September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ

ಶಿಶಿಲ : ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ ಭಗವಾನ್ ೧೦೦೮ ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣೋತ್ಸವವು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಜರಗಿತು.


ಭಗವಾನ್ ತೀರ್ಥಂಕರರಿಗೆ ಹಾಲು, ಗಂಧ, ಸಿಯಾಳ, ಚಂದನ ಮುಂತಾದ ದ್ರವ್ಯಗಳಿಂದ ಅಭಿಷೇಕಗಳನ್ನು ಮಾಡಿ ಮಹಾಮತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿ ಸಾಮೂಹಿಕ ಆರತಿ ಬೆಳಗುವುದರೊಂದಿಗೆ ಜಿನ ಭಜನೆಯೊಂದಿಗೆ ಪೂಜಾ ಮಹೋತ್ಸವ ನಡೆಯಿತು.


ಈ ಸಂದರ್ಭದಲ್ಲಿ ವಿದ್ಯುತ್ ಚಾಲಿತ ಬ್ಯಾಂಡ್ ಸೆಟ್‌ನ್ನು ಶ್ರೀಮತಿ ಶ್ರೇಯ ವಿಶಾಲ್ ಹೆಗಡೆ ಕಾಯರ್ತಡ್ಕ ಇವರು ದಾನ ನೀಡಿದರು. ಎಲ್ಲರ ಸಹಕಾರದಿಂದ ದೋಸೆ ಹಬ್ಬವನ್ನು ಆಚರಿಸಲಾಯಿತು. ಅತಿ ಹೆಚ್ಚು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದು ಡಾ. ಕೆ. ಜಯಕೀರ್ತಿ ಜೈನ್, ಹೆಚ್. ವಿಜಯಕುಮಾರ್, ಫಣಿರಾಜ್ ಜೈನ್, ಯುವರಾಜ್ ಜೈನ್, ಸಂತೋಷ್ ಜೈನ್, ಅತಿಶಯ ಜೈನ್, ವಿಜೇಶ್ ಜೈನ್, ಭುವನ್ ಜೈನ್, ಪ್ರೀತಮ್ ಜೈನ್ ಹಾಗೂ ರಾಣಿ ಶ್ರೀ ಕಾಳಾಲಾ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಸಹಕರಿಸಿದರು.

Related posts

ಕಳೆಂಜ: ಗ್ರಾಮಾಭ್ಯುದಯ ಅನುಷ್ಠಾನ ಸಮಿತಿ ಮತ್ತು ಶಿಬರಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ

Suddi Udaya

ಇಂದಬೆಟ್ಟು ಗ್ರಾ. ಪಂ.ವ್ಯಾಪ್ತಿಯ ಕಜೆ – ಶಾಂತಿನಗರ ಪರಿಸರದಲ್ಲಿ ಬಿರುಗಾಳಿಗೆ ವ್ಯಾಪಕ ಹಾನಿ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿಯೇ ದಾಖಲೆ ಮಟ್ಟದಲ್ಲಿ 11,000 ಚ.ಅಡಿಯ ಮೇಲ್ಚಾವಣಿಯ ನೀರನ್ನು ಬೋರ್ವೆಲ್ ಗೆ ನೀರಿಂಗಿಸುವ ಜಲ ಜಲಮರುಪುರಣಕ್ಕೆ ಚಾಲನೆ

Suddi Udaya

ಸಿರಿ ಸಂಸ್ಥೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೇರಿಲ್ ರವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಅಭಿನಂದನೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya
error: Content is protected !!