September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಶಿಲಾಮಯ ಧ್ವಜಸ್ತಂಭದ ಶೋಭಾಯಾತ್ರೆಗೆ ಉಜಿರೆಯಲ್ಲಿ ಗಣ್ಯರಿಂದ ಚಾಲನೆ

ಉಜಿರೆ: ಇತಿಹಾಸ ಪ್ರಸಿದ್ಧ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಶ್ರೀಮತಿ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಉಜಿರೆಗೆ ತಲುಪಿದ್ದು ಇದರ ಶೋಭಾಯಾತ್ರೆಗೆ ಡಿ.4ರಂದು ಮಧ್ಯಾಹ್ನ 3.30 ಸಂದರ್ಭ ಉಜಿರೆಯಲ್ಲಿ ವಿವಿಧ ಗಣ್ಯರು ಸ್ವಾಗತಿಸಿ, ಚಾಲನೆ ನೀಡಿದರು.

ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ರವರು ಮಾಲಾರ್ಪಣೆ ಮಾಡಿ, ಹೀಡು ಕಾಯಿ ಒಡೆದು ಚಾಲನೆ ನೀಡಿದರು. ಪಜಿರಡ್ಕ ದೇವಸ್ಥಾನದ ಅರ್ಚಕರು ಪೂಜಾ ವಿಧಾನಗಳನ್ನು ಪೂರೈಸಿದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಎಂ ನಾಗೇಶ್‌ ಕುಮಾರ್ ಗೌಡ, ಉಜಿರೆ ಮಹಾವೀರ ಏಜೆನ್ಸಿ ಮಾಲಕ ಪ್ರಭಾಕರ್ ಜೈನ್, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಉಜಿರೆ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ಉದ್ಯಮಿ ಮೋಹನ್ ಶೆಟ್ಟಿಗಾರ್, ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ,ಸುನಿಲ್ ಕನ್ಯಾಡಿ, ಹುಕುಂ ರಾಮ್ ಪಟೇಲ್, ರವಿ ಭಟ್ ಕಲ್ಮಂಜ, ಶಶಿಧರ್ ಕಲ್ಮಂಜ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಮಿತಾ ಪೂಜಾರಿ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನೀಲ್ ಕನ್ಯಾಡಿ, ತುಕಾರಾಮ್ ಸಾಲಿಯಾನ್, ರವಿ ಭಟ್ ಕಲ್ಮಂಜ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

Related posts

ಬದ್ಯಾರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಮಂಗಳೂರಿನ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಇವರ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದಿಂದ ಹೊರಕಾಣಿಕೆ ಸಮರ್ಪಣೆ

Suddi Udaya

ಭಾರೀ ಹದಗೆಟ್ಟ ಕಳಿಯ ದೇರ್ಜಾಲು ರಸ್ತೆ: ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ

Suddi Udaya

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya
error: Content is protected !!