July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಮಹಾಸಭೆ ಹಾಗೂ ತರಬೇತಿ

ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಿಂದ ನಡೆಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿರುವ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಇದರ ಮಹಾಸಭೆ ಮತ್ತು ತರಬೇತಿಯನ್ನು ಸಾನ್ ತೋಮ್ ಟವರ್ ಬೆಳ್ತಂಗಡಿ ಇಲ್ಲಿ ಡಿ.02 ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹಜ್ಯೋತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಜೋನ್ ವಹಿಸಿದ್ದರು. ಹಿಂದಿನ ಸಭೆಯ ವರದಿಯನ್ನು ಮತ್ತು ಪ್ರಸ್ತುತ ವರ್ಷದಲ್ಲಿ ನಡೆಸಿದ ಕೆಲಸ ಕಾರ್ಯಗಳ ವರದಿಯನ್ನು ಸ್ನೇಹ ಜ್ಯೋತಿ ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ಉಷಾರವರು ಮಂಡಿಸಿದರು. 2024-2025 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸ್ನೇಹ ಜ್ಯೋತಿ ಒಕ್ಕೂಟದ ಖಜಾಂಚಿ ಶ್ರೀಮತಿ ಎಲಿಯಮ್ಮ ತೋಮಸ್ ಮಂಡಿಸಿದರು. ಹಿಂದಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ವಂದನೀಯ ಫಾದರ್ ಜೋಸ್ ಆಯಾಂಕುಡಿ ಇವರು ಧರ್ಮ ಗುರುಗಳಾಗಿ 25 ವರ್ಷ ಪೂರೈಸಿದ ನೆನಪಿಗಾಗಿ ಸನ್ಮಾನ ಮಾಡಿ ಅಭಿನಂದಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ವಿನ್ಸೆಂಟ್ ಡಿಸೋಜ, ಜೀವ ವಿಮಾ ಅಭಿವೃದ್ಧಿ ಅಧಿಕಾರಿ, ಇವರು ಜೀವ ವಿಮೆ, ವಾಹನ ವಿಮೆ, ಆರೋಗ್ಯ ವಿಮೆ ಮತ್ತು ಅಪಘಾತ ವಿಮಾ ಸೌಲಭ್ಯಗಳ ಬಗ್ಗೆ ತರಬೇತಿ ನೀಡಿದರು.

ಡಿ.ಕೆ.ಆರ್.ಢಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ರವರು ಒಕ್ಕೂಟದ ಬಲವರ್ಧನೆಗಾಗಿ ಪ್ರತಿ ಯೊಬ್ಬ ಸದಸ್ಯರು ಜವಾಬ್ದಾರಿಯುತವಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಉದಯ ಮಹಾಸಂಘ ಗಂಡಿಬಾಗಿಲು ಇದರ ಕಾರ್ಯದರ್ಶಿ ಶ್ರೀಮತಿ ಮಿನಿ ಸ್ವಾಗತಿಸಿದರು. ಅರುಣೋದಯ ಮಹಾಸಂಘದ ಸದಸ್ಯೆ ಶ್ರೀಮತಿ ಸಾಲಿ ವಂದಿಸಿದರು. ಅರುಣೋದಯ ಮಹಾ ಸಂಘದ ಸದಸ್ಯರು ಪ್ರಾರ್ಥನೆಯನ್ನು ಹಾಡಿದರು. ಸ್ನೇಹ ಜ್ಯೋತಿ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಜಿನ್ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Related posts

ಕೊಯ್ಯೂರು: ಸ.ಪ್ರೌ. ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಉದ್ಘಾಟನೆ

Suddi Udaya

ಚಾರ್ಮಾಡಿ : ಅನ್ನಾರ್ ನದಿಯ ಸೇತುವೆಯ ಅಡಿಯಲ್ಲಿ ದನದ ತಲೆ ಸೇರಿದಂತೆ ಅವಶೇಷಗಳು ಪತ್ತೆ

Suddi Udaya

ಉಜಿರೆಯಿಂದ ಸೋಮಂತಡ್ಕ ಪ್ರಯಾಣ ಸಂದರ್ಭ ಕಳೆದು ಹೋದ ರೂ.2. 80 ಲಕ್ಷ ಹಣವಿದ್ದ ಬ್ಯಾಗ್: ಕೊರಗಜ್ಜನ ಮೊರೆ ಹೋದ ಬ್ಯಾಗ್ ಕಳೆದು ಕೊಂಡ‌ ಲತೇಶ್ ಉಜಿರೆ

Suddi Udaya

ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ರಾಜ ಕೇಸರಿ ಸಂಘಟನೆಯಿಂದ ಸ್ವಚ್ಛತಾ ಕಾರ್ಯ

Suddi Udaya

ಮುಳಿಯ ಜ್ಯುವೆಲ್ಸ್ ನಿಂದ ನೀಟ್ ಸಾಧಕ ಎಕ್ಸೆಲ್ ವಿದ್ಯಾರ್ಥಿ ಪ್ರಜ್ವಲ್ ಹೆಚ್.ಎಂ ರಿಗೆ ಗೌರವಾರ್ಪಣೆ

Suddi Udaya

ಗುರುವಾಯನಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ವೇದವ್ಯಾಸ ಶಿಶುಮಂದಿರ ಹಾಗೂ ಬಾಲಗೋಕುಲದ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ

Suddi Udaya
error: Content is protected !!