September 6, 2026
ಕ್ರೀಡಾ ಸುದ್ದಿತಾಲೂಕು ಸುದ್ದಿ

ಶಿಶಿರ್ ಜಯವಿಕ್ರಮ್ ಗೆ ವಾಲಿಬಾಲ್ ವಲಯದ “ಸರ್ವಾಂಗೀಣ ಆಟಗಾರ “ಪ್ರಶಸ್ತಿ

ಬೆಳ್ತಂಗಡಿ: ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆ ಆತಿಥ್ಯದಲ್ಲಿ ಅ.10-11ರಂದು ನಡೆದ ಎಂಟು ಜಿಲ್ಲೆಯನ್ನು ಒಳಗೊಂಡ ಮೈಸೂರು ವಲಯ ಹದಿನಾಲ್ಕು ವರ್ಷ ಕೆಳಗಿನ ವಯೋಮಾನದ ವಾಲಿಬಾಲ್ ಪಂದ್ಯಾ ಕೂಟದಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯ ವಿದ್ಯಾರ್ಥಿ ಶಿಶಿರ್ ಜಯವಿಕ್ರಮ್ ಬೆಥನಿ ವಿದ್ಯಾಲಯ ಪುತ್ತೂರು ತಂಡದೊಂದಿಗೆ ಇತ್ತೀಚೆಗೆ ವಿಟ್ಲ ದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ವಯಕ್ತಿಕವಾಗಿ ಉತ್ತಮ ಹೊಡೆತಗಾರ ಪ್ರಶಸ್ತಿ ಪಡೆದಿದ್ದು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಮೈಸೂರು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುವಯಕ್ತಿಕವಾಗಿ “ಉತ್ತಮ ಸರ್ವಾಂಗೀಣ ಆಟಗಾರ”ಪ್ರಶಸ್ತಿಯನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ.

ಈತ ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಹಾಗೂ ಸುಶ್ಮಿತಾ ದಂಪತಿಯ ಪುತ್ರನಾಗಿದ್ದು ಆತನಿಗೆ ಇಂದ್ರಪ್ರಸ್ಥ ವಿದ್ಯಾಲಯದ ದೈಹಿಕ ಶಿಕ್ಷಕರಾದ ಗೋಪಿನಾಥ್, ತರಬೇತುದಾರ ರಫೀಕ್ಹಾಗೂ ಬೆಥನಿ ವಿದ್ಯಾ ಸಂಸ್ಥೆಯ ಅಕ್ಷಯ್ ಮತ್ತು ನಿರಂಜನ್ ರಿಂದ ತರಬೇತಿಯನ್ನು ಪಡೆದಿರುತ್ತಾನೆ.

Related posts

ನಾರಾವಿ ಸಂತ ಅಂತೋನಿ ಕಾಲೇಜು ನೂತನ ಪ್ರಾಂಶುಪಾಲರಾಗಿ ಸಂತೋಷ್ ಸಲ್ಡಾನ ಅಧಿಕಾರ ಸ್ವೀಕಾರ

Suddi Udaya

ಕುಚ್ಚಲು ಅಕ್ಕಿ ವಿತರಣೆಗೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿಗಳ ಮುಂದೆ ಎಸ್‌ಡಿಪಿಐ ಸಾಂಕೇತಿಕ ಪ್ರತಿಭಟನೆ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಪುತ್ತೂರು ಶಾಸಕ ಅಶೋಕ್ ರೈ ಗೆ ಆಮಂತ್ರಣ

Suddi Udaya

ಬೆನಕ  ಹೆಲ್ತ್ ಸೆಂಟರ್ ನ ಔಷಧಾಲಯ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ವೇಣೂರು ನವಚೇತನ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿಗೆ ತಾ.ಪಂ ಇಓ ಭೇಟಿ, ಸ್ಥಳ ಪರಿಶೀಲನೆ

Suddi Udaya
error: Content is protected !!