September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ಸಾರಥ್ಯದಲ್ಲಿ ದೋಸೆ ಹಬ್ಬ – ಹಗ್ಗಜಗ್ಗಾಟ

ಶಿಶಿಲ : ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ಸಾರಥ್ಯದಲ್ಲಿ ದೋಸೆ ಹಬ್ಬ -ಬೃಹತ್ ಹಗ್ಗಜಗ್ಗಾಟ ಕಾರ್ಯಕ್ರಮ ಶಿಶಿಲದ ಅಡ್ಡಹಳ್ಳ ದಲ್ಲಿ ಅ. 19ರಂದು ನಡೆಯಿತು.

ಮುಂಜಾನೆ ದೋಸೆ ಹಬ್ಬಕ್ಕೆ ಶಿಶಿಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ ಚಾಲನೆ ನೀಡಿದರು. ರಾತ್ರಿ ಅಡ್ಡಹಳ್ಳ ಫ್ರೆಂಡ್ಸ್ ತಂಡದ ಅಧ್ಯಕ್ಷರಾದ ಕರುಣಾಕರ ಶಿಶಿಲ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ರವರು ಉದ್ಘಾಟಿಸಿ ಶುಭ ಕೋರಿದರು.

ಮುಖ್ಯ ಅತಿಥಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ, ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀನ್ ಡಿ, ಶಿಶಿಲೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸುನಿಲ್ ಗೋಖಲೆ, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಶಿಲ ವಲಯದ ಮೇಲ್ವಿಚಾರಕರಾದ ಗಾಯತ್ರಿ ಮತ್ತು ರಶ್ಮಿತಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಅತಿಥಿಗಳನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಚಂದನ ಕುಮಾರಿ ನಡೆಸಿಕೊಟ್ಟು ಶಿವಾನಂದ ಶಿಶಿಲ ಧನ್ಯವಾದವಿತ್ತರು.

ಶಿಶಿಲ ಗ್ರಾಮ ಮುಂದಿನ ದಿನಗಳಲ್ಲಿ ಪ್ರವಾಸಿಗರ ತಾಣವಾಗಲಿದೆ – ಶಾಸಕ ಹರೀಶ್ ಪೂಂಜ

ದೋಸೆ ಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜಾರ ಬಳಿ ಕಾರ್ಯಕ್ರಮದ ಆಯೋಜಕರಾದ ಕರುಣಾಕರ ಶಿಶಿಲ ಮತ್ತು ಸಂದೀಪ್ ಅಮ್ಮುಡಂಗೆ ಮಾತನಾಡಿ ಇನ್ನೆರಡು ತಿಂಗಳಲ್ಲಿ ಶಿಶಿಲ ಸರಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಗೆ ಕೇಂದ್ರ ಸಚಿವರನ್ನು ಕರೆತರಬೇಕು ಕೇಂದ್ರ ಸಚಿವರೊಬ್ಬರೂ ಶಿಶಿಲಕ್ಕೆ ಆಗಮಿಸಿದರೆ ಇದು ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರೂ ಆಗಮಿಸಿದಂತೆ ಆಗುತ್ತದೆ ಈ ಹಿಂದೆ ಇಂದಿರಾ ಗಾಂಧಿ ಭೇಟಿ ನೀಡಿದ್ದರು, ಅಗ ಅವರು ಯಾವುದೇ ಹುದ್ದೆಯಲ್ಲಿರಲಿಲ್ಲ. ಈ ಬಾರಿ ಕೇಂದ್ರ ಸಚಿವರು ಶಿಶಿಲಕ್ಕೆ ಆಗಮಿಸಿದರೆ ಅವರ ಬಳಿ ಶಿಶಿಲದ ಸಮಗ್ರ ಅಭಿವೃದ್ಧಿ ಮತ್ತು ಶಿಶಿಲವನ್ನು ಪ್ರವಾಸಿ ತಾಣವಾಗಿ ಹೇಗೆ ರೂಪುಗೊಳಿಸಬೇಕು ಎಂಬುದರ ರೂಪುರೇಷೆಯನ್ನು ಸಿದ್ದಪಡಿಸಿ ಕೊಡುತ್ತೇವೆ ಎಂದು ಶಾಸಕರ ಬಳಿ ತಿಳಿಸಿದಾಗ ಶಾಸಕರು ಮಾತನಾಡಿ ನಿಮ್ಮ ಈ ಉತ್ತಮ ಆಲೋಚನೆಗೆ ನನ್ನ ಬೆಂಬಲ ನೂರಕ್ಕೆ ನೂರರಷ್ಟು ನೀಡುತ್ತೇನೆ ಶೋಭಾ ಕರಂದ್ಲಾಜೆ ಅಥವಾ ವಿ ಸೋಮಣ್ಣ ಇವರಿಬ್ಬರಲ್ಲಿ ಒಬ್ಬ ಸಚಿವರನ್ನು ಖಂಡಿತ ಕರೆದುಕೊಂಡು ಬರುತ್ತೇನೆ ಅದಲ್ಲದೆ ಶಿಶಿಲ ಗ್ರಾಮ ಪ್ರವಾಸಿ ತಾಣವಾಗುವ ಕನಸು ನಾನು ಕೂಡ ಕಂಡಿದ್ದೇನೆ ಎಂದು ತಿಳಿಸಿದರು.

Related posts

ಗೋಕರ್ಣನಾಥ ಕೋ ಅಪರೇಟಿವ್ ಬ್ಯಾಂಕ್ ಚುನಾವಣೆ: ಯುವವಾಹಿನಿ ಕೇಂದ್ರ ಸಮಿತಿ ನಿಕಟಪೂರ್ವಾಧ್ಯಕ್ಷ ಬಳಂಜ ಬೈಲಬರಿ ಹರೀಶ್ ಕೆ ಪೂಜಾರಿಯವರಿಗೆ ಗೆಲುವು

Suddi Udaya

ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರ ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಅಳದಂಗಡಿ ಬಂಟರ ವಲಯ ಸಮಿತಿಯಿಂದ ‘ಬಂಟೆರ್ನ ಆಟಿದ-ಕೂಟ’

Suddi Udaya

ನಾಳೆ(ಜು.8) ಧರ್ಮಸ್ಥಳದಿಂದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

Suddi Udaya

ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಸ್‌ಡಿಎಂ ಕಾಲೇಜು ಆಫ್ ನ್ಯಾಚುರೋಪತಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!