September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಕರಾಯ ಶ್ರೀ ಕೃಷ್ಣ ಭಜನಾ ಮಂದಿರ ಮತ್ತು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಇಲ್ಲಿನ ವಿಶ್ವಾಗೀತಾ ಪರ್ಯಾಯ 2024-2026 ಇದರ ಗೀತೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಕಮ್ಮಟದ ಹಿರಿಯ ಸಂಪನ್ಮೂಲ ವ್ಯಕ್ತಿ ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ ಇವರಿಂದ ಶ್ರೀ ಕೃಷ್ಣ ಭಜನಾ ಮಂದಿರ ಕರಾಯ ಇದರ ಸಭಾಂಗಣದಲ್ಲಿ ಭಜನಾ ತರಬೇತಿ ಕಾರ್ಯಗಾರ ನಡೆಯಿತು.

ಕರಾಯ ವ್ಯಾಪ್ತಿಯ 5 ಭಜನಾ ಮಂಡಳಿಯ 250 ಭಜಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಜನ ಮಂಡಳಿಗಳಿಗೆ ತರಬೇತಿ ನೀಡಲಾಯಿತು. ಈ ತರಬೇತಿ ಕಾರ್ಯಗಾರದಲ್ಲಿ ಶ್ರೀಮತಿ ಸಾವಿತ್ರಿ , ಬೆಳ್ತಂಗಡಿ ತಾಲೂಕು ಕುಣಿತ ಭಜನಾ ತರಬೇತುದಾರರ ತಂಡದ ಅಧ್ಯಕ್ಷ ಸಂದೇಶ್ ಮದ್ದಡ್ಕ, ಭಜನ ಪರಿಷತ್ ಜಿಲ್ಲಾ ಸಮನ್ವಯಧಿಕಾರಿ ಸಂತೋಷ್ ಪಿ ಅಳಿಯೂರು, ಕರಾಯ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ, ಭಜನ ಪರಿಷತ್ ರಾಜ್ಯಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ಭಜನಾ ತರಬೇತುದಾರರ ತಂಡ, ವಲಯ ಮೇಲ್ವಿಚಾರಕರರಾದ ವಿಶ್ವನಾಥ್, ಸೇವಾಪ್ರತಿನಿಧಿ ಸುಜಾತಾ, ಭಜನಾ ತರಬೇತುಧಾರರಾದ ನಾಗೇಶ್ ಬಿ ನೆರಿಯ ಹಾಗು ಭಜನ ಮಂಡಳಿಯ ಸದಸ್ಯರು & ಪೋಷಕರು ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ವಲಯ ಮೇಲ್ವಿಚಾರಕರಾದ ವಿಶ್ವನಾಥ್ ಮಾಡಿದರು. ಮಂಡಳಿಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ ಧನ್ಯವಾದವಿತ್ತರು.

Related posts

ನಿಡ್ಲೆ ಗ್ರಾಮ ಸೇವಾ ಸಮಿತಿ ನೇತೃತ್ವದಲ್ಲಿ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ: ಲಲಿತ ಸಹಸ್ರನಾಮ ಮತ್ತು ಶ್ರೀ ದೇವಿ ಅಷ್ಟೋತ್ತರ ಪಾರಾಯಣ,ಭಜನಾ ಕಾರ್ಯಕ್ರಮ

Suddi Udaya

ಮೇ.31ಕ್ಕೆ ನಿವೃತ್ತರಾಗುತ್ತಿರುವ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ಮೆನೇಜರ್ ಲ| ರವೀಂದ್ರ ಶೆಟ್ಟಿ ಬಳಂಜ

Suddi Udaya

ಎ.12: ಅಳದಂಗಡಿ ಹನುಮೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರಿಗೆ “ಮಹಾಭಿವಂದ್ಯ” ಗೌರವಾಭಿನಂದನೆ

Suddi Udaya

ಧರ್ಮಸ್ಥಳದಲ್ಲಿ ಚಲನಚಿತ್ರ ನಟ ಅನಿರುದ್ಧ್ ಜಟ್ಕರ್ ಆಮಂತ್ರಣ ಸೇವಾ ಪ್ರತಿಷ್ಠಾನದ ಲಾಂಛನ ಬಿಡುಗಡೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿ

Suddi Udaya
error: Content is protected !!