September 6, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್‌ ಸೊಸೈಟಿಯ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

ಬೆಳ್ತಂಗಡಿ: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ಸೊಸೈಟಿ ಲಿ., ಮಂಗಳೂರು ಇದರ ಆಶ್ರಯದಲ್ಲಿ ಎಜೆ ಆಸ್ಪತ್ರೆ ರಿಸರ್ಚ್ ಸೆಂಟರ್, ಕುಂಟಿಕಾನ, ಮಂಗಳೂರು, ಅವಿಭಜಿತ ದ.ಕ ವಿಶ್ವಕರ್ಮ ವೈದ್ಯರ ಸಂಘ ಇದರ ಸಹಯೋಗದೊಂದಿಗೆ, ಹಾಗೂ ಶ್ರೀ ವಿಶ್ವಕರ್ಮಾಭ್ಯುದಯ ಸಭಾ(ರಿ.), ಬೆಳ್ತಂಗಡಿ, ಆನೆಗುಂದಿ ಗುರು ಸೇವಾ ಪರಿಷತ್, ಬೆಳ್ತಂಗಡಿ ಮಂಡಲ, ವಿಶ್ವಕರ್ಮ ಸಮಾಜದ ಕಮ್ಮಾರರ ಗುಡಿ ಕೈಗಾರಿಗ ಸಂಘ ಬೆಳ್ತಂಗಡಿ, ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಬೆಳ್ತಂಗಡಿ, ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘ ಅಳದಂಗಡಿ, ಶ್ರೀ ವಿಶ್ವಕರ್ಮ ಸಂಘ ಮುಂಡೂರು, ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಂಡಿಂಜೆ ಸಹಕಾರದೊಂದಿಗೆ ಸಂಸ್ಥೆಯ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ”ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ”ವು ಅ.12ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.

ಎಸ್.ಕೆ.ಜಿ.ಐ. ಕೋ-ಆಪರೇಟಿವ್ ಸೊಸೈಲಿ ಲಿ., ಮಂಗಳೂರು ಇದರ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮುರಳಿ ಬಲಿಪ, ವಕೀಲರು ಮತ್ತು ನೋಟರಿ ಪಬ್ಲಿಕ್, ಅಧ್ಯಕ್ಷರು, ಲಯನ್ಸ್ ಕ್ಲಬ್ ಬೆಳ್ತಂಗಡಿ, ವಿ. ಪ್ರಕಾಶ್ ಪುರೋಹಿತ್ ವೇಣೂರು ಅಧ್ಯಕ್ಷರು, ಆನೆಗುಂದಿ ಗುರುಸೇವಾ ಪರಿಷತ್‌, ಬೆಳ್ತಂಗಡಿ ಮಂಡಲ, ಹರಿಶ್ಚಂದ್ರ ಆಚಾರ್ಯ, ಪಿಲಿಚಾಮುಂಡಿಕಲ್ಲು ಶ್ರೀ ಗಣೇಶ್ ಗೋಲ್ಡ್ ಬೆಳ್ತಂಗಡಿ, ಆಶಾ ಸತೀಶ್ ಆಚಾರ್ಯ, ಹಂಸ ವುಡ್ ವರ್ಕ್ಸ್ ಬೆಳ್ತಂಗಡಿ, ಸದಾಶಿವ ಆಚಾರ್ಯ ಡಿ., ಹಿರಿಯ ಸದಸ್ಯರು ಶಕ್ತಿನಗರ, ಗುರುವಾಯನಕೆರೆ ಉಪಸ್ಥಿತರಿದ್ದರು.

ಉತ್ತಮ ಗ್ರಾಹಕರಾದ ಜಗದೀಶ್, ಶಾಂತ, ಚಂದ್ರಯ್ಯ, ವಾಸು, ಸೀತಾರಾಮ, ರಮೇಶ್ ಆಚಾರ್ಯ ನಡ ರವರಿಗೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪವರ್ ಮ್ಯಾನ್ ಗಣೇಶ್ ದೇವಾಡಿಗ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ, ಡಾ. ರವಿಚಂದ್ರ ಕೆ., ಡಾ. ಪ್ರತೀಕ್, ಡಾ. ಜಯಂತ್ ಆಚಾರ್ಯ ಮಂಗಳೂರು, ಉಪಾಧ್ಯಕ್ಷ ಎ. ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ. ಜಯ ಆಚಾರ್, ಕೆ. ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್. ಪತ್ತಾ‌ರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಕೆ. ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್., ಪ್ರಶಾಂತ್ ಎಚ್. ಆಚಾರ್ಯ, ಗುರುವಾಯನಕೆರೆ ಶಾಖಾ ವ್ಯವಸ್ಥಾಪಕ ಪ್ರಶಾಂತ್ ಕೆ. ಆಚಾರ್ಯ, ಸಿಬ್ಬಂದಿ ಯಜ್ಞೇಶ್, ಸುಶಾಂತ್ ಉಪಸ್ಥಿತರಿದ್ದರು. ಶಾಖಾ ಸಿಬ್ಬಂದಿ ರಾಮ್ ಪ್ರಸಾದ್ ಎನ್.ಎಸ್ ನಿರೂಪಿಸಿದರು. ಗಣೇಶ್ ಆಚಾರ್ಯ ಬಲ್ಯಯಕೋಡಿ ಸ್ವಾಗತಿಸಿದರು. ನಿರ್ದೇಶಕ ಮಂಜುನಾಥ ಆಚಾರ್ಯ ವಂದಿಸಿದರು.

Related posts

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಿಶಿಲ ಯುವಕರಿಂದ ಅಂಗನವಾಡಿ ಮಕ್ಕಳಿಗೆ ಸ್ಲೇಟ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗೂಡ್ಸ್ ಟೆಂಪೋ

Suddi Udaya

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಪ್ರಮಾಣ ವಚನ: ಶಿರ್ಲಾಲು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ಯುವವಾಹಿನಿಯ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಲೀಲಾವತಿ ಪಣಕಜೆ, ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಿ.ಕೆ.

Suddi Udaya

ಎಂಸಿಎಫ್ ನ ಸಿ ಎಸ್ ಆರ್ ಆಕ್ಟಿವಿಟಿ ಯೋಜನೆ ಅಡಿಯಲ್ಲಿ ಪೆರಿಂಜೆ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಿಸಲಾದ ನೂತನ ಶೌಚಾಲಯದ ಉದ್ಘಾಟನೆ

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

Suddi Udaya
error: Content is protected !!