September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು: ನೆಕ್ಕಿಲು ಶಾಲಾ ಮುಖ್ಯ ಶಿಕ್ಷಕ ಬಿ . ಎಸ್ . ಬಿರಾದಾರ್ ಬೀಳ್ಕೊಡುಗೆ ಸಮಾರಂಭ

ಉರುವಾಲು : ದ.ಕ. ಜಿ.ಪಂ. ಕಿ . ಪ್ರಾ . ಶಾಲೆ ನೆಕ್ಕಿಲು ಇಲ್ಲಿನ ಮುಖ್ಯ ಶಿಕ್ಷಕರಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಖ್ಯ ಶಿಕ್ಷಕ ಬಿ . ಎಸ್ . ಬಿರಾದಾರ್ ಇವರ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು .

ಅಧ್ಯಕ್ಷತೆಯನ್ನು ಎಸ್ . ಡಿ .ಎಂ .ಸಿ ಅಧ್ಯಕ್ಷ ಅಬ್ದುಲ್ ಶರೀಫ್ ವಹಿಸಿದ್ದರು. ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ್ ಮಡಿವಾಳ ಮಾತನಾಡುತ್ತಾ ಬಿರಾದಾರ್ ಒಬ್ಬರು ಈ ಶಾಲೆಯಲ್ಲಿ 21 ವರ್ಷ ಶಿಕ್ಷಕರಾಗಿ ಅನುಪಮಾ ಸಾಧನೆ ಮಾಡಿ ಊರವರ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ ಎಂದರು.

ವೇದಿಕೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಪ್ರಭಾಕರ ಹೆಗ್ಡೆ ಮಸೀದಿಯ ಮುಖ್ಯ ಗುರುಗಳಾದ ಉಮರುಲ್ ಫಾರೂಕ್ ಸಖಾಫಿ , ಊರ ದಾನಿಗಳಾದ ಪದ್ಮನಾಭ ಶಿಲ್ಪಿಗಳು, ನಿರುಪಮ .ಎಸ್ .ಆಳ್ವ ,ಕಾಸಿಮ್ ಬಳ್ಳಿ ,ಹನೀಫ್ ಮಿಸ್ಟಾ ಯಿ , ಗ್ರಾ. ಪಂಚಾಯತು ಸದಸ್ಯರಾದ ಸುಮತಿ ಜನಾರ್ಧನ ,ಮಾಜಿ ಎಸ್ ಡಿ.ಎಂ.ಸಿ ಸದಸ್ಯರಾದ ಜಯರಾಮ ನಾಯ್ಕ, ಜನಾರ್ದನ ನಾಯ್ಕ, ವಾಸಪ್ಪ ಗೌಡ, ಮೈ ರೋಳ್ತಡ್ಕ ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರವತಿ, ಸಿ.ಆರ್ . ಪಿ, ಮೊಹಮ್ಮದ್ ಶರೀಫ್ ಕೆ .ಸಿ .ಮಾಜಿ ಸಿ.ಆರ್ . ಪಿ. ಸಂಧ್ಯಾ, ಕುಪ್ಪೆಟ್ಟಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವನಿತ, ಪುತ್ತಿಲ ಮುಖ್ಯ ಶಿಕ್ಷಕರಾದ ಶಿವಸ್ವಾಮಿ, ಪಿಲಿಗೋಡು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಕ್ಕಿ ಮಾಜಿ ಪಂಚಾಯತ್ ಸದಸ್ಯರಾದ ಅಬ್ದುಲ್ ಸುಕುರು, ಸಮಾಜ ಸೇವಕರಾದ ತಣ್ಣೀರುಪಂತ ಸಿ.ಎ ಬ್ಯಾಂಕ್ ನಿರ್ದೇಶಕರಾದ ಸುರೇಶ್ ಎಚ್ ಎಲ್ ಉಪಸ್ಥಿತರಿದ್ದರು .

ಶ್ರೀಮತಿ ಚಂದ್ರಕ್ಕಿ ಬಿರಾದಾರ್ ಶಿಕ್ಷಕ ದಂಪತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಊರಿನ ಗಣ್ಯರಾದ ಯಶೋಧರ ಎಚ್, ಸುಂದರಿ, ಭಾರತಿ .ಕೆ .ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ,ಹಳೆ ವಿದ್ಯಾರ್ಥಿಗಳು, ಕುಪ್ಪೆಟ್ಟಿ ಮತ್ತು ಕರಾಯ ಕ್ಲಸ್ಟರ್ ನ ಶಿಕ್ಷಕರು, ಉಪಸ್ಥಿತರಿದ್ದರು.


ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಮುಖ್ಯ ಶಿಕ್ಷಕರಾದ ಸಂಧ್ಯಾ ರಾಣಿ .ಕೆ. ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಲೀಲಾವತಿ. ಡಿ. ಎಸ್. ನಿರೂಪಿಸಿ, ಗೌರವ ಶಿಕ್ಷಕಿಯಾದ ವಿನಯ ವಂದನಾರ್ಪಣೆಗೈದರು

Related posts

ಕಲ್ಮಂಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಕಾರ್ಯಕ್ರಮ

Suddi Udaya

ಉರುವಾಲು ಸಿಡಿಲು ಬಡಿದು ಹಾನಿಯಾದ ಸೇಸಪ್ಪ ಗೌಡರ ಮನೆಗೆ ಕಣಿಯೂರು ಗ್ರಾ.ಪಂ. ನಿಂದ ಭೇಟಿ, ಪರಿಶೀಲನೆ

Suddi Udaya

ಧರ್ಮಸ್ಥಳ: ಸಂತಾನಪ್ರದ ನಾಗಕ್ಷೇತ್ರದಲ್ಲಿ ಶ್ರೀ ನಾಗದೇವರ ಬಿಂಬ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠೆ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ: ಹೊರೆಕಾಣಿಕೆ ಸಮರ್ಪಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕೋಚಿಂಗ್ ಅಕಾಡೆಮಿಯಲ್ಲಿ ವಾರಾಂತ್ಯದ ತರಗತಿ

Suddi Udaya

ಕಲ್ಮಂಜ : ಗುರಿಪಳ್ಳ ನಿವಾಸಿ ಮೇಸ್ತ್ರಿ ನಾರಾಯಣ ಮೂಲ್ಯ ನಿಧನ

Suddi Udaya

ಆಪರೇಷನ್ ಸಿಂಧೂರ: ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಪ್ರಾಥ೯ನೆ

Suddi Udaya
error: Content is protected !!