September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ: ಕುದ್ರಡ್ಕದಲ್ಲಿ ಮೂವರು ಮಕ್ಕಳಿಗೆ ಹಾವು ಕಡಿತ

ಬೆಳ್ತಂಗಡಿ: ಒಂದೇ ಮನೆಯೊಳಗೆ ಮಲಗಿದ್ದ ಮೂವರು ಮಕ್ಕಳಿಗೆ ವಿಷಪೂರಿತ ಕನ್ನಡಿ ಹಾವೊಂದು ಕಡಿದ ಘಟನೆ ನ.2ರಂದು ತಾಲೂಕಿನ ತಣ್ಣೀರುಪಂತ ಸಮೀಪದ ಕುದ್ರಡ್ಕದಲ್ಲಿ ಸಂಭವಿಸಿದೆ. ಗ್ರಾಮೀಣ ಭಾಗವಾಗಿದ್ದು ತಡರಾತ್ರಿ ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ಸಿಗದಿದ್ದಾಗ ನಾಟಿವೈದ್ಯರೊಬ್ಬರ ಸಕಾಲಿಕ ನೆರವಿನಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಅವರ ಮಗ ದಕ್ಷಿತ್ ಮತ್ತು ಅಕ್ಕನ ಮಕ್ಕಳಾದ ವಿಶ್ಮಿತಾ ಹಾಗೂ ಅನ್ವಿತಾ ಒಂದೇ ಕೋಣೆಯಲ್ಲಿ ಮಲಗಿದ್ದು, ರಾತ್ರಿ 11.30ರ ಸುಮಾರಿಗೆ ಕೋಣೆಯೊಳಗೆ ಪ್ರವೇಶಿಸಿದ ವಿಷಪೂರಿತ ಕನ್ನಡಿ ಹಾವು ದಕ್ಷಿತ್ ನ ಎರಡೂ ಕೈಗಳಿಗೆ ಕಚ್ಚಿತು. ಬಳಿಕ ವಿಶ್ಮಿತಾ ಹಾಗೂ ಅನ್ವಿತಾ ಅವರ ಕೈಗೂ ಕಚ್ಚಿದ್ದು ಮಕ್ಕಳು ಭೀತಿಯಿಂದ ಕಂಗೆಟ್ಟಿದ್ದರು.

ಮಕ್ಕಳನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಅನಿವಾರ್ಯ ಇದ್ದರೂ ಉಪ್ಪಿನಂಗಡಿಯನ್ನು ಸಂಪರ್ಕಿಸುವ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯ ದುಃ ಸ್ಥಿತಿಯಿಂದಾಗಿ ಆಸ್ಪತ್ರೆ ತಲುಪುವುದು ವಿಳಂಬವಾಗಿ ಪ್ರಾಣಾಪಾಯವಾಗುವ ಸಾಧ್ಯತೆ ಇರುವುದರಿಂದ ಕಂಗೆಟ್ಟಮನೆಯವರು ತಣ್ಣೀರುಪಂತ ಗ್ರಾಮದಲ್ಲಿನ ನಾಟಿ ವೈದ್ಯ ಸೂರಪ್ಪ ಪೂಜಾರಿ ಅವರ ಮನೆ ಬಾಗಿಲು ತಟ್ಟಿದ್ದರು. ಮಧ್ಯರಾತ್ರಿ ಹಾವು ಕಡಿತಕ್ಕೊಳಗಾಗಿ ಮನೆಗೆ ಬಂದ ಮೂವರು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಾಟಿವೈದ್ಯ ಸೂರಪ್ಪ ಪೂಜಾರಿ (77) ಅವರು ತಾವು ಪರಂಪರಾಗತವಾಗಿ ಅರಿತುಕೊಂಡಿರುವ ಔಷಧವನ್ನು ಮಕ್ಕಳಿಗೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ.

Related posts

ಜಿಲ್ಲಾಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ

Suddi Udaya

ಕಲ್ಮoಜ: ಬೆಳಿಯಪ್ಪ ಗೌಡ ಬದಿಮೆಟ್ಟು ನಿಧನ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

Suddi Udaya

ರೋಟರಿ ಕ್ಲಬ್ ಲೊರೆಟೋ ಹಿಲ್ಸ್‌ನಿಂದ ಹಿರಿಯ ನಾಗರಿಕರಿಗೆ ಗೌರವ ಸನ್ಮಾನ

Suddi Udaya

ಉಜಿರೆ: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಕೂಡ ನೇಣುಬಿಗಿದು ಆತ್ಮಹತ್ಯೆ

Suddi Udaya

ಆ.22: ಬೆಳ್ತಂಗಡಿಯಲ್ಲಿ ಹೋಟೆಲ್ ಶ್ರೀದೇವಿ ಶುಭಾರಂಭ

Suddi Udaya
error: Content is protected !!