23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ನಡ – ಕನ್ಯಾಡಿ ಶಕ್ತಿ ಕೇಂದ್ರ ಕಾರ್ಯಾಗಾರ


ಬೆಳ್ತಂಗಡಿ :ಲಾಯಿಲ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಡ – ಕನ್ಯಾಡಿ ಗ್ರಾಮಗಳ ಶಕ್ತಿ ಕೇಂದ್ರ ಕಾರ್ಯಾಗಾರವು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಕಾಶ್ ಜೈನ್ ಎಳನೀರು ಇವರ ಅಧ್ಯಕ್ಷತೆಯಲ್ಲಿ ನ 30ರಂದು ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಜರುಗಿತು.


ಈ ಕಾರ್ಯಾಗಾರದಲ್ಲಿ ಪಕ್ಷದ ಜಿಲ್ಲೆಯ ಕಾರ್ಯದರ್ಶಿಗಳಾದ ಸೀತಾರಾಮ್ ಬೆಲಾಳ್ ಭಾಗವಹಿಸಿ ಪಕ್ಷ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಮಂಡಲದ ಉಪಾಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಭಾರಿಗಳಾದ ಸದಾನಂದ ಉಂಗಿಲ ಬೈಲು ಮುಂಬರುವ ಚುನಾವಣೆಗಳ ತಯಾರಿ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಮಂಡಲದ ಕೋಶಾಧಿಕಾರಿಗಳಾದ ಜಯಂತ್ ಗೌಡ ಗುರಿಪಳ್ಳ, ತಾಲೂಕು ಎಸ್ ಸಿ ಮೋರ್ಚದ ಅಧ್ಯಕ್ಷರಾದ ಈಶ್ವರ ಭೈರ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದಕುಮಾರ್ ಲಾಯಿಲ ಉಪಸ್ಥಿತರಿದ್ದರು. ಶಕ್ತಿ ಕೇಂದ್ರದ ಪ್ರಮುಖರಾದ ವಿಜಯ ಗೌಡ ಸ್ವಾಗತಿಸಿ ಧನ್ಯವಾದವಿತ್ತರು.
ಈ ಸಂದರ್ಭ ನಡ ಪಂಚಾಯತ್ ಅಧ್ಯಕ್ಷರಾದ ಮಂಜುಳಾ, ಪಂಚಾಯತ್ ಸಧಸ್ಯರುಗಳು, ಬೂತ್ ಅಧ್ಯಕ್ಷ ಕಾರ್ಯದರ್ಶಿ ಸದಸ್ಯರುಗಳು, ca ಬ್ಯಾಂಕ್ ಹಾಲಿನ ಸೊಸೈಟಿ ನಿರ್ದೇಶಕರು ಗಳು,ಹಿರಿಯರು ಹಾಗೂ ಪಕ್ಷದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.

Related posts

ಸುರತ್ಕಲ್ ನಲ್ಲಿ ದ.ಕ. ಜಿಲ್ಲೆಯ ಒಂಭತ್ತನೆಯ ಗಮಕ ಕಲಾ ಸಮ್ಮೇಳನ: ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗಮಕಿ ಯಜ್ಞೇಶ್ ಆಚಾರ್ ಸುರತ್ಕಲ್ ಆಯ್ಕೆ

Suddi Udaya

ಉಡುಪಿಯ ಮಧ್ವ ನವರಾತ್ರೋತ್ಸವದಲ್ಲಿ ವಿದ್ವಾನ್ ರಾಘವೇಂದ್ರ ಭಟ್ ಲಕ್ಷ್ಮೀ ನರಸಿಂಹ ಮಠ ಮದ್ದಡ್ಕ ರವರಿಗೆ ಸನ್ಮಾನ

Suddi Udaya

ಹೆಣ್ಣು ಮಕ್ಕಳ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಅರಣ್ಯ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಭಜನಾ ಪರಿಷತ್ ರಾಜ್ಯಾಧ್ಯಕ್ಷರು ಮತ್ತು ತಾಲೂಕು ಪದಾಧಿಕಾರಿಗಳು

Suddi Udaya

ತೆಂಕಕಾರಂದೂರು: ವರ ಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ, ಅಧ್ಯಕ್ಷರಾಗಿ ರೂಪಲತಾ ಆಯ್ಕೆ

Suddi Udaya

ಇಳಂತಿಲ ಗ್ರಾ.ಪಂ.ನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ : ಸದಸ್ಯರಿಂದ ಅಧ್ಯಕ್ಷರ ವಿರುದ್ಧ ಮತಚಲಾವಣೆ

Suddi Udaya

25 ಕೋಟಿ ವೆಚ್ಚದಲ್ಲಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ: ಮುಂದಿನ ಮಾರ್ಚ್ ತಿಂಗಳಿನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಂಕಲ್ಪ

Suddi Udaya
error: Content is protected !!