ನಾವೂರು: ನಾವೂರು ಗ್ರಾಮ ಪಂಚಾಯತ್, ಪಶುಸಂಗೋಪನೆ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರವು ಅ.24ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಶ್ರೀಮತಿ ಮಮತ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಸದಸ್ಯರಾದ ಗಣೇಶ್ ಗೌಡ, ಶ್ರೀಮತಿ ವೇದಾವತಿ, ಎನ್ ಕೆ ಹಸೈನಾರ್, ಪಶುವೈದ್ಯಾಧಿಕಾರಿಯಾದ ರಾಜ ವರ್ಮ, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ವರ್ಗ, ನಡ ಮತ್ತು ನಾವೂರಿನ ಪಶು ಸಖಿಯರು , ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಧರು ಉಪಸ್ಧಿತರಿದ್ದರು. ಗ್ರಾಮದ ಸುಮಾರು 250 ಕ್ಕಿಂತಲೂ ಹೆಚ್ಚು ಸಾಕು ನಾಯಿಗಳಿಗೆ ರೋಗನಿರೋಧಕ ಲಸಿಕೆ ಹಾಕಲಾಯಿತು.











