23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಗೇರುಕಟ್ಟೆ ಪತಂಜಲಿ ಯೋಗಶಾಖೆಯಲ್ಲಿ ತುಳಸಿ ಪೂಜೆ

ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಕ್ಷೀರ ಸಂಗಮ ಸಬಾಭವನ ಕಳಿಯ ಗೇರುಕಟ್ಟೆ ಯೋಗ ಶಾಖೆಯಲ್ಲಿ ತುಳಸಿ ಪೂಜೆಯನ್ನು ನೆರವೇರಿಸಲಾಯಿತು.

ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್, ಸಹ ಶಿಕ್ಷಕ ಸುಕೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿತ್ಯ ಯೋಗ ತರಗತಿಯನ್ನು ಸತೀಶ್ ನಾಳ ನಿರ್ವಹಿಸಿದರು. ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ತುಳಸಿ ವಿವಾಹ, ತುಳಸಿ ಪೂಜೆಯ ಮಹತ್ವ,ಲೌಕಿಕ ಮತ್ತು ಆಧ್ಯಾತ್ಮಿಕ, ಧಾರ್ಮಿಕ ವಿಧಿ ವಿಧಾನಗಳಲ್ಲಿ ತುಳಸಿಯ ಮಹತ್ವ ಮತ್ತು ತುಳಸಿಯಿಂದ ಸಿಗುವ ಪ್ರಯೋಜನಗಳ ಬಗ್ಗೆ ಭೌದ್ಧಿಕ ನೀಡಿದರು.

ಶಾಖೆಯ ಸಹಶಿಕ್ಷಕ ಸುಕೇಶ್, ವರದಿ ಪ್ರಮುಖ ಕೇಶವ, ಶಾಖೆಯ ಸಂಚಾಲಕ ವಿಜಯಣ್ಣ,ಸತೀಶ್, ಅಶೋಕ, ವಸಂತ ಉಪಸ್ಥಿತರಿದ್ದರು.
ಭಾರತಿ, ಪದ್ಮಲತಾ, ಅರುಣಕ್ಕ ತುಳಸಿ ಪೂಜೆಯನ್ನು ನೆರವೇರಿಸಿ ಪೂಜಾ ಪ್ರಸಾದ ವಿತರಿಸಲಾಯಿತು. ಶಾಖೆಯ ಯೋಗ ಬಂಧುಗಳ ಸಹಕಾರದಿಂದ ಅಮೃತ ಫಲಾಹಾರವನ್ನು ಜೋಡಿಸಲಾಗಿತ್ತು.

Related posts

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂದಾರು ಕಲ್ಲಿಮಾರು ನಿವಾಸಿ ಹರಿಶ್ಚಂದ್ರರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ಧನಸಹಾಯ

Suddi Udaya

ಮಾ.9: ಬಜಿರೆಯಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಯಂಗ್ ಬಾಯ್ಸ್ ಟ್ರೋಫಿ

Suddi Udaya

ಕಲ್ಮಂಜ: ನಿಡಿಗಲ್ ಅಕ್ಷಯನಗರ ಗೆಳೆಯರ ಬಳಗದಿಂದ 26ನೇ ವರ್ಷದ ಆಟೋಟ ಸ್ಪರ್ಧೆ

Suddi Udaya

ಮದ್ದಡ್ಕ ನಿವಾಸಿ ಬೆಲ್ಚೆರ್ ಕ್ರಾಸ್ತ ಹೃದಯಾಘಾತದಿಂದ ನಿಧನ

Suddi Udaya

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ವರದಿ ಸಾಲಿನಲ್ಲಿ ರೂ 198.74 ಕೋಟಿ ವ್ಯವಹಾರ,66.79 ಲಕ್ಷ ನಿವ್ವಳ ಲಾಭ,ಸದಸ್ಯರಿಗೆ 12 ಶೇ ಡಿವಿಡೆಂಟ್ ಘೋಷಣೆ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಭ್ರಮದ ವಾರ್ಷಿಕೋತ್ಸವ

Suddi Udaya
error: Content is protected !!