22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗೈಡ್ ಸಂಸ್ಥಾಪಕರ ದಿನ ಹಾಗೂ ದ್ವಜ ದಿನಾಚರಣೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದಿಂದ ಸ್ಕೌಟ್ ಗೈಡ್ ಸಂಸ್ಥಾಪಕರ ದಿನಾಚರಣೆ ಹಾಗೂ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಕೇಸರಿ ಮಾತನಾಡಿ ಸ್ಕೌಟ್ ಗೈಡ್ ಗಳಿಂದ ಶಿಸ್ತು, ನಾಯಕತ್ವ ಗುಣ ವೃದ್ಧಿಯಾಗುವುದಲ್ಲದೆ ಸೇವೆಗೆ ಮೀಸಲಾಗಿರುವ ಸ್ಕೌಟ್ ಗೈಡ್ ಸಂಸ್ಥೆ ಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ರಾಷ್ಟ್ರೀಯ ಹಾಗೂ ರಾಜ್ಯ ಸಂಸ್ಥೆ ಬೆಂಗಳೂರು ನೀಡಲ್ಪಟ್ಟ ಧ್ವಜದ ಚೀಟಿಯನ್ನು ಬಿಡುಗಡೆಗೊಳಿಸಿದರು. ಅಲ್ಲದೆ ಹೊಸತಾಗಿ ಸ್ಕೌಟ್ ಗೈಡ್ ತರಬೇತಿಯನ್ನು ಪಡೆದು ಬಂದಂತಹ ಗೈಡ್ ಶಿಕ್ಷಕಿಯರಾದ ಅಮಿತಾ, ಸೌಮ್ಯ, ಮೋಹಿನಿ , ಪುಷ್ಪಲತಾ ಇವರಿಗೆ ಸ್ಕಾಪ್೯ ತೊಡಿಸಿ ಅಭಿನಂದನೆಯನ್ನು ಸೂಚಿಸಿದರು. ಶಿಕ್ಷಕಿಯರು ಪ್ರತಿಜ್ಞಾ ವಿಧಿ ನಿಯಮವನ್ನು ಸ್ವೀಕರಿಸಿದರು.

ವೇದಿಕೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಜೆಸಿಂತಾ ಉಪಸ್ಥಿತರಿದ್ದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ , ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ಶಿಕ್ಷಕಿ ಪ್ರಮೀಳ ಪೂಜಾರಿ ಉಪಸ್ಥಿತರಿದ್ದು, ಕಾರ್ಯಕ್ರಮದ ನೇತೃತ್ವ ವಹಿಸಿ, ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಬ್ ಮಾಸ್ಟರ್ ನೀತಾ ಕೆ.ಎಸ್ ನಿರೂಪಿಸಿ , ಪ್ಲಾಕ್ ಲೀಡರ್ ಪ್ರಮೀಳಾ ಎನ್ ಧನ್ಯವಾದ ಕೋರಿದರು.

ಸ್ಕೌಟ್ ಮಾಸ್ಟರ್ ಗಳಾದ ರಮ್ಯಾ ಬಿ ಎಸ್, ಮಂಜುನಾಥ್, ಜಯರಾಮ್ , ಗೈಡ್ ಕ್ಯಾಪ್ಟನ್ ಕಾರುಣ್ಯ ಸಹಕರಿಸಿದ ಕಾರ್ಯಕ್ರಮದಲ್ಲಿ ಬನ್ನಿಸ್, ಕಬ್ ಬುಲ್ ಬುಲ್ಸ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ರುಡ್‌ಸೆಟ್ ಸಂಸ್ಥೆಯಲ್ಲಿ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕುರಿತು ಉಪನ್ಯಾಸ

Suddi Udaya

ಪ್ರಬಂಧ ಸ್ಪರ್ಧೆ: ಕುಂಭ ಶ್ರೀ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಗೇರುಕಟ್ಟೆ ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ವಲಯ ಮಟ್ಟದ ಬಾಲಕರ ತ್ರೋಬಾಲ್ ಪಂದ್ಯಾಟ: ಬರೆಂಗಾಯ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಅಡುಗೆ ಕೆಲಸಕ್ಕೆ ಹೋದ ಮುಂಡಾಜೆ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ ನಾಪತ್ತೆ: ಪತ್ನಿಯಿಂದ ಪೊಲೀಸರಿಗೆ ದೂರು

Suddi Udaya
error: Content is protected !!