September 6, 2026
ಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಇಂಡಸ್ ಟವರ್ಸ್ ಕಾರ್ಮಿಕರ ನ್ಯಾಯಕ್ಕಾಗಿ ಭಾರತೀಯ ಮಜ್ದೂರು ಸಂಘದಿಂದ ದ.ಕ ಜಿಲ್ಲಾ ಸಂಸದರಿಗೆ ಮನವಿ

ಮಂಗಳೂರು: ಇಂಡಸ್ ಟವರ್ಸ್ ಲಿಮಿಟೆಡ್‌ನ ಒಪ್ಪಂದ ಆಧಾರಿತ ಕಂಪನಿಯಲ್ಲಿ ಹಲವು ತಿಂಗಳಿಂದ ವೇತನ, ಬೋನಸ್, ESI–PF ಹಾಗೂ ಇತರ ಕಾನೂನುಬದ್ಧ ಸವಲತ್ತುಗಳಿಂದ ವಂಚಿತರಾಗಿರುವ ಸುಮಾರು 150 ಗಿಂತ ಹೆಚ್ಚು ಕಾರ್ಮಿಕರ ಪರವಾಗಿ, ಭಾರತೀಯ ಮಜ್ದೂರು ಸಂಘ – ದಕ್ಷಿಣ ಕನ್ನಡ ಜಿಲ್ಲೆ ಇಂದು ಸಂಸದರ ಕಚೇರಿಗೆ ಭೇಟಿ ನೀಡಿ ಅವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಮಿಕರ ಗಂಭೀರ ಸಮಸ್ಯೆಯನ್ನು ವಿವರಿಸಿದ ಮನವಿಯನ್ನು BMS ಜಿಲ್ಲಾ ಸಮಿತಿಯು ಅಧಿಕೃತವಾಗಿ ಸಲ್ಲಿಸಿದ್ದು, ಕಾರ್ಮಿಕರ ವೇತನ ಬಾಕಿ, ಹಕ್ಕು ಉಲ್ಲಂಘನೆಗಳು ಹಾಗೂ ಕಂಪನಿಯ ಅಪರಾಧ ನಿರ್ಲಕ್ಷ್ಯಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಮನವಿ ಸ್ವೀಕರಿಸಿದ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಂಸದರಿಗೆ ಮನವರಿಕೆ ಮಾಡುತ್ತೇವೆ ಎಂದು ತಿಳಿದರು.

BMS ಜಿಲ್ಲಾ ತಂಡದಿಂದ ತಿಳಿಸಿರುವಂತೆ:“ಕಾರ್ಮಿಕರ ನ್ಯಾಯಕ್ಕಾಗಿ ಹೋರಾಡುವುದು ನಮ್ಮ ಸಂಘಟನೆಯ ನೈತಿಕ ಹಾಗೂ ಕಾನೂನುಬದ್ಧ ಕರ್ತವ್ಯ. ಇಂಡಸ್ ಟವರ್ಸ್ ಕಾರ್ಮಿಕರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸಲಿಕ್ಕಾಗದು. ನ್ಯಾಯ ಸಿಗುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ.

ಮನವಿ ಸಲ್ಲಿಕೆಯಲ್ಲಿ BMS ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು, BMS ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ ಉಜಿರೆ, ಜಿಲ್ಲಾ ಪ್ರಮುಖರಾದ ನಾರಾಯಣ ಪೂಜಾರಿ, ನವೀನ್ ಬಂಟ್ವಾಳ, BPTMS ಜಿಲ್ಲಾ ಅಧ್ಯಕ್ಷ ಯಶಪಾಲ್, ಕಾರ್ಯದರ್ಶಿ ಶಿವರಾಮ್ ಮತ್ತು BPTMS ಮಜ್ದೂರು ಸಂಘದ ನಾಯಕರೂ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಜ.2: ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 31ನೇ ವರ್ಷದ “ಜ್ಞಾನರಥ” ಮತ್ತು “ಜ್ಞಾನಪಥ” ಮೌಲ್ಯಧಾರಿತ ಪುಸ್ತಕಗಳ ರಾಜ್ಯಮಟ್ಟದ ವಿವಿಧ ಸ್ಪರ್ಧೆ ಹಾಗೂ ಪುರಸ್ಕಾರ ಸಮಾರಂಭ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಭಾರತ್ ಜೋಡೋ ಯುವ ಸಂಘದ ಉಸ್ತುವಾರಿಗಳ ನೇಮಕ

Suddi Udaya

ಫೆ.13: ವಿದ್ಯುತ್ ನಿಲುಗಡೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಅ. ಹಿ. ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Suddi Udaya

ಪ್ರತಿ ಮಂಗಳವಾರ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ‘ಗಣಹವನ’ ಸೇವೆ ಆರಂಭ

Suddi Udaya

ಸೆ.10: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಕಾರ್ಯಕ್ರಮ, ಮುದ್ದು ಕೃಷ್ಣ ಸ್ಪರ್ಧೆ, ವಿವಿಧ ಆಟೋಟ ಸ್ಪರ್ದೆಗಳು

Suddi Udaya
error: Content is protected !!