ಬೆಳ್ತಂಗಡಿ:ನಮ್ಮ ಬೆಳ್ತಂಗಡಿ ನಗರ ಖಂಡಿತವಾಗಿ ಅಭಿವೃದ್ಧಿ ಹೊಂದಬೇಕು.ಮೊದಲನೆಯದಾಗಿ ರಸ್ತೆಗಳು ಖಂಡಿತವಾಗಿ ಅಗಲೀಕರಣ ಆಗಬೇಕು,ಇದರಲ್ಲಿ ನಮ್ಮ ವರ್ತಕರ ಸಂಪೂರ್ಣ ಸಹಕಾರ ಇದೆ. ಆದರೆ ಅವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ, ಅಗಲವಾದ ಒಳಚರಂಡಿ, ಸರ್ವಿಸ್ ರಸ್ತೆಯು ಮಾಡುವುದರಿಂದ ಎರಡು ಬದಿಯ ವ್ಯಾಪಾರಸ್ಥರು ಪಾರ್ಕಿಂಗ್ ಇಲ್ಲದೆ ತಮ್ಮ ಅಂಗಡಿ ಬಾಗಿಲಿನವರೆಗೆ ಸರ್ವಿಸ್ ರಸ್ತೆ ಬರುವ ಕಾರಣ ಹಾಗೂ ಗ್ರಾಹಕರಿಗೆ ಅಂಗಡಿಗೆ ಸುಲಭವಾಗಿ ಪ್ರವೇಶ ಇಲ್ಲದ ಕಾರಣ ಅಂಗಡಿಗಳನ್ನು ಮುಚ್ಚುವ ಹಾಗೂ ಬಾರಿ ನಷ್ಟ ಉಂಟಾಗುವ ಪರಿಸ್ಥಿತಿ ಬರಲಿದೆ.
ಇದರಿಂದ ವಾಹನ ಬ್ರೆಕ್ ಡೌನ್ ಆದರೆ ಟ್ರಾಫಿಕ್ ಜಾಮ್, ರಸ್ತೆ ಆಫಘಾತ ಹೆಚ್ಚಾಗುವ ಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ಅಲ್ಲಲ್ಲಿ ಮಾಡಿದ ಚರಂಡಿಗಳು ಮಣ್ಣಿನಿಂದ ಹಾಗೂ ನೀರು ತುಂಬಿ ಮುಚ್ಚಲ್ಪಟ್ಟಿದೆ.
ಈ ನಿಟ್ಟಿನಲ್ಲಿ ಬೆಳ್ತಂಗಡಿ ವರ್ತಕರು ಪುಂಜಾಲಕಟ್ಟೆಯಿಂದ ಬಿ.ಸಿ.ರೋಡ್ ಮಾದರಿಯಲ್ಲಿ ರಸ್ತೆ ವಿಸ್ತರಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ.











