ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಮಸ್ಯೆ

ಮೂಲ ಸೌಕರ್ಯದಿಂದ ವಂಚಿತವಾಗಿದೆ ಬಂಗಾಡಿ ಅಂಗನವಾಡಿ ಕೇಂದ್ರ: ಸಮಸ್ಯೆಯನ್ನು ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ

ಇಂದಬೆಟ್ಟು: ಇಲ್ಲಿಯ ಬಂಗಾಡಿ 2ನೇ ವಾರ್ಡ್ ನಲ್ಲಿರುವ ರೂ. 16 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭದಲ್ಲಿ 20-25 ಮಕ್ಕಳಿದ್ದು, ಈಗ ಇಲ್ಲಿ ಹಲವು ಸಮಯಗಳಿಂದ ಕುಡಿಯಲು ಹಾಗೂ ಶೌಚಾಲಯಕ್ಕೆ ನೀರೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಪಂಚಾಯಿಂದ ಬರುವ ನಳ್ಳಿ ನೀರು ಅಂಗನವಾಡಿ ವರೆಗೆ ತಲುಪುವುದೇ ಇಲ್ಲ, ಮಕ್ಕಳು ಶೌಚಾಲಯವಿದ್ದರು ನೀರಿಲ್ಲದ ಕಾರಣ ಅಂಗನವಾಡಿಯ ಹೊರಗಡೆ ಬರಬೇಕು. ಇದರ ಸುತ್ತಮುತ್ತ ಸರಿಯಾದ ಕಂಪೌಂಡ್ ಇಲ್ಲ. ಬದಿಯಲ್ಲೆ ದೊಡ್ಡ ಹೊಂಡಗಳಿದ್ದು ಮಕ್ಕಳಿಗೆ ಅಪಾಯಕಾರಿಯಾಗಿದೆ. ಸುತ್ತಮುತ್ತ ಗೋಡೆ ಬದಿಯಲ್ಲೆ ಗಿಡ ಗಂಟಿಗಳು ಬೆಳೆದು ಹಾವು, ಹೆಗ್ಗಣಗಳ ವಾಸ ಸ್ಥಳವಾಗಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಪೊಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಈಗ 10-12 ಮಕ್ಕಳಿದ್ದು, ಪೊಷಕರೇ ಬಂದು ಬಕೆಟ್, ಕೊಡಪಾನಗಳಲ್ಲಿ ಹತ್ತಿರದ ಮನೆಗಳಿಂದ ಕುಡಿಯಲು ನೀರು ತರುವಂತಾಗಿದೆ.

ಆದರಿಂದ ಸಂಬಂಧಪಟ್ಟ ಅಧಿಕಾರಿಗಳು, ಮೇಲ್ವಿಚಾರಕರು ಇದರ ಕಡೆ ಗಮನಹರಿಸಿ ಶೀಘ್ರದಲ್ಲಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಾರ್ವಜನಿಕ ಆಗ್ರಹವಾಗಿದೆ.

Related posts

ಕಳಿಯ ಬೊಳ್ಳುಕಲ್ಲು ಹನುಮಾನ್ ನಗರ ಶ್ರೀ ದುರ್ಗಾ ಭಜನಾ ಮಂಡಳಿ ವಾರ್ಷಿಕ ಲೆಕ್ಕ ಪತ್ರ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 12 ವರ್ಷ : ಲಾಯಿಲ ಶಕ್ತಿಕೇಂದ್ರ ವತಿಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಲಾಯಿಲದ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣು

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ದಶಮ ಸಂಭ್ರಮದ ಸಭಾ ಕಾರ್ಯಕ್ರಮ

Suddi Udaya

ಶಿಶಿಲ ಗ್ರಾ.ಪಂ. ವತಿಯಿಂದ ಕಿಂಡಿ ಅಣೆಕಟ್ಟುವಿನಲ್ಲಿ ಅಡ್ಡಲಾಗಿ ಬಿದ್ದಿದ್ದ ಮರದ ದಿಮ್ಮಿಗಳ ತೆರವು ಕಾರ್ಯ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಕೃಷಿ ಮಾಹಿತಿ ಮತ್ತು ಕೆಸರು ಗದ್ದೆ ಕೂಟ ಕಾರ್ಯಕ್ರಮ

Suddi Udaya
error: Content is protected !!