September 6, 2026
ಗ್ರಾಮಾಂತರ ಸುದ್ದಿ

ಸ್ಪಂದನ ಬಂಟರ ಸೇವಾ ತಂಡದ 50ನೇ ಯೋಜನೆಯಾಗಿ ಮನೆ ನಿರ್ಮಾಣ

ಬೆಳ್ತಂಗಡಿ: ಕಳೆದ 3 ವರ್ಷಗಳಿಂದ ಅಶಕ್ತ ಕುಟುಂಬಗಳಿಗೆ, ಅನಾರೋಗ್ಯಪೀಡಿತರಿಗೆ 10ಲಕ್ಷಕ್ಕೂ ಮಿಕ್ಕಿ ಧನಸಹಾಯ ಮಾಡಿರುವ ತಾಲೂಕು ಸ್ಪಂದನ ಬಂಟರ ಸೇವಾ ತಂಡವು, ಇದೀಗ ತನ್ನ 50ನೇ ಸೇವಾಯೋಜನೆಯಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಲು ಮುಂದಾಗಿದೆ.

ಓಡಿಲ್ಮಾಳ ಗ್ರಾಮದ ಕಟ್ಟದಬೈಲು ನಿವಾಸಿ ಗೀತಾ ಶೆಟ್ಟಿಯರಿಗೆ ಸ್ಪಂದನ ಸೇವಾ ತಂಡವು ಮನೆ ನಿರ್ಮಾಣ ಮಾಡಿಕೊಡುತ್ತಿದ್ದು ನ.21ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಯಮಿ ಶಶಿಧ‌ರ್ ಶೆಟ್ಟಿ ಬರೋಡ ನಡೆಸಿಕೊಟ್ಟರು. ಒಟ್ಟು 10ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದ್ದು ಬರುವ ಆರು ತಿಂಗಳ ಒಳಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸ್ಪಂದನ ಸೇವಾ ತಂಡದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ತಿಳಿಸಿದ್ದಾರೆ.ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ವಿಜಯ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ ಶೆಟ್ಟಿ ಕೊರಿಯಾರ್, ಬಂಟರ ಸಂಘದ ನಿರ್ದೇಶಕರಾದ ರಾಜು ಶೆಟ್ಟಿ ಬೆಂಗತ್ಯಾರು, ಆನಂದ ಶೆಟ್ಟಿ ಐಸಿರಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ, ಸ್ಪಂದನ ಬಂಟರ ಸೇವಾ ತಂಡದ ಶ್ರೀನಿವಾಸ್‌ ಶೆಟ್ಟಿ, ಓಡಿಲ್ನಾಳ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್‌ ಶೆಟ್ಟಿ ಸಂಬೊಲ್ಯ, ಉಪಾಧ್ಯಕ್ಷೆ ರಂಜಿತಾ ಶೆಟ್ಟಿ, ಗೀತಾ ಶೆಟ್ಟಿ.ಜನಾರ್ಧನ್ ಶೆಟ್ಟಿ ಪೆರಿಂದಲೆ ಉಪಸ್ಥಿತರಿದ್ದರು.
ವಿಠಲ್‌ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರ್ವಹಿಸಿದರು

Related posts

ರಾಜ್ಯ ಮಟ್ಟದ ಸ್ಪೆಲ್ ಬಿ ಸ್ಪರ್ಧೆ: ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ವಿದ್ಯಾರ್ಥಿ ಮೊಹಮ್ಮದ್ ಫಾಝಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಿಜಯ ಗೋಪುರ ಲೋಕಾರ್ಪಣೆಯ ಪೂರ್ವಾಭಾವಿ ಸಭೆ: ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಕೆ.ಪ್ರತಾಪಸಿಂಹ ನಾಯಕ್, ಕಾರ್ಯಾಧ್ಯಕ್ಷರಾಗಿ ಶಶಿಧರ ಶೆಟ್ಟಿ ನವಶಕ್ತಿ ಆಯ್ಕೆ : ದೇಶಕ್ಕೆ ಮಾದರಿಯಾಗಿ ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹರೀಶ್ ಪೂಂಜ

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವರ ‘ಅನಾರ್ದ ಐಸಿರಿ’ ಭಕ್ತಿಗೀತೆ ಬಿಡುಗಡೆ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

Suddi Udaya

ಪುಂಜಾಲಕಟ್ಟೆ – ಚಾಮಾ೯ಡಿ‌ ಹೆದ್ದಾರಿ ಕಾಮಗಾರಿ ಗುತ್ತಿಗೆಯಲ್ಲಿ ಬದಲಾವಣೆ: ಮೊಗ್ರೋಡಿ ಕನ್ ಸ್ಟ್ರಕ್ಷನ್ ಗೆ ನೀಡುವ ಕುರಿತು ನಿಧಾ೯ರ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ತರಬೇತಿ

Suddi Udaya
error: Content is protected !!