31.8 C
ಪುತ್ತೂರು, ಬೆಳ್ತಂಗಡಿ
October 3, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾರ್ಯ ಸ್ಪಂದನ ರೈತರ ಸೇವಾ ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

ಬಾರ್ಯ: ಬಾರ್ಯದ ಮೂರುಗೋಳಿ ಶ್ರೀ ಪಾಂಡುರಂಗ ಭಜನಾಮಂದಿರದಲ್ಲಿ‌ ಬಾರ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಸೇಸಪ್ಪ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸ್ಪಂದನಾ ರೈತರ ಸೇವಾ ಕೂಟದ ಕಾರ್ಯಕಾರಿಣಿ ಸಭೆ ಸೇರಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

ಬಾರ್ಯ ಸಿಎ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಗೌಡ, ಪ್ರವೀಣ್ ರೈ ಹಾಗೂ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಪೈ, ರಾಜೇಶ್ ರೈ,ನೂತನ ಸಮಿತಿಯ ರಚನೆಗೆ ವಿಚಾರ ಮಂಡಿಸಿದರು. ಬಾರ್ಯ‌, ಪುತ್ತಿಲ ಗ್ರಾಮದ ಸಮಸ್ತ ರೈತರನ್ನು ಸದಸ್ಯರನ್ನಾಗಿಸಿ ಎರಡೂ ಗ್ರಾಮಗಳಿಗೂ ಸಮಾನಾಗಿ ಪ್ರಾಧಾನ್ಯತೆ ನೀಡವಂತೆ ಸಮಿತಿ ರಚಿಸಿ ಕಾರ್ಯಾಚರಿಸುವಂತೆ ಪ್ರಗತಿಪರ ಕೃಷಿಕರಾದ ಮೋನಪ್ಪ ಗೌಡ ಮಣಿಲ ಸಲಹೆ ನೀಡಿದಾಗ ಎರಡು ಗ್ರಾಮದ ಸದಸ್ಯರು ಸಮ್ಮಿತಿಸಿದರು.

ಮುಂದಿನ ಅವಧಿಗೆ ಅಧ್ಯಕ್ಷರಾಗಿ ರೋಹಿತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮನೋಹರ್ ಶೆಟ್ಟಿ, ಮೋನಪ್ಪ ಗೌಡ, ಕಾರ್ಯದರ್ಶಿ ಯಾಗಿ ವಿಶ್ವನಾಥ ಗೌಡ ಅಜಿರ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ಕುರುಡಂಗೆ, ಕೋಶಾಧಿಕಾರಿಯಾಗಿ ರಾಮಣ್ಣ ಗೌಡ, ಉಪಾಧ್ಯಕ್ಷರಾಗಿ ಜಗದೀಶ, ಗೌರವ ಸಲಹೆಗಾರರಾಗಿ ಮಂಜುನಾಥ್ ಸಾಲ್ಯಾನ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸೇವಾ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರು ಖಾಯಂ ಆಹ್ವಾನಿತರಾಗಿ ಹಾಗೂ ಸದಸ್ಯ ರೈತರು ಒಟ್ಟು ಸೇರಿ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ರೈತರು ಕೃಷಿ ಚಟುವಟಿಕೆ, ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸವನ್ನು ಮಾಡಿ ಕೂಟದ ಉದ್ದೇಶವನ್ನು ಪ್ರಸನ್ನ ಗೌಡ ಪ್ರವೀಣ್ ರೈ ಸಭೆಗೆ ಸಮಗ್ರ ಮಾಹಿತಿ ನೀಡಿದರು. ಸಿಎ ನಿರ್ದೇಶರಾದ ಬ್ಯಾಂಕ್ ಮೋನಪ್ಪ ಗೌಡ ಅಜಿರ, ಸವಿತಾ, ಅರುಣ ಬಂಗೇರ, ವಸಂತ ಗೌಡ, ಶಿವರಾಮ ,ಹೇಮಾವತಿ, ಅರ್ಪಿತ್, ಚಂದ್ರಶೇಖರ ,ಸಿಎ ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಸತೀಶ್, ಹಾಗೂ ರಾಮಣ್ಣ ಕುರುಡಂಗೆ ,ಯಜ್ಞೇಶ್ , ಶ್ರೀಧರ್ ಪೆಲತ್ತಾಜೆ ಮತ್ತಿರರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿಯ ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಸುವರ್ಣ ಮಾಲಕತ್ವದಲ್ಲಿ ಗುರುವಾಯನಕೆರೆಯಲ್ಲಿ ‘ಸುವರ್ಣ ಕಾಂಪ್ಲೇಕ್ಸ್’ ಹಾಗೂ ‘ಸುವರ್ಣ ಸ್ಟುಡಿಯೋ’ ಉದ್ಘಾಟನೆ

Suddi Udaya

ಮದ್ದಡ್ಕ ತೋಟಗಾರಿಕೆ ಇಲಾಖೆಯ ಆವರಣ ಗೋಡೆ ಕುಸಿತ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ: ಡಾ. ಡಿ ವೀರೇಂದ್ರ ಹೆಗ್ಗಡೆಯರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮೂಡುಕೋಡಿ ಮುಂಡೇಲು ನಿವಾಸಿ ಪೂವಪ್ಪ ಮೂಲ್ಯ ನಿಧನ

Suddi Udaya

ನೆರಿಯ: ರಬ್ಬರ್ ತೋಟದಲ್ಲಿ ಚಿರತೆ ಓಡಾಟ

Suddi Udaya

ಏ.7: : ಶ್ರೀ ದುರ್ಗಾ ಬ್ಯಾಟರಿ ಸೋಲಾರ್ ಮತ್ತು ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಶುಭಾರಂಭ

Suddi Udaya
error: Content is protected !!