ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹೈಕೋರ್ಟ್ ವಕೀಲ ನಾರಾಯಣ ಸ್ವಾಮಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ

ಬೆಳ್ತಂಗಡಿ : ಹೈ ಕೋರ್ಟ್ ವಕೀಲರಾದ ನಾರಾಯಣ ಸ್ವಾಮಿ ನ.17 ರಂದು ಬೆಳ್ತಂಗಡಿ ನ್ಯಾಯಾಲಯದ ವಕೀಲರ ಭವನಕ್ಕೆ ಭೇಟಿ ನೀಡಿದರು.

ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಹೈಕೋರ್ಟ್ ಖ್ಯಾತ ವಕೀಲ ನಾರಾಯಣ ಸ್ವಾಮಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಭವನಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಬೆಳ್ತಂಗಡಿ ವಕೀಲರ ಸಂಘದ ಹೊಸ ಅಧ್ಯಕ್ಷ ಅಲೋಶಿಯಸ್ ಎಸ್‌.ಲೋಬೊ, ಉಪಾಧ್ಯಕ್ಷ ಶ್ರೀನಿವಾಸ್ ಗೌಡ ಮತ್ತು ಪದಾಧಿಕಾರಿಗಳಾದ ಪ್ರಶಾಂತ್ ಎಮ್, ಉಷಾ.ಎನ್.ಜಿ, ಅಸ್ಮಾ, ಮಮ್ತಾಜ್ ಬೇಗಂ, ಸಂದೀಪ್ ಡಿ’ಸೋಜಾ ಇವರನ್ನು ನಾರಾಯಣ ಸ್ವಾಮಿ ಶಾಲು ಹಾಕಿ ಗೌರವಿಸಿದರು.

ನಾರಾಯಣ ಸ್ವಾಮಿ ಭೇಟಿ ವೇಳೆ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ ಸ್ವಾಗತಿಸಿಕೊಂಡರು. ಜೊತೆಯಲ್ಲಿ ಸದಸ್ಯರಾದ ಮನೋಹನ್ ಕುಮಾರ್, ಪ್ರಶಾಂತ್ , ಶ್ರೀನಿವಾಸ್ ಗೌಡ, ವಸಂತ ಮರಕಡ, ಸೇವಿಯಾರ್ ಪಾಲೇಲಿ, ಉಷಾ, ಮಮ್ತಾಜ್ ಬೇಗಂ, ಶಿವಕುಮಾರ್, ಸ್ವರ್ಣ ಲತಾ, ನವಾಝ್, ಅಸ್ಮಾ, ಲತಾ ಭಾಗಿಯಾಗಿದ್ದರು.

Related posts

ಬೆಳ್ತಂಗಡಿ ವಕೀಲರ ಸಂಘದಿಂದ ನ್ಯಾಯಾಲಯದ ಕಟ್ಟಡ ಮಂಜೂರುಗೊಳಿಸುವಂತೆ ಬೆಂಗಳೂರಿನಲ್ಲಿ ಸಚಿವರುಗಳ ಭೇಟಿ

Suddi Udaya

ಬಿ.ವಿ.ಎಫ್. ಬೆಳ್ತಂಗಡಿ ತಾ. ಘಟಕದಿಂದ ’ಭಾರತೀಯ ಸಂವಿಧಾನ ದಿನಾಚರಣೆ’

Suddi Udaya

ಬೆಳ್ತಂಗಡಿ ನಗರದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆ: ರಾತ್ರೋ ರಾತ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿದ ನಾಗರೀಕರು

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕಾಂಗ್ರೇಸ್ ಪಕ್ಷದ ಚುನಾವಣಾ ಕಛೇರಿಯ ಉದ್ಘಾಟನೆ

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ : ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ

Suddi Udaya

ಕಾಶಿಪಟ್ಣ ಬಂಟರ ಗ್ರಾಮ ಸಮಿತಿಯ ಸಭೆ : ಸಮಿತಿ ರಚನೆ

Suddi Udaya
error: Content is protected !!