32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ : ಅಸಹಜ ಸಾವು ಪ್ರಕರಣ : ಮಾಸಾಂತ್ಯಕ್ಕೆ ಎಸ್‌ಐಟಿ ಯಿಂದ ವರದಿ ಸಲ್ಲಿಕೆ

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಎಸ್‌ಐಟಿ ತಂಡ ಈ ಮಾಸಾಂತ್ಯಕ್ಕೆ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ.

ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಸರ್ಕಾರ ಜುಲೈ 20ರಂದು ಸಿಐಡಿ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿತ್ತು. ಗೃಹ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಎಸ್‌ಐಟಿ ತಂಡದ ತನಿಖೆ ಈಗ ಬಹುತೇಕ ಮುಕ್ತಾಯಗೊಂಡಿದ್ದು, ಸಂಗ್ರಹಗೊಂಡ ಮಾಹಿತಿ, ವೈಜ್ಞಾನಿಕ ತನಿಖೆ, ಎಫ್‌ಎಸ್ಎಲ್ ವರದಿ ಇತ್ಯಾದಿ ಅಂಶಗಳ ವಿಶ್ಲೇಷಣೆ ಹಾಗೂ ಅಂತಿಮ ವರದಿಯ ತಯಾರಿ ನಡೆಯುತ್ತಿದೆ. ಈ ಮಾಸಾಂತ್ಯಕ್ಕೆ ಎಸ್‌ಐಟಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿದುಬಂದಿದೆ.


ಮೂಲಗಳ ಪ್ರಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಒಂದು ತಾರ್ಕಿಕ ಅಂತ್ಯ ನೀಡುತ್ತದೆ ಎಂದು ಹೇಳಲಾಗುತ್ತಿದ್ದು, ವರದಿಯ ಯಾವುದೇ ಅಂಶಗಳು ಸೋರಿಕೆಯಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ. ಎಸ್‌ಐಟಿ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿರುವುದರಿಂದ ಯಾವುದೇ ಆಡಳಿತಾತ್ಮಕ ಲೋಪವಾಗದಂತೆ ನೋಡಿಕೊಳ್ಳಿ ಎಂದು ಸರ್ಕಾರ ನಿರ್ದೇಶನ ನೀಡಿದೆ ಎನ್ನಲಾಗಿದೆ.

Related posts

ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂಜನಾ ಎಂ.ಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ “ ದೀಕ್ಷಾ ಸಂಸ್ಕಾರ” ಸಮಾರಂಭ

Suddi Udaya

ಪಡ್ಡಂದಡ್ಕದಲ್ಲಿ ಬಕ್ರೀದ್ ಆಚರಣೆ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರು ನಾರಾಯಣ ಸೇವಾ ಸಮಿತಿಯಿಂದ ಸುಲ್ಕೇರಿ ಅಂಗನವಾಡಿ ಹಾಗೂ ಶ್ರೀರಾಮ ಶಾಲೆಯಲ್ಲಿ ಶ್ರಮದಾನ

Suddi Udaya

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಮೊಟ್ಟೆ ಕೋಳಿ ತರಬೇತಿ ಕಾರ್ಯಾಗಾರ

Suddi Udaya
error: Content is protected !!