September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದುಬೈಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಕೊಲ್ಲಿ ರಾಷ್ಟ್ರದ ದುಬೈಯ ಗ್ರಾಂಡ್ ಮಿಲೇನಿಯಮ್ ಹೋಟೆಲ್ ನಲ್ಲಿ ಅ.26ರಂದು ದುಬೈ ಬಿಲ್ಲವ ಸಂಘದ 27ನೇ ವರ್ಷದ ಕುಟುಂಬ ಸಮ್ಮಿಲನದ ಆಚರಣೆಯನ್ನು ಅದ್ದೂರಿಯಾಗಿ ದೀಪಕ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನ. 23ರಂದು ನಡೆಯುವ ಯಾತ್ರಿ ನಿವಾಸದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದುಬೈ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರು ಉದ್ಯಮಿ ಎಸ್ ಆರ್ ಜಿತೇಂದ್ರ ಸುವರ್ಣ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಶ್ರೀಮತಿ ಗೀತಾಂಜಲಿ ಸುವರ್ಣ ಉಡುಪಿ, ಶ್ರೀಮತಿ ಕೃತಿನ್ ಅಮೀನ್ ಮಂಗಳೂರು ಹಾಗೂ ಇತರ ಗಣ್ಯರು ಹಾಜರಿದ್ದರು. ಗೆಜ್ಜೆಗಿರಿಯ ಯಾತ್ರಿ ನಿವಾಸದ ಉದ್ಘಾಟನೆಯ ಸಂದರ್ಭದಲ್ಲಿ ಹೆಚ್ಚಿನ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಯವರು ತಿಳಿಸಿದರು.

ಪ್ರಜ್ಞಾ ಓಡಿಲ್ನಾಳ ನಿರೂಪಿಸಿದ ಕಾರ್ಯಕ್ರಮದಲ್ಲಿ ದುಬೈ ಬಿಲ್ಲವ ಬಂಧುಗಳ ಮತ್ತು ಶ್ರೀಮತಿ ಶೃತಿ ಹೆರಾಜೆ ತಂಡದವರಿಂದ ನೃತ್ಯ ಪ್ರದರ್ಶನ ನೆರೆದಿದ್ದ ಜನರ ಮನ ಸೂರೆಗೊಂಡಿತು.

Related posts

ಕಾರ್ಗಿಲ್ ವಿಜಯ ದಿನ: ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಕಾರ್ಗಿಲ್ ವನಕ್ಕೆ ಭೇಟಿ

Suddi Udaya

ನಾಳೆ (ಏ.19): ವಿ.ಹಿಂ.ಪ. ಬೆಳ್ತಂಗಡಿ ಪ್ರಖಂಡದಿಂದ ಉಜಿರೆಯಲ್ಲಿ ರಾಮೋತ್ಸವ; ಚಕ್ರವರ್ತಿ ಸೂಲಿಬೆಲೆಯವರಿಂದ ಧಾರ್ಮಿಕ ಉಪನ್ಯಾಸ

Suddi Udaya

ನಾಟಿ ವೈದ್ಯ ಬಾಬು ಗೌಡ ಅಂಡೆಟ್ಟು ನಿಧನ

Suddi Udaya

ಭರತನಾಟ್ಯ ವಿಧ್ವತ್ ಅಂತಿಮ ಪರೀಕ್ಷೆ : ಗುರುವಾಯನಕೆರೆಯ ಸುಕನ್ಯಾ ಕಾಮತ್ ಉತ್ತೀರ್ಣ

Suddi Udaya

ಉಜಿರೆಯ ಸ್ನೇಕ್ ಜಾಯ್ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಮಚ್ಚಿನ: ಹಿರಿಯ ಅಂಚೆಪಾಲಕ ರಮೇಶ್ ರಾವ್ ನಿಧನ

Suddi Udaya
error: Content is protected !!