September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅ.26: ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಒಥಿ ಃhಚಿಡಿಚಿಣh ದಕ್ಷಿಣ ಕನ್ನಡ ಜಿಲ್ಲೆ, ಕೊಣಾಜೆ ಗ್ರಾಮ ಪಂಚಾಯತ್, ಸಮರ್ಪಣಾ ಪರಿವಾರ ಟ್ರಸ್ಟ್, ಮಂಗಳೂರು ಹಾಗೂ ದ.ಕ.ಜಿಲ್ಲಾ ಯುವಜನ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೫-೨೬ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವು ಅ.26 ರಂದು ಬಂಟರ ಭವನ, ಅಸೈಗೋಳಿ, ಕೊಣಾಜೆ ಗ್ರಾಮ, ಉಳ್ಳಾಲ ತಾಲೂಕು ಇಲ್ಲಿ ನಡೆಯಲಿದೆ.


ಸದ್ರಿ ಯುವ ಜನೋತ್ಸವದಲ್ಲಿ ಸಾಂಸ್ಕೃತಿಕ ಸ್ಪರ್ಧೆ (ಜನಪದ ನೃತ್ಯ, ಜನಪದ ಗೀತೆ, ಕಥೆ ಬರೆಯುವುದು, ಚಿತ್ರ ಕಲೆ, ಘೋಷಣೆ, ಕವಿತೆ ಬರೆಯವುದು, ಇತ್ಯಾದಿ)ಗಳು ನಡೆಯಲಿದ್ದು, ಭಾಗವಹಿಸುವವರು ಅ.೨೩ರಂದು ಸಂಜೆ ೫.೦೦ಗಂಟೆಯೊಳಗಾಗಿ ತಮ್ಮ/ತಂಡದ ಹೆಸರು ಚಿಜಥಿssಜಞ@ಥಿಚಿhoo.ಛಿom ಗೆ ಇಮೇಲ್ ಮೂಲಕ ಅಥವಾ ಖುದ್ದಾಗಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು (೦೮೨೪-೨೪೫೧೨೬೪, ೮೧೦೫೧೦೦೭೮೧, ೭೮೯೯೨೬೬೬೯೭) ಇವರನ್ನು ಸಂಪರ್ಕಿಸಬಹುದೆAದು ಇಲಾಖೆಯ ಪ್ರಕಟಣೆ ತಿಳಿಸಿರುವುದಾಗಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಬೆಳ್ತಂಗಡಿ ಇವರು ಮಾಹಿತಿ ನೀಡಿರುತ್ತಾರೆ.

Related posts

ಆ.15: ತೆಂಕಕಾರಂದೂರು- ಕಾಪಿನಡ್ಕ ಗೆಳೆಯರ ಬಳಗ ಮತ್ತು ಶ್ರೀ ಹರಿ ಭಜನಾ ಮಂಡಳಿಯಿಂದ ಮೊಸರು ಕುಡಿಕೆ ಉತ್ಸವ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ ಪದ್ಮನಾಭ ಮಾಣಿಂಜರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರಿಂದ ಎರಡು ಕುಟುಂಬಕ್ಕೆ ಸಹಾಯಹಸ್ತ

Suddi Udaya

ನಾಪತ್ತೆಯಾಗಿದ್ದ ಕೊಯ್ಯೂರು ನಿವಾಸಿ ಮುಹಮ್ಮದ್ ಯಾಸಿರ್ ಬೆಂಗಳೂರಿನಲ್ಲಿ ಪತ್ತೆ

Suddi Udaya

ಭಾರೀ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ: ಪಜಿರಡ್ಕದಲ್ಲಿ ಗಂಗಾಪೂಜೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವ

Suddi Udaya
error: Content is protected !!