September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ ಸಂತ ಅಂತೋನಿ ಕಾಲೇಜಿನಲ್ಲಿ ಸಂಭ್ರಮ 2025

ನಾರಾವಿ : ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಹಾಗೂ ಪದವಿಪೂರ್ವ ಕಾಲೇಜಗಳು ಸೇರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಶೈಕ್ಷಣಿಕ ತರಬೇತಿ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಸಂಭ್ರಮ 2025 ಕಾಲೇಜು ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪದುವಾ ಕಾಲೇಜು ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಇಲ್ಲಿನ ಪ್ರಾoಶುಪಾಲರಾದ ವಂ. ಸ್ವಾಮಿ ಅರುಣ್ ವಿಲ್ಸನ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ರಂಗ ಭೂಮಿ ಹಾಗೂ ಚಲನಚಿತ್ರ ನಟ ರವಿ ರಾಮಕುಂಜ ಹಾಗೂ ಖ್ಯಾತ ಟಿವಿ ನಿರೂಪಕಿ ಕುಮಾರಿ ಕೀರ್ತಿ ಎಸ್ ಇವರು ಆಗಮಿಸಿದ್ದರು.

ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವo. ಸ್ವಾಮಿ ಜೆರೋಮ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾರಾವಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಮೀರಾಂದ, ಕಾರ್ಯದರ್ಶಿ ಎವ್ಜಿನ್ ರೋಡ್ರಿಗಸ್, ನಾರಾವಿ ಗ್ರಾಮ ಪಂಚಾಯತ್ ಸದಸ್ಯೆ ಡೈನಾ ರೋಡ್ರಿಗಸ್, ನಾರಾವಿ ಪ್ರೌಢ ಶಾಲೆ ನಾರಾವಿಯ ಮುಖ್ಯ ಅಧ್ಯಾಪಕ ಗೋಪಾಲಕೃಷ್ಣ ತುಳುಪುಳೆ, ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಅಧ್ಯಾಪಕಿ ಶ್ರೀಮತಿ ಸೋಫಿಯಾ ಫೆರ್ನಾಂಡಿಸ್, ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಅಧ್ಯಾಪಕರಾದ ರಿಚರ್ಡ್ ಮೋರಸ್, ಸಂಭ್ರಮ 2025 ಕಾರ್ಯಕ್ರಮದ ಆಯೋಜಕರಾದ ಅವಿಲ್ ಮೋರಸ್, ದಿನೇಶ್ ಬಿ ಕೆ ಉಪಸ್ಥಿತರಿದ್ದರು.

ಪ್ರಾoಶುಪಾಲರಾದ ಸಂತೋಷ್ ಸಲ್ದಾನಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರವಿ ರಾಮಕುಂಜ ಹಾಗೂ ಕುಮಾರಿ ಕೀರ್ತಿ ಎಸ್ ಇವರನ್ನು ಸನ್ಮಾನಿಸಲಾಯಿತು. ಹಿಂದಿ ಉಪನ್ಯಾಸಕಿ ಶ್ರೀಮತಿ ಆಶಾ ಧನ್ಯವಾದವಿತ್ತರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಬಿ ಕಾರ್ಯಕ್ರಮ ನಿರೂಪಿಸಿದರು. ಸೇಕ್ರೆಟ್ ಹಾರ್ಟ್ ಕಾಲೇಜು ಮಡoತ್ಯಾರು ಇಲ್ಲಿನ ಉಪನ್ಯಾಸಕ ಅವಿನಾಶ್ ಲೋಬೋ, ಕಾರ್ಯಕ್ರಮ ನಿರೂಪಕ ಜೋವೆಲ್ ಫೆರ್ನಾಂಡಿಸ್ ಹಾಗೂ ಕು. ಕೀರ್ತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸಂತ ಪಾವ್ಲರ ಆಂಗ್ಲ ಮಾಧ್ಯಮ ಶಾಲೆ ನಾರಾವಿ ಪ್ರಥಮ ಸಮಗ್ರ ಪ್ರಶಸ್ತಿಯನ್ನೂ, ಅಳದಂಗಡಿ ಸಂತ ಪೀಟರ್ ಕ್ಲೇವರ್ ಚರ್ಚ್ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.

Related posts

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇಯ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ:ಶಾಲಾ ಮಕ್ಕಳಿಗೆ ಊಟದ ಬಟ್ಟಲು, ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

Suddi Udaya

ಆಮಂತ್ರಣ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ವಿಂಧ್ಯಾ ಎಸ್.ರೈ ಮತ್ತು ಉಪಾಧ್ಯಕ್ಷರಾಗಿ ಅನಿತಾ ಶೆಟ್ಟಿ ಆಯ್ಕೆ

Suddi Udaya

ಬಾರ್ಯ ಸ್ಪಂದನ ರೈತರ ಸೇವಾ ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Suddi Udaya

ಉಜಿರೆ: ಮನರಂಜನಾ ಕ್ಷೇತ್ರದಲ್ಲಿ ಎಐ ಬಳಕೆ ಕುರಿತು ವಿಶೇಷ ಉಪನ್ಯಾಸ

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಅನನ್ಯ ರಾಜ್ಯಕ್ಕೆ ಪ್ರಥಮ

Suddi Udaya
error: Content is protected !!