ಧಾರ್ಮಿಕ

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ಮಹಾಗೋಪುರ, ಸಮುದಾಯ ಭವನದ ಲೋಕಾರ್ಪಣೆಯ ಪೂರ್ವಭಾವಿ ಸಭೆ

ಉರುವಾಲು: ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ಮಹಾಗೋಪುರ ಮತ್ತು ಸಮುದಾಯ ಭವನದ ಲೋಕಾರ್ಪಣೆಯ ಪೂರ್ವಭಾವಿ ಸಭೆ ಅ.೨೩ರಂದು ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಜರುಗಿತು.

ಶಾಸಕ ಹರೀಶ್ ಪೂಂಜ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಗೋಪುರ ಉದ್ಘಾಟನೆ ಹಾಗೂ ಸಭಾಭವನ ಲೋಕರ್ಪಾಣೆ ಕಾರ್ಯಕ್ರಮ ಮುಂಬರುವ ಡಿಸೆಂಬರ್ ೭ ಹಾಗೂ ೮ರಂದು ವೈಧಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ. ಅಥರ್ವಶೇಷ ಗಣಯಾಗ ಹಾಗೂ ಮಹಾ ಚಂಡಿಕಾಯಾಗಕ್ಕೆ ಉರುವಾಲು ಗ್ರಾಮದ ಪ್ರತಿ ಮನೆಗಳಿಂದ ಒಂದು ಮುಷ್ಟಿ ಎಳ್ಳು ಹಾಗೂ ನಾರಿಕೇಳವನ್ನು ಮನೆ ದೇವರ ಮುಂದೆ 11 ದಿನ ಇರಿಸಿ ಪೂಜಿಸಿದಲ್ಲಿ ಗ್ರಾಮ ಸುಭೀಕ್ಷೆಗೊಂಡು ನಮಗೆ ದೇವರ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದು ವಿವರಿಸಿದರು.

ಭಜನಾ ಮಂದಿರದ ಮಹಾಗೋಪುರ ಹಾಗೂ ಸಮುದಾಯ ಭವನದ ಲೋಕಾರ್ಪಣೆಯು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಮೈಸೂರಿನ ರಾಜಮನೆತನದ ಯದುವೀರ್ ಕೃಷ್ಣದತ್ತ ಒಡೆಯರ್ ಭಾಗವಹಿಸುವುದರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ, ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳ ನೇಮಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಮೊಕ್ತೇಸರರಾದ ಅತುಲ್ ಕುಮಾರ್ ಹಲೇಜಿ, ಕೊರಿಂಜ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಯೋಗೀಶ್ ಕುಮಾರ್ ಕಡ್ತಿಲ, ಶ್ರೀ ಕ್ಷೇತ್ರ ಧ.ಗ್ರಾ.ಯೋ ಮೇಲ್ವಿಚಾರಕರಾದ ವಿಶ್ವನಾಥ ಪೂಜಾರಿ, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ಪದ್ಮುಂಜ ಪ್ಯಾಕ್ಸ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಕಣಿಯೂರು ಗ್ರಾ.ಪಂ.ಸದಸ್ಯ ಸೀತಾರಾಮ ಮಡಿವಾಳ, ವಿವಿಧ ಧಾರ್ಮಿಕ ಸಾಮಾಜಿಕ ಕ್ಷೇತ್ರದ ಮುಖಂಡರುಗಳು, ಕಣಿಯೂರು ಜಿ.ಪಂ. ವ್ಯಾಪ್ತಿಯ ಎಲ್ಲಾ ಭಜನಾ ಮಂಡಳಿಯ ದೇವಸ್ಥಾನದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗೌರಿ ಗಣೇಶ ಮಾತೃ ಮಂಡಳಿಯ ಪದಾಧಿಕಾರಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು. ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕ ರೋಹಿತ್ ಶೆಟ್ಟಿ ಕುಪ್ಪೆಟ್ಟಿ ಸ್ವಾಗತಿಸಿ, ಹರೀಶ್ ಶೆಟ್ಟಿ ವಂದಿಸಿದರು.

Related posts

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಸುರ್ಯ ದೇವಸ್ಥಾನಕ್ಕೆ ಭೇಟಿ

Suddi Udaya

ಲಾಯಿಲ: 36ನೇ ವರ್ಷದ ಶ್ರೀ ಗಣೇಶೋತ್ಸವ ಉದ್ಘಾಟನೆ

Suddi Udaya

ಕೊಕ್ಕಡ : ಮಾಯಿಲಕೋಟೆ ಸೀಮೆ ದೈವಗಳ ಪ್ರಥಮ ವಾರ್ಷಿಕ ನೇಮೋತ್ಸವ

Suddi Udaya

ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವಾರ್ಪಣೆ

Suddi Udaya

ಎ 28-ಮೇ 1:ಮರೋಡಿ ಪೊಸರಡ್ಕ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಸಂಭ್ರಮ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇಗುಲದ ಅಷ್ಠಬಂಧ ಬ್ರಹ್ಮಕಲಶ: ಧಾರ್ಮಿಕ ಸಭೆ

Suddi Udaya
error: Content is protected !!