ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬೆಳ್ತಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಯವರಿಗೆ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳ್ತಂಗಡಿ ಸ್ಧಳೀಯ ಸಂಸ್ಥೆಯ ವತಿಯಿಂದ ಹುಟ್ಟು ಹಬ್ಬದ ಶುಭಾಶಯವನ್ನು ಕೋರಲಾಯಿತು.

ಈ ಸಂದರ್ಭದಲ್ಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಎಂಬುದು ಒಂದು ದೊಡ್ಡ ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ಯಾವುದೇ ಕಾರಣಕ್ಕೂ ಇದನ್ನು ಬಿಡದೆ ಸಾಧನೆ ಮಾಡಿ ನಿಮ್ಮ ವ್ಯಕ್ತಿತ್ವವನ್ನು ಉನ್ನತವಾಗಿ ರೂಪಿಸಿಕೊಳ್ಳಿ. ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರಾದ ಡಾ ಎಂ.ಮೋಹನ್ ಆಳ್ವರ ಸಾಧನೆ ಮಹತ್ವದ್ದು, ಪಿಲಿಕುಲದಲ್ಲಿ ಅವರು ನಿರ್ಮಿಸುತ್ತಿರುವ ಸ್ಕೌಟ್ ಗೈಡ್ ತರಬೇತಿ ಕೇಂದ್ರವನ್ನು ನೋಡಿ ನನಗೆ ತುಂಬಾ ಅಚ್ಚರಿಯಾಗುತ್ತದೆ. ಅವರ ಕೆಲಸ ಸರ್ವರಿಗೂ ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಉಪಸ್ಥಿತರಿದ್ದ ರೋವರ್ ವಿದ್ಯಾರ್ಥಿಗಳಿಗೆ ಜೀವನದುದ್ದಕ್ಕೂ ಸ್ಕೌಟ್ ನಲ್ಲಿ ಮುಂದುವರೆಯುವಂತೆ ಹುರಿದುಂಬಿಸಿ ಶುಭ ಹಾರೈಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪ್ರಮೀಳಾ ಪೂಜಾರಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು, ಉಜಿರೆಯ ರೋವರ್ ಸ್ಕೌಟ್ ಲೀಡರ್ ಲಕ್ಷ್ಮೀಶ ಪಿ ಭಟ್ ಹಾಗೂ ರೋವರ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

Suddi Udaya

ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ

Suddi Udaya

ವೇಣೂರು: ಅಕ್ರಮವಾಗಿ ಗಾಂಜಾ ಸಾಗಾಟ,ಆರೋಪಿ ಬಂಧನಮೋಟಾರ್ ಸೈಕಲ್ ಹಾಗೂ ರೂ. 37 ಸಾವಿರದ 500 ಗ್ರಾಂ ಗಾಂಜಾ ವಶ ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ರವರ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya

ಮುಂಡಾಜೆ ಯುವವಾಹಿನಿ ಸಂಚಲನಾ ಸಮಿತಿಯ ಪದಗ್ರಹಣ, ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ 3 ನೇ ವರ್ಷದ ಪಾದರ್ಪಣೆಯ ಸಂಭ್ರಮಾಚರಣೆ

Suddi Udaya

ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 101 ಎಳನೀರು ಅಭಿಷೇಕ, ನವಕ ಕಲಶ ಅಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!