ್ರಂಭಣೆಯಿಂದ ನಡೆಯಿತು.

ಐದನೇ ವರ್ಷದ ಪಿಲಿನಲಿಕೆಯನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಧನಂಜಯ ಅಜ್ರಿ ನಡಗುತ್ತು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ್ ಕತ್ತರ್ ಸಾಲ್, ನ್ಯಾಯವಾದಿಗಳಾದ ಧನಂಜಯ ರಾವ್ , ಸತೀಶ್ಚಂದ್ರ ಸುರ್ಯಗುತ್ತು, ಲಾಯಿಲ ಗುತ್ತುವಿನ ಚಿತ್ತರಂಜನ್ ಹೆಗ್ಡೆ , ಅಲೋಕ್ ಅಜ್ರಿ, ಹೇಮಂತ್ ಕೇದ್ದೆಲು ಉಪಸ್ಥಿತರಿದ್ದರು.


ಸೇನೆಯಲ್ಲಿ ಕೆಲಸ ಮಾಡಿದ ನಿವೃತ್ತ ಸೈನಿಕರಾದ ಸುನಿಲ್ ಶೆಣೈ, ಹರೀಶ್ ರೈ, ಉಮೇಶ್ ಬಂಗೇರ, ಕೃಷ್ಣ ಭಟ್, ಮಹಮ್ಮದ್ ರಫಿ, ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಜೊತೆಗೆ ಪ್ರಸ್ತುತ ಸೇವೆಯನ್ನು ಸಲ್ಲಿಸುತ್ತಿರುವ ವೀರ ಯೋಧರಾದ ಅನಂತ ಪೈ ಲಾಯಿಲ ಇವರ ಮಾತೃಶ್ರೀ ಪ್ರತಿಭಾ ಪೈ ಹಾಗೂ ಇನ್ನೋರ್ವ ಯೋಧರಾದ ಯಶೋಧರ ಚಂದ್ಕೂರು ಇವರ ಮಾತೃಶ್ರೀ ಸರೋಜಿನಿ ಇವರನ್ನು ಸನ್ಮಾನಿಸಲಾಯಿತು.


ಐದನೇ ವರ್ಷದ ಪಿಲಿನಲಿಕೆಯ ವಿಶೇಷವಾಗಿ ಕಿನ್ನಿ ಪಿಲಿ ಸ್ಪರ್ಧೆ ಆಯೋಜಿಸಿದ್ದು ಇದರ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ಹುಲಿ ವೇಷದಾರಿಗಳು ಸೇರಿಕೊಂಡು ಹುಲಿ ವೇಷದ ರೂವಾರಿಯಾದ ಹೇಮಂತ್ ಕೇದ್ದೆಲು ಇವರನ್ನು ಸನ್ಮಾನಿಸಿದರು.
ಶ್ರಾವ್ಯ ಕುತ್ತಾರ್ ಸ್ವಾಗತಿಸಿ, ಚೈತ್ರ ಮುಂಡಾಜೆ ಸನ್ಮಾನಿತರ ವರದಿಯನ್ನು ವಾಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿವದುರ್ಗ ಟೈಗರ್ಸ್ ಇದರ ಸಲಹೆಗಾರರಾದ ಅರವಿಂದ ಲಾಯಿಲ ನಡೆಸಿಕೊಟ್ಟರು.


ಸುಮಾರು 70ಕ್ಕಿಂತಲೂ ಹೆಚ್ಚು ಸ್ಥಳೀಯ ಹುಲಿ ವೇಷಧಾರಿಗಳು ವೇದಿಕೆಯಲ್ಲಿ ಉತ್ತಮ ಪ್ರದರ್ಶನ ಕೊಟ್ಟರು.

Related posts

ನೆರಿಯ: ಬಾಂಜಾರು ಸಮುದಾಯ ಭವನ ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾ ಸ್ವೀಪ್ ಸಮಿತಿ ತಂಡ ಭೇಟಿ

Suddi Udaya

ರಾಜ್ಯ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ : ಇದು ಬಡಜನರ ಮೇಲಿನ ಮರಣ ಶಾಸನ: ಶೇಖರ ಎಲ್

Suddi Udaya

ಸವಣಾಲು ಉದ್ಯಮಿ ಅರುಣ್ ಕುಮಾರ್ ನಿಧನ

Suddi Udaya

ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ಗುರುವಾರ, ಶುಭ ಶುಕ್ರವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

Suddi Udaya

ಸುದ್ದಿ ಉದಯ ದೀಪಾವಳಿ ವಿಶೇಷಾಂಕ- 2024: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya
error: Content is protected !!